Advertisement

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಲಿಪ್ ಲಾಕ್

03:37 PM Aug 14, 2021 | Team Udayavani |

ಮುಂಬೈ : ಹಿಂದಿ ಬಿಗ್ ಬಾಸ್ ನ ಈ ಮೊದಲಿನ ಹಲವು ಸೀಸನ್ ಗಳು ವಿವಾದಕ್ಕೆ ಗುರಿಯಾಗಿದ್ದವು. ಅದಕ್ಕೆ ಕಾರಣ ಹಸಿಬಿಸಿ ದೃಶ್ಯಗಳು ಹಾಗೂ ಲೂಸ್ ಟಾಕ್ ಗಳು. ಇದೀಗ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನಲ್ಲಿಯೂ ಇದೇ ದೃಶ್ಯಗಳು ಕಂಡು ಬಂದಿವೆ.

Advertisement

ಬಿಗ್ ಬಾಸ್ ಮನೆಯಲ್ಲಿಯರುವ ಗಾಯಕಿ ನೇಹಾ ಭಾಸೀನ್ ಅವರು ನಟಿ ರಿಧಿಮಾ ಪಂಡಿತ್​ ತುಟಿಗೆ ಮುತ್ತಿಟ್ಟಿದ್ದಾರೆ. ಈ ಸ್ಪರ್ಧಿಗಳ ಲಿಪ್ ಲಾಕ್ ದೃಶ್ಯ ಇದೀಗ ವೀಕ್ಷಕರ ವರ್ಗದಲ್ಲಿ ಹಾಟ್ ಟಾಫಿಕ್ ಆಗಿದೆ.

ಟಾಸ್ಕ್ ಸಲುವಾಗಿ:

ಸ್ಪರ್ಧಿಗಳನ್ನು ಎರಡು ಟೀಮ್​ಗಳನ್ನಾಗಿ ವಿಭಾಗಿಸಲಾಗಿದೆ. ಒಂದು ಟೀಮ್​ನವರು ಸ್ಟಾಚ್ಯೂ (statue) ರೀತಿ ನಿಂತುಕೊಳ್ಳಬೇಕು. ಅವರನ್ನು ಕದಡಿಸಲು ಇನ್ನೊಂದು ಟೀಮ್​ನವರು ಪ್ರಯತ್ನಿಸಬೇಕು. ಈ ವೇಳೆ ಸ್ಪರ್ಧಿಗಳು ಅನೇಕ ಕಸರತ್ತುಗಳನ್ನು ಮಾಡಿದ್ದಾರೆ. ನಟಿ ರಿಧಿಮಾ ಪಂಡಿತ್​ ಅವರ ಏಕಾಗ್ರತೆಯನ್ನು ಕೆಡಿಸಲು ನೇಹಾ ಭಾಸೀನ್​ ಪ್ರಯತ್ನ ಪಟ್ಟರು. ಅದಕ್ಕಾಗಿ ಅವರ ತುಟಿಗೆ ಕಿಸ್ ಮಾಡಿದರು.

Advertisement

ಇನ್ನು ಈ ಬಾರಿಯ ಬಿಗ್ ಬಾಸ್ ಫುಲ್ ಹೈಫ್ ಮತ್ತು ಹೀಟ್ ಕ್ರಿಯೆಟ್ ಮಾಡುತ್ತದೆ ಎಂದು ಪ್ರೋಮೊವೊಂದರಲ್ಲಿ ನಿರ್ಮಾಪಕ ಹಾಗೂ ನಿರೂಪಕದ ಕರಣ್ ಜೋಹರ್ ಹೇಳಿದ್ದರು. ಅವರ ಮಾತಿನಂತಿಯೆ ಇದೀಗ ಬಿಗ್ ಮನೆಯಲ್ಲಿ ಚುಂಬನ ನಡೆದಿದ್ದು, ಸೆನ್ಸಾರ್ ಇಲ್ಲದೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಏನೇನು ನಡೆಯಲಿದೆಯೋ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next