Advertisement

ಹಾಲಿ v/s ಮಾಜಿ ಸಿಎಂ ಸಮರ; ಪ್ರಜಾ ವೇದಿಕೆ ಸರ್ಕಾರಿ ಕಟ್ಟಡ ಧ್ವಂಸಕ್ಕೆ ಜಗನ್ ಆದೇಶ!

10:06 AM Jun 25, 2019 | Team Udayavani |

ವಿಜಯವಾಡ:ರಾಜಕೀಯದ ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೃಷ್ಣಾ ನದಿ ತೀರದ ಸಮೀಪ ಕಚೇರಿಯ ಸಭೆ ನಡೆಸುವ ಉದ್ದೇಶದಿಂದ ನಿರ್ಮಿಸಿದ್ದ “ಪ್ರಜಾ ವೇದಿಕೆ” ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಮವಾರ ಆದೇಶ ನೀಡಿದ್ದಾರೆ.

Advertisement

ಪ್ರಜಾ ವೇದಿಕೆ ಕಟ್ಟಡ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮನೆಯ ಸಮೀಪ ಇದ್ದು, ಇದನ್ನು 2017ರಲ್ಲಿ ಸಿಎಂ ಆಗಿದ್ದ ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಆಂಧ್ರಪ್ರದೇಶದ ಗದ್ದುಗೆ ಏರಿತ್ತು. ಮುಖ್ಯಮಂತ್ರಿ ಆದ ನಂತರ ಜಗನ್ ಮೊದಲ ಬಾರಿಗೆ ಪ್ರಜಾ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

ಈ ಸಭೆಯಲ್ಲಿ ಮಾತನಾಡಿದ ಸಿಎಂ ಜಗನ್, ಪ್ರಜಾ ವೇದಿಕೆ ಕಟ್ಟಡದಲ್ಲಿ ನಡೆಯುತ್ತಿರುವ ಕೊನೆಯ ಸಭೆ ಇದಾಗಿದೆ. ಇದು ಅಕ್ರಮ ಕಟ್ಟಡ, ಈ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಹೇಳಿದ್ದರು.

ಪ್ರಜಾ ವೇದಿಕೆ ಕಟ್ಟಡದಲ್ಲಿ ಸಭೆ ನಡೆಸುವುದು ಕಾನೂನು ಬಾಹಿರ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪ್ರಜಾ ವೇದಿಕೆ ಕಟ್ಟಡ ನಿರ್ಮಿಸಲಾಗಿದೆ. ನಾವೀಗ ಪ್ರತಿಯೊಂದು ಇಲಾಖೆಯಲ್ಲಿಯೂ ಪಾರದರ್ಶಕತೆ ತರಬೇಕಾಗಿದೆ. ಅಲ್ಲದೇ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಚಂದ್ರಬಾಬು ನಾಯ್ಡು ವಿರುದ್ಧ ಸಾಧ್ಯವಿರುವ ಕಠಿಣ ಕ್ರಮ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next