Advertisement

ಚಮಕ್‌ ಚಿತ್ರಕ್ಕೆ ಜಗ್ಗೇಶ್‌ ಧ್ವನಿ 

11:41 AM Dec 14, 2017 | |

ಹೊಸಬರ ಚಿತ್ರಗಳಿಗೆ ಸ್ಟಾರ್‌ ನಟರು ಹಾಡುವುದು, ಕುಣಿಯುವುದು ಮತ್ತು ಧ್ವನಿ ನೀಡುವುದು ಹೊಸದೇನಲ್ಲ. ಹಾಗೆಯೇ ಸ್ಟಾರ್‌ಗಳು ಕೂಡ ಕೆಲ ಸ್ಟಾರ್‌ಗಳ ಚಿತ್ರಗಳಿಗೂ ಹಾಡುವುದು, ಕುಣಿಯುವುದು ಮತ್ತು ಹಿನ್ನೆಲೆ ಧ್ವನಿ ನೀಡುವುದು ಸಹ ಹೊಸದಲ್ಲ. ಈಗ ಆ ಸಾಲಿಗೆ ಗಣೇಶ್‌ ಅಭಿನಯದ “ಚಮಕ್‌’ ಕೂಡ ಸೇರಿದೆ. ಹೌದು, ಜಗ್ಗೇಶ್‌ ಅವರು “ಚಮಕ್‌’ ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ.

Advertisement

ಈ ಕುರಿತಂತೆ ಸ್ವತಃ ಜಗ್ಗೇಶ್‌ ಅವರೇ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಗಣೇಶ್‌ ಜತೆಗಿರುವ ಫೋಟೋವೊಂದನ್ನು ಹಾಕಿಕೊಂಡು, “ಗಣೇಶನ “ಚಮಕ್‌’ ಚಿತ್ರ ಅದ್ಭುತ ಮನರಂಜನೆ ಹಾಗು ಮನಸ್ಸಲ್ಲಿ ಉಳಿಯುವ, ಎಲ್ಲಾ ವರ್ಗಕ್ಕೂ ಸಲ್ಲುವ ಚಿತ್ರ. ಈ ಚಿತ್ರಕ್ಕೆ ನಾನು ಧ್ವನಿ ನೀಡಿ ಅದರ ಸಣ್ಣ ಭಾಗ ಆದೆ. ಚಿತ್ರದ ನಿರ್ದೇಶನ, ಛಾಯಾಗ್ರಹಣ, ಗಣೇಶನ ನಟನೆ ಜುಗಲ್‌ಬಂಧಿ ಕನ್ನಡಿಗರಿಗೆ ರಸಕವಳ… ಶುಭವಾಗಲಿ’ ಎಂದು ಸ್ಟೇಟಸ್‌ ಹಾಕಿಕೊಂಡಿದ್ದಾರೆ ಜಗ್ಗೇಶ್‌.

ಜಗ್ಗೇಶ್‌ ಅವರ ಈ ಟ್ವೀಟ್‌ಗೆ ಗಣೇಶ್‌ ಮತ್ತು ನಿರ್ದೇಶಕ ಸುನಿ ಅವರು “ಥ್ಯಾಂಕ್ಸ್‌ ಜಗ್ಗಣ್ಣ’ ಎಂದು ಹೇಳಿದ್ದಾರೆ. ಅಂದಹಾಗೆ, “ಚಮಕ್‌’ ಚಿತ್ರದಲ್ಲಿ ಜಗ್ಗೇಶ್‌ ಧ್ವನಿಯಲ್ಲಿ ಹೊರಬಂದ ಮಾತುಗಳು ಆರಂಭದಲ್ಲೇ ಬರುತ್ತವೆ. ನಾಯಕನ ಪರಿಚಯಿಸುವ ಮಾತುಗಳವು. ನಾಯಕ ಯಾರು, ಅವನೊಬ್ಬ ತರೆಲಯಾಗಿದ್ದರೂ, ಡಾಕ್ಟರ್‌ ಹೇಗಾದ ಎಂಬಿತ್ಯಾದಿ ಕುರಿತಾದ ಮಾತುಗಳು ಒಂದು ನಿಮಿಷಗಳವರೆಗೆ ಬರಲಿದೆ.

ಆ ಮಾತುಗಳು ಹೇಗಿರುತ್ತವೆ ಎನ್ನುವುದಕ್ಕೆ “ಚಮಕ್‌’ ಬರುವವರೆಗೆ ಕಾಯಬೇಕು. ಇಲ್ಲಿ ರಶ್ಮಿಕಾ ಮಂದಣ್ಣ, ಗಣೇಶ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರಕ್ಕೆ “ಯು/ಎ’ ಸರ್ಟಿಫಿಕೆಟ್‌ ಸಿಕ್ಕಿದೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಚಂದ್ರಶೇಖರ್‌ ಚಿತ್ರ ನಿರ್ಮಿಸಿದ್ದಾರೆ. ಡಿಸೆಂಬರ್‌ 29 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next