Advertisement

Jaggesh; ಮಾರ್ಚ್‌ 8ಕ್ಕೆ ‘ರಂಗನಾಯಕ’: ಗುರುಪ್ರಸಾದ್‌-ಜಗ್ಗೇಶ್‌ ಕಾಂಬಿನೇಶನ್‌ ಚಿತ್ರ

02:48 PM Jan 19, 2024 | Team Udayavani |

ಜಗ್ಗೇಶ್‌ ಹಾಗೂ ಗುರುಪ್ರಸಾದ್‌ ಕಾಂಬಿನೇಶನ್‌ನಲ್ಲಿ “ರಂಗನಾಯಕ’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಆದರೆ, ಆ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತಗೊಳಿಸಿದೆ. ಮಾರ್ಚ್‌ 8ರಂದು “ರಂಗನಾಯಕ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ “ಮಠ’, “ಎದ್ದೇಳು ಮಂಜುನಾಥ’ ಚಿತ್ರದ ಹಿಟ್‌ ಜೋಡಿ “ರಂಗನಾಯಕ’ ಮೂಲಕ ಮೋಡಿ ಮಾಡಲು ಬರುತ್ತಿರುವುದು ಪಕ್ಕಾ ಆಗಿದೆ.

Advertisement

ನಾಯಕ ನಟ ಜಗ್ಗೇಶ್‌ ಅವರಿಗೆ ಮಾರ್ಚ್‌ 17 ಹುಟ್ಟುಹಬ್ಬ ಸಂಭ್ರಮ. ಈಗ “ರಂಗನಾಯಕ’ ತಂಡ ಜಗ್ಗೇಶ್‌ ಹಾಗೂ ಅವರ ಅಭಿಮಾನಿಗಳಿಗೆ ಬರ್ತ್‌ಡೇಗೆ ಒಂದು ವಾರ ಮುಂಚೆಯೇ ಗಿಫ್ಟ್ ನೀಡಲು ಮುಂದಾಗಿದೆ.

ಈ ಚಿತ್ರವನ್ನು ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ನಡಿ ಎ.ಆರ್‌. ವಿಖ್ಯಾತ್‌ ನಿರ್ಮಾಣ ಮಾಡುತ್ತಿದ್ದಾರೆ. ಮಠ, ಎದ್ದೇಳು ಮಂಜುನಾಥ ನಂತರ ಮತ್ತೂಮ್ಮೆ ಹಿಟ್‌ ಕಾಂಬೋ ತೆರೆಯತ್ತ ಬರುತ್ತಿರುವುದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆ ಕುತೂಹಲ ಹಾಗೂ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಯಾಗಿರುವ ಚಿತ್ರದ ಟೀಸರ್‌, ಗೆಟಪ್‌ ಸಿನಿಮಾ ಮೇಲಿನ ಕುತೂ ಹಲ ಹೆಚ್ಚಿಸಿರುವುದು ಸುಳ್ಳಲ್ಲ

Advertisement

Udayavani is now on Telegram. Click here to join our channel and stay updated with the latest news.

Next