Advertisement

ರಾಬರ್ಟ್‌ಗೆ ಧ್ವನಿ ನೀಡಿದ ಖಡಕ್‌ ವಿಲನ್‌

03:35 PM Oct 23, 2020 | Suhan S |

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ಬಹುನಿರೀಕ್ಷಿತ ರಾಬರ್ಟ್’ ಸಿನಿಮಾದ ಬಹುತೇಕ ಕಾರ್ಯಗಳು ಅಂತಿಮ ಹಂತದಲ್ಲಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ…’ ಚಿತ್ರತಂಡ ಪೋಸ್ಟ್ ಪೊ›ಡಕ್ಷನ್‌ ಅಂತಿಮ ಕೆಲಸಗಳಲ್ಲಿ ನಿರತವಾಗಿದೆ. ಸದ್ಯ ಡಬ್ಬಿಂಗ್‌ ಕೊನೆ ಹಂತದಲ್ಲಿರುವ ರಾಬರ್ಟ್’ ಚಿತ್ರದ ತಮ್ಮ ಪಾತ್ರಕ್ಕೆ ನಟ ಜಗಪತಿ ಬಾಬು ತಾವೇ ಡಬ್ಬಿಂಗ್‌ ಮಾಡಿದ್ದಾರೆ.

Advertisement

ಇನ್ನು ಜಗಪತಿ ಬಾಬು ಡಬ್ಬಿಂಗ್‌ ಪೂರ್ಣಗೊಳಿಸಿದ ವಿಷಯವನ್ನು ನಿರ್ದೇಶಕ ತರುಣ್‌ ಕಿರ್ಶೋ ಸಾಮಾಜಿಕ ಜಾಲತಾಣದಲ್ಲಿಹಂಚಿಕೊಂಡಿದ್ದಾರೆ. “ಜಗಪತಿ ಬಾಬು ಅವರು ತಮ್ಮ ಮೊದಲ ಕನ್ನಡ ಡಬ್ಬಿಂಗ್‌ ಕಾರ್ಯವನ್ನು ರಾಬರ್ಟ್‌ ಗಾಗಿ ಮಾಡಿ ಮುಗಿಸಿದ್ದಾರೆ. ಅವರ ಉಪಸ್ಥಿತಿಯಿಂದ ನಮ್ಮ ಸಿನಿಮಾ ಬೇರೆ ಲೆವೆಲ್‌ ಗೆ ತಲುಪಿದೆ’ ಎಂದಿದ್ದರೆ ತರುಣ್.

ಸದ್ಯ “ರಾಬರ್ಟ್‌’ ಮೇಲೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಪ್ರೀತಿ ತೋರಿಸುತ್ತಾರೋ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇಡೀ ಚಿತ್ರರಂಗ ಇಟ್ಟಿದೆ. ಈ ವರ್ಷದ ಬಿಗ್‌ ರಿಲೀಸ್‌ ಸಾಲಿನಲ್ಲಿ “ರಾಬರ್ಟ್‌’ ನಿಂತಿದೆ. ಸಾಮಾನ್ಯವಾಗಿ ದರ್ಶನ್‌ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದು ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿರುತ್ತದೆ. ಆದರೆ, “ರಾಬರ್ಟ್‌’ ಚಿತ್ರ ಅತಿ ದೊಡ್ಡ ಹಬ್ಬವಾಗುವ ಲಕ್ಷಣಗಳನ್ನು ತೋರುತ್ತಿದೆ. ಈಗಾಗಲೇ ಈ ಚಿತ್ರದ ಪ್ರೀರಿಲೀಸ್‌ ಬಿಝಿನೆಸ್‌ ವಿಚಾರಗಳು ಕೂಡಾ ದೊಡ್ಡ ಮೊತ್ತದಲ್ಲೇ ಕೇಳಿಬರುತ್ತಿದೆ.

ಜೊತೆಗೆ ಸ್ಯಾಟ್‌ಲೆçಟ್‌, ಡಿಜಿಟಲ್‌ ರೈಟ್ಸ್‌ಗಳು ಕೂಡಾ ದಾಖಲೆ ಬೆಲೆಗೆ ಮಾರಾಟವಾಗಿವೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದು, ಸದ್ಯ “ರಾಬರ್ಟ್‌’ ಟಾಕ್‌ ಆಫ್ ದಿ ಟೌನ್‌ ಆಗಿರೋದಂತೂ ಸುಳ್ಳಲ್ಲ. ­

Advertisement

Udayavani is now on Telegram. Click here to join our channel and stay updated with the latest news.

Next