Advertisement

ಹಿಮಾದಾಸ್‌ಗೆ ಜಗ್ಗಿ ಅಭಿನಂದನೆ: ಕೀಳು ಅಭಿರುಚಿ ಪ್ರಕಟಿಸಿದ ಟ್ವೀಟಿಗರು

01:00 AM Jul 26, 2019 | Sriram |

ಕೊಯಮತ್ತೂರು: ಚಿನ್ನದ ರಾಣಿ ಹಿಮಾದಾಸ್‌ ಬರೀ ಒಂದು ತಿಂಗಳ ಅಂತರದಲ್ಲಿ 5 ಚಿನ್ನದ ಪದಕ ಗೆದ್ದು ದೇಶ ದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

Advertisement

ಈ ವೇಳೆ ಈಶಾ ಫೌಂಡೇಶನ್‌ ಮುಖ್ಯಸ್ಥ, ಸದ್ಗುರು ಎಂದು ಕರೆಸಿಕೊಳ್ಳುವ ಜಗ್ಗಿ ವಾಸುದೇವ್‌ ಹಿಮಾದಾಸ್‌ಗೆ ಅಭಿನಂದಿಸಿ ಮಾಡಿದ ಟ್ವೀಟೊಂದನ್ನು ಕೆಲವರು ತಮ್ಮ ಕಳಪೆ ಅಭಿರುಚಿಯಿಂದ, ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದ ಜಗ್ಗಿ, ಹಿಮಾ ದಾಸ್‌, ಎ ಗೋಲ್ಡನ್‌ ಶವರ್‌ ಫಾರ್‌ ಇಂಡಿಯಾ. ಕಂಗ್ರಾಚುಲೇಷನ್ಸ್‌ ಆ್ಯಂಡ್‌ ಬ್ಲೆಸ್ಸಿಂಗ್ಸ್‌ (ಹಿಮಾದಾಸ್‌, ಭಾರತದ ಪಾಲಿನ ಕನಕ ವರ್ಷ, ಶುಭಾಶಯಗಳು, ಶುಭಾಶೀರ್ವಾ ದಗಳು) ಎಂದು ಹೇಳಿದ್ದರು.

ಇಲ್ಲಿ ಗೋಲ್ಡನ್‌ ಶವರ್‌ (ಲೈಂಗಿಕ ಸುಖದ ಹಂತದಲ್ಲಿ ಸಹಭಾಗಿಯ ಮೇಲೆ ಮೂತ್ರ ವಿಸರ್ಜನೆ ಮಾಡುವುದು) ಪದಕ್ಕೆ ಕೆಲವರು ಕೆಟ್ಟ ಅರ್ಥ ನೀಡಿದ್ದಾರೆ. ಈ ಅರ್ಥವನ್ನು ಜಗ್ಗಿ ವಾಸುದೇವ್‌ ಗಮನಿ ಸಬೇಕಿತ್ತು ವಿವಾದವೆಬ್ಬಿಸಿದವರ ಆಶಯ. ಒಳ್ಳೆಯ ಪದವೊಂದಕ್ಕೆ ಕೆಟ್ಟ ಅರ್ಥ ನೀಡಿ ಹಾಳು ಮಾಡಿ, ನಂತರ ಹೀಗೆ ವಿವಾದವೆಬ್ಬಿಸಿದವರ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ಪದವನ್ನು ಒಳ್ಳೆಯ ಅರ್ಥದಲ್ಲೇ ಬಳಸುವ ಯತ್ನವನ್ನೂ ಹಾಳು ಮಾಡುತ್ತಿರುವವರ ಬಗ್ಗೆಯೂ ಜನ ಸಿಟ್ಟಾಗಿದ್ದಾರೆ. ಕೆಲವರು ಜಗ್ಗಿ ಯಾವ ಅರ್ಥದಲ್ಲಿ ಈ ಪದವನ್ನು ಬಳಸಿದ್ದಾರೆ ಎಂಬ ಬಗ್ಗೆ ವಿವರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ. ಶಂಕರಾ ಚಾರ್ಯರ ತಪಸ್ಸಿಗೆ ಮೆಚ್ಚಿ ಲಕ್ಷ್ಮಿ ಚಿನ್ನದ ಮಳೆ ಸುರಿಸುತ್ತಾಳೆ. ಅದನ್ನೇ ಗೋಲ್ಡನ್‌ ಶವರ್‌ ಎಂಬರ್ಥದಲ್ಲಿ ಜಗ್ಗಿ ಬಳಸಿದ್ದಕ್ಕೆ ಸಾಕ್ಷಿಯನ್ನೂ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next