Advertisement
ಗಾಯಗೊಂಡ ಗುರುರಾಜ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಇತ್ತ ಕೃತ್ಯವೆಸಗಿರುವ ಆರೋಪಿ ಹೆಬ್ಟಾಳದ ಶಿವಶಂಕರ್ ಎಂದು ತಿಳಿದಿದೆ. ಸದ್ಯ ಈತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಹಲ್ಲೆಗೊಳಗಾದ ಗುರುರಾಜ್ ಪ್ರಕರಣ ದಾಖಲಿಸಿದ್ದು, ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಕೆಲ ಹೊತ್ತು ಅಲ್ಲೇ ವಿಶ್ರಾಂತಿ ಪಡೆರು ಗುರುರಾಜ್ ಮನೆಗೆ ತೆರಳಿದ್ದಾರೆ. ಗುರುರಾಜ್ ಆರೋಪಿಗಳ ಕಾರಿನ ನಂಬರ್ ಅನ್ನು ಬರೆದುಕೊಂಡಿದ್ದು, ಇದು ತನಿಖೆಗೆ ಸಹಕಾರಿಯಾಗಿದೆ. ಆರೋಪಿ ಬಗ್ಗೆ ಸುಳಿವು ಸಹ ಸಿಕ್ಕಿದ್ದು, ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ ಕ್ರೀಡಾಪಟು: “ದುಷ್ಕರ್ಮಿಗಳು ಇರಿದ ಚಾಕು ನನ್ನ ಮಗನ ಹೊಟ್ಟೆಗೆ ತಗುಲಬೇಕಿತ್ತು. ಆದರೆ ಆತ ಕ್ರೀಡಾಪಟುವಾಗಿದ್ದು, ಎಗರಿರುವುದರಿಂದ ತೊಡೆ ಭಾಗಕ್ಕೆ ತಗುಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಗುರು ಚೇತರಿಸಿಕೊಳ್ಳುತ್ತಿ¨ªಾನೆ. ಯಾವುದೇ ವೈಯಕ್ತಿಕ ದ್ವೇಶದಿಂದ ಹÇÉೆ ನಡೆದಿಲ್ಲ. ದುಷ್ಕರ್ಮಿ ಯಾರೇ ಇರಲಿ ಅವರನ್ನು ಹಿಡಿದು ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು,’ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಎರಡು ಬಾರಿ ಹೇಳಿಕೆ ದಾಖಲು: ಘಟನೆ ಕುರಿತು ಗುರುರಾಜ್‌ರಿಂದ ಪೊಲೀಸರು ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬೆಳಗ್ಗೆ ಒಮ್ಮೆ ಗುರುರಾಜ್ ದೂರು ನೀಡಿದ್ದು, ಹೇಳಿಕೆ ಪಡೆದುಕೊಂಡಿದ್ದರು. ಬಳಿಕ ಸಂಜೆ ತಾಯಿ ಪರಿಮಳಾ ಜಗ್ಗೇಶ್ ಜೊತೆ ಠಾಣೆಗೆ ಬಂದ ಗುರು ಮತ್ತೂಮ್ಮೆ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ತೆಗೆಯುತ್ತಿದ್ದ ಮಂದಿ: ದುಷ್ಕರ್ಮಿ ಗುರುರಾಜ್‌ಗೆ ಚಾಕುವಿನಿಂದ ಇರಿಯುವಾಗ ಸ್ಥಳದಲ್ಲಿ ಸಾಕಷ್ಟು ಮಂದಿ ಸ್ಥಳೀಯರು, ವಾಹನ ಸವಾರರು ಇದ್ದರು. ಆದರೆ ದೃಶ್ಯದ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದ ಅವರೆಲ್ಲಾ, ಗುರು ನೆರವಿಗೆ ಧಾವಿಸಿಲ್ಲ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಗುರುರಾಜ್ ರಕ್ಷಣೆಗಾಗಿ ಅಂಗಲಾಚಿದರೆ ಒಬ್ಬರೂ ಸಹಾಯಕ್ಕೆ ಬಂದಿಲ್ಲ. ಅಲ್ಲದೇ ಆರೋಪಿಯು ಕೃತ್ಯವೆಸಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಸಂಗ್ರಹಿಸಿದ್ದು, ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯಕ್ಕೆ ಬನ್ನಿ-ಜಗ್ಗೇಶ್ ಮನವಿ: ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್, “ನನ್ನ ಮಗನ ಮೇಲೆ ದುಷ್ಕರ್ಮಿ ಚಾಕುವಿನಿಂದ ಹÇÉೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಸಹಾಯಕ್ಕೆ ಧಾವಿಸಬಹುದಿತ್ತು. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಗುರು ಇತ್ತೀಚೆಗೆ ಕ್ರೀಡೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎಂದು ಶ್ರಮಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ. ಇದೊಂದು ದುರಂಹಕಾರದ ಪರಮಾವಧಿ. ಸಮಾಜದಲ್ಲಿ ವಿಕೃತ ಮನಸ್ಥಿತಿ ತಾಂಡವಾಡುತ್ತಿದೆ. ಹೊಟ್ಟೆಯುರಿ ಹೆಚ್ಚಾಗಿದೆ,’.
“ಸಾರ್ವಜನಿಕರು ಇಂತಹ ಘಟನೆಗಳು ನಡೆದಾಗ ನೆರವಿಗೆ ಧಾವಿಸಬೇಕು. ಗುರು ನನ್ನ ಮಗ ಎಂದು ಈ ಮಾತು ಹೇಳುತ್ತಿಲ್ಲ. ಮುಂದೆ ನಿಮಗೂ ಇಂಥ ಕಷ್ಟ ಎದುರಾದಾಗ ಯಾರೂ ನಿಮ್ಮ ನೆರವಿಗೆ ಬಾರದಿದ್ದರೆ ನೊಂದಿಕೊಳ್ಳುವುದು ಬೇಡ. ಇದೊಂದು ಆಕಸ್ಮಿಕ ಘಟನೆ. ಆದರೆ, ಚಾಕು ಇಟ್ಟುಕೊಂಡು ಓಡಾಡುತ್ತಾರೆ ಎಂದರೆ ಅವರ ಹಿನ್ನೆಲೆ ಬೇರೆ ರೀತಿಯೇ ಇರುತ್ತದೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ. ಆರೋಪಿಯ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಬಂಧಿಸುವ ಭರವಸೆಯನ್ನು ಸಹ ನೀಡಿದ್ದಾರೆ,’ ಎಂದು ಹೇಳಿದ್ದಾರೆ.
ಯಾವುದೇ ಕೃತ್ಯಗಳು ನಡೆಯುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ, ವಾಟ್ಸಪ್ ಮತ್ತು ಟ್ವೀಟರ್‌ಗಳಲ್ಲಿ ಹರಿಬಿಡುವ ವಿಕೃತ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ನೆರವಿಗೆ ಯಾರೂ ಧಾವಿಸುವುದಿಲ್ಲ,’ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.
ಘಟನೆಯಿಂದ ಮನಸ್ಸಿಗೆ ನೋವಾಗಿದೆ. ನಡು ರಸ್ತೆಯಲ್ಲೇ ಡ್ರ್ಯಾಗರ್‌ನಿಂದ ಇರಿಯುತ್ತಿದ್ದರೂ ಒಬ್ಬರೂ ನೆರವಿಗೆ ಬರಲಿಲ್ಲ. ನನ್ನ ಕಾರಿಗೆ ಆತ ಡಿಕ್ಕಿಹೊಡೆದು ಹೋದ. ಇದನ್ನು ಪ್ರಶ್ನಿಸಿದ್ದಕ್ಕೆ ತುಂಬಾ ಕೆಟ್ಟ ಶಬ್ಧಗಳಿಂದ ನಿಂದಿಸಿದ. ನಾನು ಜಗ್ಗೇಶ್ ಮಗ ಎಂದು ಹೇಳಿದೆ. ಆಗ ಆತ ಕಾರಿನನಿಂದ ಡ್ರ್ಯಾಗರ್ ತೆಗೆದು ಇರಿದಿದ್ದಾನೆ. ಹೊಟ್ಟೆಗೆ ಇರಿಯಲು ಯತ್ನಿಸಿದ. ಆದರೆ, ನಾನು ಜಂಪ್ ಮಾಡಿದೆ. ತೊಡೆಯ ಭಾಗಕ್ಕೆ ಚಾಕು ತಗುಲಿತು. 8 ಹೊಲಿಗೆ ಹಾಕಿದ್ದಾರೆ. ದೂರು ಕೊಟ್ಟಿದ್ದೇನೆ. ಆರೋಪಿಗಳನ್ನು ಪೊಲೀಸರು ಬಂಧಿಸುವ ಭರವಸೆ ಕೊಟ್ಟಿದ್ದಾರೆ.-ಗುರುರಾಜ್, ಜಗ್ಗೇಶ್ ಪುತ್ರ