Advertisement
ಜಿಲ್ಲಾಧಿ ಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಜನ ಅ ಧಿಕಾರಿಗಳು ಹಾಗೂ ಇಬ್ಬರು ಹೋಮಗಾರ್ಡ್ಸ್ಗಳನ್ನೊಳಗೊಂಡ ಜಾಗೃತದಳ ತಂಡವನ್ನು ನೇಮಕ ಮಾಡಲಾಗಿದ್ದು, ಈ ತಂಡಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಜಾಗೃತ ತಂಡದವರು ನಿರ್ವಹಿಸುವ ಕಾರ್ಯದ ಬಗ್ಗೆ ನಿಗಾ ವಹಿಸಲು ಅವರ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಡುವವರನ್ನು ಪತ್ತೆ ಹಚ್ಚಿ ಮರಳು ಸಾಗಿಸುತ್ತಿರುವ ವಿರುದ್ಧ ಕೇಸ್ ಕೂಡ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ವಶಪಡಿಸಿಕೊಂಡ ಮರಳನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ನೀಡಬೇಕು. ಲೋಕೋಪಯೋಗಿ ಇಲಾಖೆಯವರು ಜಪ್ತಿ ಮಾಡಿದ ಮರಳನ್ನು ಒಂದು ಕಡೆ ಸಂಗ್ರಹಿಸಿ ಮರಳಿನ ಗುಣಮಟ್ಟ ಪರೀಕ್ಷಿಸಿ ಎಸ್.ಆರ್ ದರದಲ್ಲಿ ಮಾರಾಟ ಮಾಡಬೇಕು. ಈಗಾಗಲೇ ಸಂಗ್ರಹಿಸಿದ್ದ ಮರಳಿನ ಮಾಹಿತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ನೀಡಿ ಎಸ್.ಆರ್ ದರದಲ್ಲಿ ಮಾರಾಟವಾಗದಿದ್ದಲ್ಲಿ ಸರಕಾರಕ್ಕೆ ವರದಿ ನೀಡಲು ಸಭೆಯಲ್ಲಿ ತಿಳಿಸಲಾಯಿತು.
Related Articles
Advertisement
ಕಲ್ಲು ಪುಡಿ ಮಾಡುವ ಘಟಕಗಳು ಕಡ್ಡಾಯವಾಗಿ ಸಿ.ಎಫ್.ಒ ನವೀಕರಣ ಮಾಡಿಕೊಂಡಿರುವ ಬಗ್ಗೆ ಹಾಗೂ ಸುರಕ್ಷಿತ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಹೊಸದಾಗಿ ಮತ್ತು ನವೀಕರಣಕ್ಕೆ ಕಲ್ಲುಪುಡಿ ಮಾಡುವ ಘಟಕಗಳ ಸ್ಥಾಪನೆಗೆ ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು 45 ಕಲ್ಲು ಪುಡಿ ಮಾಡುವ ಘಟಕಗಳಿದ್ದು, 39 ಘಟಕಗಳು ಚಾಲ್ತಿಯಲ್ಲಿದ್ದು, ಅದರಲ್ಲಿ 16 ಘಟಕಗಳನ್ನು ಮುಚ್ಚಲು ಆದೇಶಿಸಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು. ತಹಶೀಲ್ದಾರರ ಜೊತೆ ಜಂಟಿಯಾಗಿ ಘಟಕಗಳಿಗೆ ಭೇಟಿ ಮಾಡಿ ತಕ್ಷಣ ಬಂದ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ವಂಶಿಕೃಷ್ಣ, ಜಿಪಂ ಸಿಇಒ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿಗಳಾದ ಎಚ್.ಜಯಾ, ಎಂ.ಮಾರುತಿ ಸೇರಿದಂತೆ ಸಮಿತಿಯ ಸದಸ್ಯರಾದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಇದ್ದರು.
ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟುವಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬಂದ ದೂರುಗಳ ಬಗ್ಗೆ ಕ್ರಮಕೈಗೊಳ್ಳದಿರುವುದು ಹಾಗೂ ದೂರುಗಳ ದಾಖಲಾತಿ ಬಗ್ಗೆ ಸಹಿಯಲ್ಲಿ ನಮೂದಿಸದೇ ಇರುವದನ್ನು ಕಂಡ ಜಿಲ್ಲಾ ಧಿಕಾರಿ ಕೆ.ಜಿ. ಶಾಂತಾರಾಮ್ ಅವರಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಿದರು.