Advertisement

ಕ್ರಿಯಾಶೀಲವಾಗಿ ಕೆಲಸ ಮಾಡದಿದ್ರೆ ಕ್ರಮ: ಶಾಸಕ ರಾಮಚಂದ್ರ

05:59 PM May 08, 2020 | Naveen |

ಜಗಳೂರು: ಕೋವಿಡ್ ವೈರಸ್‌ ನಿಯಂತ್ರಿಸುವ ಸಲುವಾಗಿ ರಚಿಸಲಾಗಿರುವ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್‌ .ವಿ. ರಾಮಚಂದ್ರ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೋವಿಡ್‌-19 ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ವಿರುದ್ಧ ಯುದ್ಧಕ್ಕೆ ಯಾವಾಗಲೂ ಸಿದ್ಧರಿರಬೇಕು. ವೈರಾಣು ಆಕ್ರಮಣದ ನಂತರ ಯಾವುದೇ ಪ್ರಯತ್ನ ಫಲಕಾರಿಯಾಗದು ಎಂದರು.

ಜಿಲ್ಲೆಯಲ್ಲಿ 44ಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದೆ. ಆದರೆ ನನ್ನ ಕ್ಷೇತ್ರದಲ್ಲಿ ಯಾವುದೇ ಸೋಂಕಿತರಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ. ತಾಲೂಕಿನಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ ಗಳಲ್ಲಿ ಬಿಗಿ ಬಂದೋಬಸ್ತ್ ಇದೆ. ಇದನ್ನೂ ತಪ್ಪಿಸಿ ನುಸುಳಿದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕೆಂದರು. ಕ್ಷೇತ್ರದಲ್ಲಿ ಕುಡಿಯುವ ನೀರು, ಪೈಪ್‌ ಲೈನ್‌, ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ ಎಂದ ಶಾಸಕರು, ಕ್ವಾರಂಟೈನ್‌ ಗೆ ಸೂಕ್ತ ಸೌಲಭ್ಯವಿರುವ ಕಟ್ಟಡದ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್‌, ಪಟ್ಟಣದ ಲಿಂಗಣ್ಣನಹಳ್ಳಿ ರಸ್ತೆಯ ಪೋಸ್ಟ್‌ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ 24 ರೂಮ್‌, 50 ಬೆಡ್‌ಗಳಿವೆ. ಅವಶ್ಯಕತೆಯಿರುವಷ್ಟು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ, ಸಿಪಿಐ ದುರುಗಪ್ಪ, ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್‌. ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಸಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ನೀರಜ್‌, ಸಮಾಜಕಲ್ಯಾಣ ಇಲಾಖೆಯ ಅಶೋಕ್‌, ಬಿಸಿಎಂ ಇಲಾಖೆಯ ವೆಂಕಟೇಶಮೂರ್ತಿ, ತೋಟಗಾರಿಕೆ ಇಲಾಖೆಯ ವೆಂಕಟೇಶಮೂರ್ತಿ, ಪಿಎಸ್‌ಐ ಉಮೇಶ್‌ ಬಾಬು, ಬೆಸ್ಕಾಂ ಎಇಇ ಪ್ರವೀಣ್‌ಕುಮಾರ್‌, ಬಿಇಒ ಯುವರಾಜ್‌ ನಾಯ್ಕ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next