ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಆಯೋಜನೆಯಲ್ಲಿ ಗಣೇಶೋತ್ಸವದ ಪ್ರಯುಕ್ತ ಮಂಡ್ಯ ಬೆಲ್ಲದಿಂದ ನಿರ್ಮಾಣಮಾಡಿದ ಪರಿಸರ ಸ್ನೇಹಿ ಬೆಲ್ಲದ ಗಣಪತಿಯ ಪ್ರದರ್ಶನವನ್ನು ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವೀಥಿಕಾದಲ್ಲಿ ಪ್ರದರ್ಶನ ಮಂಟಪದಲ್ಲಿ ಅನಾವರಣಗೊಳಿಸಲಾಯಿತು. ಈ ಗಣಪತಿ ವೀಕ್ಷರ ಗಮನ ಸೆಳೆಯಿತು.
ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ ಮತ್ತು ಉದ್ಯಮಿ ಭಾಸ್ಕರ ಶೇರಿಗಾರ್ ಅವರು ಪ್ರದರ್ಶನ ಮಂಟಪದ ಪರದೆ ಸರಿಸುವ ಮೂಲಕ ಉದ್ಘಾಟಿಸಿ ಗಣಪತಿ ವೀಕ್ಷಣೆಗೆ ಅವಕಾಶ ನೀಡಿದರು.
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಆಲೆ ಮನೆಯಲ್ಲಿ ತಯಾರಾದ 240 ಕೆ.ಜಿ.ಬೆಲ್ಲದ ಗಟ್ಟಿಯನ್ನು ಗಣಪತಿ ತಯಾರಿಕೆಗೆ ವರ್ತಕ ಕಟಪಾಡಿ ಗೋಪಾಲ ಭಟ್ ಮತ್ತು ಕುಟುಂಬಸ್ಥರು ಸಮಿತಿಗೆ ಒದಗಿಸಿದ್ದರು.
ಲೊಕೇಶ್ ಚಿಟ್ಪಾಡಿ, ರವಿ ಹೀರೆಬೆಟ್ಟು, ವಾಸುದೇವ ಚಿಟ್ಪಾಡಿ ಕಲಾವಿದರ ತಂಡ ಸತತ 5 ಗಂಟೆಗಳ ಕಾಲ ಬೆಲ್ಲ ಕೆತ್ತನೆಗೊಳಿಸಿ ಸುಂದರ ಗಣಪತಿ ಮೂರ್ತಿ ತಯಾರಿಸಿದ್ದರು. ಗಣೇಶೋತ್ಸವದ ಪ್ರಯುಕ್ತ ಕೇವಲ ಪ್ರದರ್ಶನ, ಆಕರ್ಷಣೆಗೆ ಮಾತ್ರಸೀಮಿತಗೊಳಿಸಲಾಗಿತ್ತು.
ಪಂಚರತ್ನ ಸೇವಾ ಟ್ರಸ್ಟ್ ಅಧ್ಯಕ್ಷ ನಿತ್ಯಾನಂದ ಒಳಕಾಡು, ನಾಗರಿಕ ಸಮಿತಿಯ ಸದಸ್ಯರಾದ ಚಿತ್ಪಾಡಿ ವಾಸುದೇವ್, ಸುರೇಶ್ ಕುಕ್ಕಿಕಟ್ಟೆ, ಮಹಮ್ಮದ್, ಡೇವಿಡ್, ಕ್ಲಾಸಿಕ್ ಸುಧಾಕರ್ ಶೆಟ್ಟಿ, ವಿಜೇಂದ್ರ ಭಟ್, ರಿತೇಶ್ ಭಟ್, ಜಯೇಶ್ ಭಟ್ ಕಟಪಾಡಿ ಹಾಗೂ ಪಂಚರತ್ನ ಸೇವಾ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಕೋಶಾಧಿಕಾರಿ ಪಲ್ಲವಿ ಸಂತೋಷ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.