Advertisement

ವಿಂಟರ್‌ ಒಲಿಂಪಿಕ್ಸ್‌: ಜಗದೀಶ್‌ಗೆ 103ನೇ ಸ್ಥಾನ

06:10 AM Feb 17, 2018 | Team Udayavani |

ಪಿಯಾಂಗ್‌ಚಾಂಗ್‌: ಪುರುಷರ 15 ಕಿ.ಮೀ. ಫ್ರೀ ಕ್ರಾಸ್‌ಕಂಟ್ರಿ ರೇಸ್‌ನಲ್ಲಿ ಭಾರತದ ಸ್ಕೀಯರ್‌ ಜಗದೀಶ್‌ ಸಿಂಗ್‌ 103ನೇ ಸ್ಥಾನ ಪಡೆಯವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಪಿಯಾಂಗ್‌ಚಾಂಗ್‌ ವಿಂಟರ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದಾಸೆಗೆ ತಣ್ಣೀರು ಎರಚಿದಂತಾಗಿದೆ.

Advertisement

33.43.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಸ್ವಿಜರ್‌ಲ್ಯಾಂಡ್‌ನ‌ ಡಾರಿಯೊ ಕೊಲೋಗ್ನ 3ನೇ ಬಾರಿಗೆ ಒಲಿಂಪಿಕ್‌ ಚಿನ್ನ ಗೆದ್ದರೆ, ನಾರ್ವೆಯ ಸಿಮೆನ್‌ ಕ್ರುಜರ್‌ (34:02.2) ಬೆಳ್ಳಿ, ರಷ್ಯಾದ ಡೇನಿಸ್‌ ಸ್ಪಿತ್ಸೋವ್‌ (34:06.9) ಕಂಚಿನ ಪದಕ ಗೆದ್ದರು.
ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ ಹೈ ಆಲ್ಟಿಟ್ಯೂಡ್‌ ವಾರ್‌ಫೇರ್‌ ಸ್ಕೂಲ್‌ನಲ್ಲಿ (ಎಚ್‌ಎಬ್ಲ್ಯುಎಸ್‌)ನಲ್ಲಿ ತರಬೇತಿ ಪಡೆದಿರುವ ಜಗದೀಶ್‌ ಆರಂಭಿಕ 1.5 ಕಿ.ಮೀ. ಓಟದ ಸಂದರ್ಭ ಮುಂಚೂಣಿ ಸ್ಪರ್ಧಿಗಿಂತ ಕೇವಲ 40 ಸೆಕೆಂಡ್‌ಗಳಷ್ಟೇ ಹಿಂದಿದ್ದರು. ಆದರೆ ಓಟ ಮುಂದುವರಿದಂತೆ ಇವರ ನಡುವಿನ ಅಂತರವೂ ಹೆಚ್ಚುತ್ತ ಹೋಯಿತು.

ದುರದೃಷ್ಟವೆಂದರೆ ಈ ವಿಂಟರ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಬರೀ ಇಬ್ಬರೇ ಆ್ಯತ್ಲೀಟ್‌ಗಳು. ಅವರಲ್ಲಿ ಶಿವ ಕೇಶವನ್‌ “ಜೂಜ್‌’ನಲ್ಲಿ 34ನೇ ಸ್ಥಾನದೊಂದಿಗೆ ವಿಂಟರ್‌ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next