ಇಂದಿನ ದಿನಗಳಲ್ಲಿ ದೇಶ ಕಾಯುವ ಸೈನಿಕ ಎಂದರೆ ಸಾಕು ಭಾರತೀಯರ ರೋಮಗಳು ನಿಮಿರಿ ನಿಲ್ಲುತ್ತವೆ, ಮೈ ಪುಳಕಗೊಳ್ಳುತ್ತದೆ. ಎಲ್ಲರಲ್ಲೂ ದೇಶಪ್ರೇಮ ಸೆಟೆದೆದ್ದಿರುವ ಈ ದಿನಗಳಲ್ಲಿ ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲು ಅವಕಾಶ ಮಾಡಿಕೊಡುವ ಕಾರ್ಯಕ್ರಮವೊಂದು ನಗರದಲ್ಲಿ ಆಯೋಜನೆಯಾಗಿದೆ. ಸೈನಿಕರೊಡನೆ ಮ್ಯಾರಾಥಾನ್ ಓಡುವ “ರನ್ ವಿತ್ ಜವಾನ್’ ಕ್ರೀಡಾ ಕಾರ್ಯಕ್ರಮವಿದು. ನಗರದ ಪಿ.ಇ.ಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗುಂಪು “ಸಮರ್ಪಣಾ’ ಈ ಮ್ಯಾರಾಥಾನ್‌ಅನ್ನು ಕಳೆದ 5 ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ದೇಶಕ್ಕಾಗಿ ಮಡಿದ ಸೈನಿಕರ ಕುಟುಂಬದವರಿಗೆ ನೀಡಲಾಗುವುದು. ಮ್ಯಾರಾಥಾನ್ ಓಟ 21ಓ, 10ಓ ಮತ್ತು 5ಓ ವಿಭಾಗಗಳಲ್ಲಿ ನಡೆಯಲಿದೆ. ಮೊದಲ ಬಾರಿ ಸುಮಾರು 1800 ಮಂದಿ ಬೆಂಗಳೂರಿಗರು 300 ಸೈನಿಕರ ಜೊತೆ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದರು. ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಹುತಾತ್ಮ ಯೋಧರ ಕುಟುಂಬಗಳಿಗೆ 25 ಲಕ್ಷಕ್ಕೂ ಹೆಚ್ಚಿನ ಧನಸಹಾಯ ಮಾಡಲಾಗಿದೆ. ಮ್ಯಾರಾಥಾನ್ ಜೊತೆಗೆ ಜನಸಾಮಾನ್ಯರ ಶುಭಾಶಯ ಸಂದೇಶಗಳನ್ನು ಸಂಗ್ರಹಿಸಿ ಸೈನಿಕರಿಗೆ ತಲುಪಿಸುವ “ಶುಕ್ರಿಯಾ’ ಕಾರ್ಯಕ್ರಮ ನಡೆಯಲಿದೆ. ನಗರದ 5 ಪ್ರಮುಖ ಮಾಲ್‌ಗಳಲ್ಲಿ ಸಮ ರ್ಪಣಾ ತಂಡದ ಸದಸ್ಯರು ಸಂದೇಶಗಳನ್ನು ಸಂಗ್ರಹಿಸಲಿದ್ದಾರೆ
ಎಲ್ಲಿ?: ಪಿ.ಇ.ಎಸ್ ಯುನಿವರ್ಸಿಟಿ ಕ್ಯಾಂಪಸ್, 100 ಅಡಿ ರಸ್ತೆ, ಬನಶಂಕರಿ 3ನೇ ಹಂತ
ಯಾವಾಗ?:ಮಾ . 24, ಬೆಳಗ್ಗೆ 5
ಜೀವನದ ಚಿಕ್ಕಪುಟ್ಟ ಸಂಗತಿಗಳಲ್ಲೂ ಸಂತಸ ಕಾಣುವುದನ್ನು ಇದರಿಂದ ಕಲಿತಿದ್ದೇನೆ.
ನಂದೀಶ್, ಹಳೆ ವಿದ್ಯಾರ್ಥಿ, ಸಮರ್ಪಣಾಸಹಸ್ಥಾಪಕ