Advertisement
ಹೌದು. ಜಗನ್ ನೇತೃತ್ವದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದ ವರದಿ ಹೊರಬೀಳುತ್ತಿರುವಂತೆ ಉಡುಪಿ, ಪಡುಬಿದ್ರಿ, ಕಾಪು, ಕುಂದಾಪುರದ ಕೆಲವೆಡೆ ಹೆದ್ದಾರಿ ಚತುಷ್ಪಥ ಕಾಮಗಾರಿ ಕುರಿತ ಚರ್ಚೆ ಗರಿಗೆದರಿತು. ಇದಕ್ಕೆ ಕಾರಣ ಈ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿ ರೆಡ್ಡಿ ಮಾಲಕತ್ವದಲ್ಲಿರುವುದು. ಹಲವು ವರ್ಷಗಳಿಂದ ಕುಂಟುತ್ತಿರುವ ಈ ಹೆದ್ದಾರಿ ಕಾಮಗಾರಿ, ಟೋಲ್ ವಿರುದ್ಧ ಈಗಾಗಲೇ ಪ್ರತಿಭಟನೆಗಳು ನಡೆದಿವೆ.
ಹೆದ್ದಾರಿ ಅವ್ಯವಸ್ಥೆ ಕುರಿತು ಈ ಹಿಂದೆ ಮಾಧ್ಯಮದವರು ಸಂಸದೆ ಶೋಭಾ ಅವರನ್ನು ಪ್ರಶ್ನಿಸಿದಾಗಲೆಲ್ಲ, ನಾನು ಹಲವು ಬಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾ ಡಿದ್ದೇನೆ. ಅವರು ನವಯುಗ ಕಂಪೆನಿಯವರೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಅದು ತಾನು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಹೇಳುತ್ತಾ ಬಂದಿದೆ’ ಎನ್ನುತ್ತಿದ್ದರು. ಈಗ ಶೋಭಾ ಮತ್ತೂಮ್ಮೆ ಸಂಸದೆಯಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಪಾರು?
ಜಗನ್ ಗೆಲುವು ಅವರ ವ್ಯವಹಾರಕ್ಕೂ ಲಾಭ ತಂದುಕೊಡಬಹುದಾಗಿದ್ದು. ಆ ಮೂಲಕವಾದರೂ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂಬ ಆಶಯ ಜನರದ್ದು.