Advertisement

ಜಗನ್ನಾಥದಾಸರ ಆರಾಧನಾ ಮಹೋತ್ಸವ

08:25 PM Aug 28, 2020 | Suhan S |

ಭದ್ರಾವತಿ: ಹಳೇನಗರದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜ ಸ್ವಾಮಿಗಳ ಮಠದಲ್ಲಿ ಗುರುವಾರ ಮಾಧ್ವ ಮಂಡಳಿಯಿಂದ ಶ್ರೀ ಜಗನ್ನಾಥದಾಸರ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು.

Advertisement

ಬೆಳಗ್ಗೆ ದೇವರಿಗೆ ಹಾಗೂ ಉಭಯ, ಗುರುಗಳ ವೃಂದಾವನಕ್ಕೆ, ಪ್ರಾಣದೇವರಿಗೆ ಅಭಿಷೇಕ ನಡೆಸಿದ ನಂತರ ಮಠದ ಒಳಾವರಣದ ಪ್ರಾಕಾರದಲ್ಲಿ ಜಗನ್ನಾಥ ದಾಸರ ಭಾವಚಿತ್ರ ಹಿಡಿದು ಉತ್ಸವ ನಡೆಸಲಾಯಿತು.ಪಂಡಿತ ಶ್ರೀನಿಧಿ ಆಚಾರ್‌ ಜಗನ್ನಾಥ ದಾಸರ ಕೃತಿಗಳಲ್ಲಿ ಅಡಗಿರುವ ಸಂದೇಶ ಹಾಗೂ ಮಾಧ್ವ ಸಿದ್ಧಾಂತದ ತತ್ವಾದರ್ಶಗಳ ಕುರಿತಂತೆ ಅವರ ಸಾಹಿತ್ಯದಲ್ಲಿ ಅಡಗಿರುವ ಸಾರದ ಕುರಿತಂತೆ ಪ್ರವಚನ ನೀಡಿದರು.  ಪಂಡಿತ ಗೋಪಾಲಾಚಾರ್‌, ಶ್ರೀನಿವಾಸಾಚಾರ್‌, ಸತ್ಯನಾರಾಯಣಾಚಾರ್‌, ಜಯತೀರ್ಥ, ರಾಘವೇಂದ್ರಾಚಾರ್‌, ರಮಾಕಾಂತ, ಸು ಧೀಂದ್ರ, ವೆಂಕಟೇಶ್‌, ಕೃಷ್ಣಮೂರ್ತಿ, ಗುರುರಾಜ್‌, ವಿಜಯೇಂದ್ರ, ಮುಕುಂದ, ಮುರಳೀಧರ ತಂತ್ರಿ ಮತ್ತಿತರರು ಇದ್ದರು.

………………………………………………………………………………………………………………………………………………

ಜೆಸಿ ಆಸ್ಪತ್ರೆ ದಿನಗೂಲಿ ನೌಕರರಿಗೆ ಸಂಬಳವಿಲ್ಲ: ನೌಕರರ ಆಕ್ರೋಶ : ತೀರ್ಥಹಳ್ಳಿ: ತಾಲೂಕಿನ ಜೆಸಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 22 ಕ್ಕೂ ಹೆಚ್ಚು ದಿನಗೂಲಿ ನೌಕರರಿಗೆ ನಾಲ್ಕು ತಿಂಗಳಿನಿಂದ ಸಂಬಳ ನೀಡದೇ ಹೋಗಿದ್ದರೂ ತಾಲೂಕಿನಲ್ಲಿ ಕೇಳುವವರೇ ಗತಿಯಿಲ್ಲ ಎಂಬ ಆಕ್ರೋಶ ದಿನಗೂಲಿ ನೌಕರರಿಂದ ಕೇಳಿ ಬರುತ್ತಿದೆ. ಜೆಸಿ ಆಸ್ಪತ್ರೆಯಂತೆ ಅನೇಕ ಸರ್ಕಾರಿ ಕಚೇರಿಗಳಲ್ಲಿ ದಿನಗೂಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಟೆಂಡರ್‌ ಕರೆದು ಏಜೆನ್ಸಿಗಳ ಮೂಲಕ ದಿನಗೂಲಿ ನೌಕರರ ನೇಮಕಾತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಅದೇ ರೀತಿಯಲ್ಲಿ ತಾಲೂಕಿನ ಜೆಸಿ ಆಸ್ಪತ್ರೆಯ ದಿನಗೂಲಿ ನೌಕರರನ್ನು ನೇಮಕ ಮಾಡಲು ಏಜೆನ್ಸಿಯೊಂದು ಟೆಂಡರ್‌ ಹಿಡಿದಿದ್ದು, ಇಲ್ಲಿನ ದಿನಗೂಲಿ ನೌಕರರಿಗೆ ಇದೀಗ ನಾಲ್ಕು ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ. ಆದರೆ, ಅದೇ ಕೆಲಸವನ್ನು ನಂಬಿ ಬದುಕುತ್ತಿರುವ ಹೆಚ್ಚಿನ ಮಹಿಳೆಯರು ಹಾಗೂ ಪುರುಷರು ತಮ್ಮ ಕೆಲಸವನ್ನು ನಿಲ್ಲಿಸದೆ ಆಸ್ಪತ್ರೆಯ ಸ್ವತ್ಛತಾ ಕಾರ್ಯ, ಅಡುಗೆ ಕೆಲಸ ಹಾಗೂ ಕಚೇರಿಯಲ್ಲಿ ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ಒಂದೊಮ್ಮೆ ತಮಗೆ ಸಂಬಳ ನೀಡುತ್ತಿಲ್ಲ ಎಂದು ಎರಡು ದಿನಗಳ ಕಾಲ ತಮ್ಮ ಕರ್ತವ್ಯ ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದರೆ ಜೆಸಿ ಆಸ್ಪತ್ರೆಯ ಪರಿಸ್ಥಿತಿ ಹೇಳತೀರದಾಗಿರುತ್ತಿತ್ತು. ಆದರೆ, ತಮಗೆ ಸಂಬಳ ನೀಡದಿದ್ದರೂ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಟೆಂಡರ್‌ ಹಿಡಿದಾತ ಬೆಂಗಳೂರಿನಲ್ಲಿ ಕುಳಿತುಕೊಂಡು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಆ ಕಾರಣಕ್ಕಾಗಿ ಸಂಬಳ ನೀಡುತ್ತಿಲ್ಲ, ನಾನೂ ಸಂಕಷ್ಟದಲ್ಲಿದ್ದೇನೆ ಎಂದು ಸಬೂಬು ಹೇಳಿ ಕೊಂಡು ಓಡಾಡುತ್ತಿದ್ದಾನೆಂದು ತಿಳಿದು ಬಂದಿದೆ. ಆದರೆ, ಗುತ್ತಿಗೆ ಹಿಡಿದಾತ ಸರ್ಕಾರ ಹಣ ಬಿಡುಗಡೆ ಮಾಡಲಿ, ಬಿಡಲಿ ತಿಂಗಳ ಸಂಬಳವನ್ನು ಸರಿಯಾದ ಸಮಯಕ್ಕೆ ನೀಡುತ್ತೇನೆಂಬ ಷರತ್ತಿಗೊಳಪಟ್ಟೇ ಟೆಂಡರ್‌ನ್ನು ಗುತ್ತಿಗೆ ಹಿಡಿದಿರುತ್ತಾನೆ. ಅದನ್ನು ಪ್ರಶ್ನಿಸುವ ಅಧಿಕಾರ ಅಧಿ ಕಾರಿ ಹಾಗೂ ಜನಪ್ರತಿನಿಧಿಗಳಿಗೆ ಇದೆ. ಜೆಸಿ ಆಸ್ಪತ್ರೆಯಲ್ಲಿ 22 ಮಂದಿ ದಿನಗೂಲಿ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರ ಬದುಕೂ ಕಷ್ಟಕರವಾಗಿದೆ.ಆದರೆ ಜೆಸಿ ಆಸ್ಪತ್ರೆ ಮುಖ್ಯ ವೈದ್ಯಾ ಕಾರಿಯವರ ಭರವಸೆ ಮೇರೆಗೆ ನಾವೆಲ್ಲರೂ ನಾಲ್ಕು ತಿಂಗಳಿನಿಂದ ಸುಮ್ಮನೆ ಇದ್ದೇವೆ. ಇಂದಲ್ಲ ನಾಳೆಯಾದರೂ ನಮಗೆ ಸಂಬಳ ಕೊಡಿಸುತ್ತಾರೆ ಎನ್ನುವ ಭರವಸೆಯಿಂದ ಇದ್ದೇವೆ ಎಂದು ನೌಕರರೊಬ್ಬರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next