Advertisement

ವರ್ಷದಲ್ಲಿ ತಾಲೂಕಿಗೆ ನೀರು

12:27 PM Sep 23, 2019 | Naveen |

ಜಗಳೂರು: 15 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್‌.ವಿ. ರಾಮಚಂದ್ರ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.

Advertisement

ಭಾನುವಾರ ತಾಲೂಕಿನ ರಂಗಪುರ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು.

ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಇದಾಗಿದ್ದು, ಕಳೆದ 70 ವರ್ಷಗಳಲ್ಲಿ ಬಹುತೇಕ ಕಾಲ ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಮಳೆ ಇಲ್ಲದೇ ಫಸಲಿಗೆ ಬಂದ ಬೆಳೆ ಕೈಗೆ ಸಿಗದಂತಾಗುತ್ತಿದೆ ಎಂದರು.

ಸಿರಿಗೆರೆ ಶ್ರೀಗಳ ಕೃಪೆಯಿಂದ ತಾಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 350 ಕೋಟಿ ರೂ ಬಿಡುಗಡೆಯಾಗಿದ್ದು, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ 2.40 ಟಿಎಂಸಿ ನೀರು ಜಗಳೂರಿಗೆ ಮಂಜೂರಾಗಿದೆ. ಈ ಎರಡೂ ಕಾಮಗಾರಿಗಳಿಗೆ ಇನ್ನೆರಡು ತಿಂಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಇನ್ನೊಂದು ವರ್ಷದಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳಿದರು.

ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಮುಂಜೂರು ಮಾಡಿದ್ದರು. ಈಗ ಅವರೇ ಮತ್ತೆ ಮುಖ್ಯಮಂತ್ರಿಯಾಗಿ ತಾಲೂಕಿಗೆ 2.40 ಟಿ ಎಂ ಸಿ ನೀರು ಮುಂಜೂರು ಮಾಡಿದ್ದಲ್ಲದೇ ತಾಲೂಕಿನ 53 ಕೆರೆಗಳಿಗೆ ನೀರು ತುಂಬಿಸಲು ಅನುಮೋದನೆ ನೀಡಿ ಹಣ ಸಹ ಬಿಡುಗಡೆ ಮಾಡಿದ್ದಾರೆ ಎಂದರು.

Advertisement

ಪಟ್ಟಣದ ಯುಜಿಡಿ ಅಭಿವೃದ್ಧಿಗೆ 4 ಕೋಟಿ ರೂ. ಯೋಜನೆಗೆ ಅನುಮೊದನೆ ದೊರೆತಿದೆ ಎಂದರು. ನಾನು ಕೂಡ್ಲಿಗಿಗೆ ಹೊಗುವುದಿಲ್ಲ: ಭದ್ರಾ ಮೆಲ್ದಂಡೆ ನೀರಾವರಿ ಯೋಜನೆಯಡಿ ತಾಲೂಕಿಗೆ 1 ಟಿ ಎಂ ಸಿ ನೀರು ಸಾಕಾಗುತ್ತಿತ್ತು. ಆದರೆ ನಾನು ಮುಂದಿನ ಬಾರಿ ಕೂಡ್ಲಿಗಿ ಕ್ಷೇತ್ರಕ್ಕೆ ಹೋಗುವ ಯೋಚನೆಯಿಂದಲೇ 2.40 ಟಿ ಎಂ ಸಿ ನೀರು ಮುಂಜೂರು ಮಾಡಿಸಿದ್ದೇನೆ ಎಂದು ಕ್ಷೇತ್ರದ್ಯಾಂತ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು, ಇದೆಲ್ಲ ಸತ್ಯಕ್ಕೆ ದೂರ. ನಾನು ಎಲ್ಲಿಗೂ ಹೋಗುವುದಿಲ್ಲ. ತಾಲೂಕಿನಲ್ಲಿಯೇ ಇರುತ್ತೇನೆ ಎಂದು ಶಾಸಕ ಎಸ್‌.ವಿ. ರಾಮಚಂದ್ರ ಸ್ಪಷ್ಟನೆ
ನೀಡಿದರು.

ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಅವರು ಗುದ್ದಲಿಪೂಜೆ ನೆರವೇರಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ನಾಗಪ್ಪ, ಜಿ.ಪಂ ಸದಸ್ಯ ಮಂಜುನಾಥ, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಅಭಿಯಂತರರಾದ ಪ್ರಭು, ಪುರುಷೋತ್ತಮ, ರಾಮಚಂದ್ರ, ಮುಖಂಡರಾದ ಬಿಸ್ತುವಳ್ಳಿ ಬಾಬು, ಶೀನಪ್ಪ, ಪಲ್ಲಾಗಟ್ಟೆ ಮಹೇಶ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next