Advertisement

ಜಾಗಿನಕೆರೆ ನಿರ್ಬಂಧಿತ ವಲಯ

11:58 AM May 06, 2020 | mahesh |

ಕೆ.ಆರ್‌.ಪೇಟೆ: ತಾಲೂಕಿನ ಜಾಗಿನಕೆರೆ ಗ್ರಾಮಕ್ಕೆ ಮುಂಬೈನಿಂದ ಬಂದ ಇಬ್ಬರು ಮಹಿಳೆಯರಿಗೆ ಕೋವಿಡ್  ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಜಾಗಿನಕೆರೆ ಗ್ರಾಮವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಗುರುತಿಸಿ ಬ್ಯಾರಿಕೇಡ್‌ ಹಾಕಿ ಇಡೀ ಗ್ರಾಮವನ್ನು ಪೊಲೀಸ್‌ ಕಣ್ಗಾ ವಲಿನಲ್ಲಿ ಇಡಲಾಗಿದೆ.

Advertisement

ಜಾಗಿನಕೆರೆ ಗ್ರಾಮದಿಂದ 7 ಕಿ.ಮೀ ವ್ಯಾಪ್ತಿಯಲ್ಲಿರುವ ಬರೋಬ್ಬರಿ 48 ಗ್ರಾಮಗಳನ್ನು ಬಫರ್‌ ಝೋನ್‌ ವ್ಯಾಪ್ತಿಗೆ ಒಳಪಡಿಸಿ ಕೊರೊನಾ ಸೋಂಕು ಹರಡ ದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಜಾಗಿನಕೆರೆ ಗ್ರಾಮದಿಂದ 7 ಕಿ.ಮೀ. ವ್ಯಾಪ್ತಿಯ 48 ಗ್ರಾಮಗಳಾದ ಕೊಟಗಹಳ್ಳಿ, ಬೊಪ್ಪನಹಳ್ಳಿ, ದುಗ್ಗನಹಳ್ಳಿ, ರಂಗನಾಥಪುರ, ಬಿಲ್ಲೇನಹಳ್ಳಿ, ಜೊತ್ತನಪುರ, ಚಿಕ್ಕಹಾರನಹಳ್ಳಿ, ದಾಸಗೋಳಪುರ, ಹೆತ್ತಗೋನಹಳ್ಳಿ, ಗೊರವಿ, ಯಲಾದಹಳ್ಳಿ, ಸೋಮೇನಹಳ್ಳಿ, ನಾಯಕನಹಳ್ಳಿ, ಹರಪ್ಪನಹಳ್ಳಿ, ಹಲಗೆಹೊಸಹಳ್ಳಿ, ಆದಿಹಳ್ಳಿ, ಮಾಚಹಳ್ಳಿ, ಸಾರಂಗಿ, ಶ್ಯಾರಹಳ್ಳಿ, ಕೊರಟೀಕೆರೆ, ಬಳ್ಳೇಕೆರೆ, ಕೈಗೋನಹಳ್ಳಿ, ನಗರೂರು, ಮಾರ್ಗೊನಹಳ್ಳಿ, ವಳಗೆರೆ ಮೆಣಸ, ಮಲ್ಲೇನಹಳ್ಳಿ ತಮ್ಮಡಹಳ್ಳಿ, ಕ್ಯಾತನಹಳ್ಳಿ, ಸಿಂಧಘಟ್ಟ, ರಾಯಸಮುದ್ರ, ಅಂಕನಾಥಪುರ, ಚಾಮಲಾಪುರ, ಹರೀನ ಹಳ್ಳಿ, ಚಿಲ್ಲದಹಳ್ಳಿ, ಅರೆಬೊಪ್ಪನಹಳ್ಳಿ, ಕೋಮನಹಳ್ಳಿ, ಅಗ್ರಹಾರಬಾಚಹಳ್ಳಿ, ಬಂಡಬೋಯಿನಹಳ್ಳಿ, ಬಿ.ಕೋಡಿಹಳ್ಳಿ, ಬೊಮ್ಮನಾಯಕನಹಳ್ಳಿ, ಹತ್ತಿಮಾರನಹಳ್ಳಿ, ಉಯೊನಹಳ್ಳಿ, ಚಾಕನಾಯಕನಹಳ್ಳಿ, ಮರುವನಹಳ್ಳಿ, ಹರಳಹಳ್ಳಿ, ಮೈಲನಹಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನ
ಕೊರವನಹುಂಡಿ ಒಂದು ಗ್ರಾಮವನ್ನು ಬಫರ್‌ ಜೋನ್‌ಗೆ ಒಳಪಡಿಸಲಾಗಿದೆ.

ಜಾಗಿನಕರೆ ಗ್ರಾಮದಲ್ಲಿ ಒಟ್ಟು 349 ಮನೆಗಳಿದ್ದು, 1330 ಜನಸಂಖ್ಯೆ ಇದೆ. ಸೋಂಕಿಗೆ ಒಳಗಾಗಿರುವವರು ಈ ಗ್ರಾಮದ ಮೂಲ ನಿವಾಸಿಗಳಾಗಿದ್ದು ಕೆಲಸದ ನಿಮಿತ್ತ
ಕುಟುಂಬ ಸಮೇತ ಮುಂಬೈಗೆ ಹೋಗಿ ಅಲ್ಲಿರುವ ಸಾಂತಾಕ್ರೂಸ್‌ ಅಗ್ರಿವಾಡದಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದರು. ಅಲ್ಲಿಂದ ಏ.24ರಂದು ಆಗಮಿಸಿದ್ದ ಗರ್ಭಿಣಿ ಹಾಗೂ ವಿದ್ಯಾರ್ಥಿನಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿತ್ತು. ಎಸ್ಪಿ ಪರಶುರಾಮ, ಪಾಂಡವಪುರ ಎಸಿ ಶೈಲಜಾ, ತಹಶೀಲ್ದಾರ್‌ ಶಿವಮೂರ್ತಿ, ಟಿಎಚ್‌ಒ ಡಾ.ಹರೀಶ್‌, ಸಿಪಿಐ ಸುಧಾಕರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next