Advertisement
ಭಾರತ ಸರಕಾರದ ಅಧೀನ ಸಂಸ್ಥೆ ಎಫ್‌ಎಸ್‌ಎಸ್‌ಎಐ (ಫುಡ್ ಸೇಫ್ಟಿ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ) ಈ ವಿಷಕಾರಿ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಇದೀಗ ನಾಗರಿಕರಲ್ಲಿ ಜಾಗರೂಕತೆ ಪಾಲಿಸಲು ಕರೆ ಇತ್ತಿದೆ. ಈ ಸಂಸ್ಥೆ ತಿಳಿಸುವ ಮಾಹಿತಿ ಇಷ್ಟು : ಕ್ಯಾಲ್ಸಿಯಂ ಕಾರ್ಬೈಡ್ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ರಾಸಾಯನಿಕ. ಇದು ಆರ್ಸೆನಿಕ್ ಹಾಗೂ ಫಾಸ್ಪರಸ್ ಅಂಶಗಳನ್ನು ಒಳಗೊಂಡಿದ್ದು, ನೀರಿನೊಂದಿಗೆ ಬೆರೆತಾಗ ಅಸೆಟಿಲೀನ್ ಅನಿಲವನ್ನು (ಕಾರ್ಬೈಡ್ ಅನಿಲ) ಉತ್ಪಾದಿಸುತ್ತದೆ.
Related Articles
Advertisement
ಪನೀರ್ ಕೋವಾ ಕಂಡೆನ್ಸ್$x ಹಾಲು ಮತ್ತು ಹಾಲು – ಇವುಗಳಲ್ಲಿ ಕಲಬೆರಕೆ ಯಾಗುವ ವಸ್ತು ಪಿಷ್ಟ. ಇದು ಆಹಾರ ವಸ್ತುಗಳಲ್ಲಿರುವ ಪೋಷಕಾಂಶಗಳನ್ನು ತಗ್ಗಿಸುತ್ತದೆ ಮತ್ತು ಹೊಟ್ಟೆಯ ಅಸ್ವಸ್ಥತೆ ಉಂಟು ಮಾಡುತ್ತದೆ. ಐಸ್ ಕ್ರೀಂನ ಕಲಬೆರಕೆ ವಸ್ತುಗಳು – ಪೆಪ್ಪಾರಾನಿಲ್, ಇಥೈಲ್ ಎಸಿಟೇಟ್, ಎಮಿಲ್ ಎಸಿಟೇಟ್, ನೈಟ್ರೇಟ್, ವಾಷಿಂಗ್ ಪೌಡರ್ ಇತ್ಯಾದಿ. ಪೆಪ್ಪರಾನಿಲ್ ಕೀಟನಾಶಕವಾಗಿ ಬಳಸುತ್ತಾರೆ. ಇಥೈಲ್ ಅಸಿಟೇಟ್ ಪಿತ್ತಕೋಶ, ಮೂತ್ರ ಪಿಂಡಗಳು ಮತ್ತು ಹೃದಯದ ಮೇಲೆ ಪರಿಣಾಮ ಉಂಟು ಮಾಡುತ್ತದೆೆ. ಐಸ್‌ಕ್ರೀಂ ಅನ್ನು ವಿಶೇಷವಾದ ತಂಪು ಕೋಣೆಯಲ್ಲಿ ತಯಾರಿಸುತ್ತಾರೆ. ಅಲ್ಲಿ ಕೊಬ್ಬನ್ನು ಘನೀಕರಿಸಲಾಗುತ್ತದೆ ಮತ್ತು ಅನೇಕ ಅಪಾಯಕಾರಿ ವಸ್ತುಗಳನ್ನು ಸೇರಿಸಲಾಗುತ್ತದೆ.
ಕಾಫಿ ಹುಡಿಯ ಕಲಬೆರಕೆ ಅಂದರೆ ಹುಣಸೆ ಬೀಜ, ಚಿಕೋರಿ ಪೌಡರ್. ಇದು ತೂಕ ಹೆಚ್ಚಿಸಲು ಮತ್ತು ಬಣ್ಣ ಹೆಚ್ಚಿಸಲು ಇರುವ ಉಪಾಯ. ಆದರೆ ಇದರಿಂದ ಅತಿಸಾರ, ಹೊಟ್ಟೆಯ ಅಸ್ವಸ್ಥತೆ, ತಲೆ ತಿರುಗುವುದು. ತೀವ್ರ ಸಂಧಿ ನೋವು ಉಂಟಾಗುವುದು. ಕಲಬೆರಕೆಯಲ್ಲಿ ಅಮಾನವೀಯ ಅಂದರೆ ಜೆಲ್ಲಿಗಳು ಮತ್ತು ಸಿಹಿ ತಿನಿಸುಗಳಲ್ಲಿ ವಿಷಕಾರಕ ಬಣ್ಣಗಳನ್ನು ಉಪಯೋಗಿಸುವುದು. ಮಕ್ಕಳನ್ನು ಸೆಳೆಯಲು ಬಳಸುವ ಈ ದಟ್ಟ ಬಣ್ಣಗಳಲ್ಲಿ ಸೀಸ, ತಾಮ್ರ, ಅಥವಾ ಪಾದರಸ ತುಂಬಿರುತ್ತದೆ.
ಉಪ್ಪಿನ ಕಾಯಿಗಳು ಮತ್ತು ಕ್ಯಾನ್x ತರಕಾರಿಗಳಿಗೆ ತಾಜಾತನಕ್ಕಾಗಿ ಕಾಪರ್ ಲವಣ, ಬೇಕರಿ ತಿನಸುಗಳಲ್ಲಿ ಅಪಾಯಕಾರಿ ಬಣ್ಣಗಳಾದ ಕ್ರೋಮ್ ಯೆಲ್ಲೋ, ಪ್ರುಶಿಯನ್ ಬ್ಲೂ. ಕಾಪರ್ ಮತ್ತು ಆರ್ಸೆನಿಕ್ ಸಂಯುಕ್ತಗಳು, ಕೆನೆಗೆ ಜೆಲೆಟಿನ್ ಅನ್ನು ಬೆರೆಸಿ ಸಂರಕ್ಷಿಸಿಡಲು ಫಾರ್ಮಾಲ್ಡಿಹೈಡ್ ಬೆರೆಸುತ್ತಾರೆ. ಬೆಣ್ಣೆಯಲ್ಲಿ ಆಲಿಗೋಮಾರ್ಜರಿನ್ ಸೇರಿಸುತ್ತಾರೆ.
ಇದು ಹಂದಿಯ ಕೊಬ್ಬಿನಿಂದ ಮಾಡಿದ ಉತ್ಪನ್ನ. ಮೀನು ತಾಜಾವಾಗಿ ಇರುವಂತೆ ಫಾರ್ಮಾಲಿನ್ ಬಳಕೆ ಮಾಡಲಾಗುತ್ತಿದೆ.
ಹಾಲು ಅತ್ಯಂತ ಹೆಚ್ಚು ಕಲುಷಿತವಾಗುವ ಉತ್ಪನ್ನ. ದನ ಅಥವಾ ಎಮ್ಮೆಯ ಅಗತ್ಯವೇ ಇಲ್ಲದೆ ಡಿಟರ್ಜೆಂಟ್, ಯೂರಿಯಾ, ಕಳಪೆ ಎಣ್ಣೆ ಬಳಸಿ ಹಾಲನ್ನು ಉತ್ಪಾದಿಸಿ ಮಾರುಕಟ್ಟೆಗೆ ತಲುಪಿಸಿರುವುದೂ ನಡೆದಿದೆ.
ಸಮಯ ಕಳೆದಂತೆ ಕಲಬೆರಕೆ ಮತ್ತು ಅದರ ತಂತ್ರಗಳನ್ನು ಪತ್ತೆ ಹಚ್ಚುವುದು ಕ್ಲಿಷ್ಟಕರ ಎಂದು ವೈದ್ಯರು ತಿಳಿಸುತ್ತಾರೆ. ಆಹಾರ ಉತ್ಪನ್ನ ದುಬಾರಿಯಾದಷ್ಟೂ ಮೂಲ ಉತ್ಪನ್ನಕ್ಕೆ ಕಳಪೆ ಹಾಗೂ ಅಪಾಯ ಕಾರಿ ವಸ್ತು ವಿನ ಕಲಬೆರಕೆ ಮಾಡಿ ಲಾಭ ಮಾಡುತ್ತಾರೆ. ಇದು ಗ್ರಾಹಕರ ಜೀವ ಹಿಂಡಿದರೂ ಲಾಭಕೋರನಿಗೆ ಚಿಂತೆ ಇಲ್ಲ !
ಈ ರೀತಿಯಲ್ಲಿ ಅಸುರಕ್ಷಿತವಾದ ಮಾನವ ಉಪಯೋಗಕ್ಕೆ ಹಾನಿಕಾರಕ ವಾದ ಯಾವುದೇ ಆಹಾರ ಪದಾರ್ಥಗಳನ್ನು ಶೇಖರಿಸುವುದು ಮಾರಾಟ ಮಾಡುವುದು, ವಿತರಿಸು ವುದು, ಆಮದು ಮಾಡಿಕೊಳ್ಳುವುದು ಅಪರಾಧ.ದಂಡ ಸಹಿತ ಕಾರಾಗೃಹ ವಾಸದ ಶಿಕ್ಷೆ ಇದಕ್ಕಿದೆ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರ ಇದನ್ನು ಸ್ಪಷ್ಟಪಡಿಸಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಇದನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದೆ. ದೂರು ನೀಡುವವರು www.nationalconsumerhelpline.in ಮತ್ತು www.core.nic.in ಇದರಲ್ಲಿ ಲಾಗ್ ಇನ್ ಮಾಡಲು ಭಾರತ ಸರಕಾರದ ಮಂತ್ರಾಲಯ ಸೂಚಿಸಿದೆ. – ರಾಮದಾಸ್ ಕಾಸರಗೋಡು