ಬೆಂಗಳೂರು : ಅಭಿನಯ ಶಾರದೆ ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಕಂಬನಿ ಮಿಡಿದಿದ್ದಾರೆ.
ಹಿರಿಯ ನಟಿಯ ಅಗಲಿಕೆಗೆ ನೋವಿನಿಂದ ಟ್ವೀಟ್ ಮಾಡಿರುವ ಜಗ್ಗೇಶ್, ಜಯಂತಿ ಅವರ ಜೊತೆಗೆ ಕಳೆದ ಸಿನಿ ಪಯಣದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಜಗ್ಗೇಶ್ ಟ್ವಿಟ್ ವಿವರ:
ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರಲ್ಲಿ ಭಾರತಿ ಅಮ್ಮ ಹಾಗು ಜಯಂತಿ ಅಮ್ಮ.. ಭಾರತಿ ಅಮ್ಮನ ಜೊತೆ ನಟಿಸಲು ನನಗೆ ಅವಕಾಶ ಸಿಗಲಿಲ್ಲಾ ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ ಸಮಾಧಾನ ಸಂತೋಷ ಇದೆ. ಅವರ ಜೊತೆ ಪಟೇಲ ಸಿನಿಮಾದಲ್ಲಿ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು ಸಮಯ ಕಳೆವ ಅವಕಾಶ ಸಿಕ್ಕಿತು. ಆಗ ನನ್ನ ಸಿನಿ ಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣ..
ಅವರಿಗೆ ನಾನು ರೇಗಿಸಿದ್ದು ಜಯಮ್ಮ ದೊರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕ ನಟ ಆಗುವ ಬದಲು ದೂರದ ಬೆಟ್ಟದಲ್ಲಿ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು ಹಾಗು ಕೋಲು ಹಿಡಿದು ಅಟ್ಟಾಡಿಸಿ ನಕ್ಕು ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು!
ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು!ಮನಸ್ಸು ಮಗುವಂತೆ ನಡೆದ ಸಂಗತಿ ಮೆಲುಕು ಹಾಕಿ ಆನಂದಿಸುತ್ತದೆ! ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು! ಹೋದ ಅನೇಕ ಹಿರಿಯ ನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು! ನಿಮ್ಮಆತ್ಮ ಶಾರದೆಯಲ್ಲಿ ಲೀನವಾಗಲಿ! Love you ಅಮ್ಮ ಎಂದು ಟ್ವೀಟ್ ಮಾಡಿದ್ದಾರೆ.