Advertisement

ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ

11:34 AM Jan 08, 2020 | |

ಜಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ದೇಶದ ಜನತೆಯಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿವೆ ಎಂದು ಸರಕಾರದ ಮಾಜಿ ಮುಖ್ಯ ಸಚೇತಕ ಡಾ| ಶಿವಯೋಗಿಸ್ವಾಮಿ ದೂರಿದರು.

Advertisement

ಪಟ್ಟಣದ ವಿದ್ಯಾನಗರದಲ್ಲಿ ಶಾಸಕ ಎಸ್‌.ವಿ. ರಾಮಚಂದ್ರ ನಿವಾಸದಲ್ಲಿ ತಾಲೂಕು ಬಿಜೆಪಿ ಘಟಕ ಸಿಎಎ ಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಜಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ ಸಭೆಯಲ್ಲಿ ಮಾತನಾಡಿದರು, ದೇಶದಲ್ಲಿ ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸದೆ ಮತ್ತು ಕಾಯ್ದೆಯನ್ನು ಅರ್ಥ ಮಾಡಿಕೊಳ್ಳದೆ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ದೇಶದ ಜನತೆಯ ದಾರಿತಪ್ಪಿಸುವಂತಹ ಕೆಲಸ ಮಾಡುತ್ತಿವೆ. ಹಾಗಾಗಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಪಕ್ಷದಿಂದ ನಡೆಯುತ್ತಿದೆ. ಈ ಕಾರ್ಯದಲ್ಲಿ ಬೂತ್‌ ಮಟ್ಟದ ಕಾರ್ಯ ಕರ್ತರ ಪಾತ್ರ ಮುಖ್ಯವಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ಪ್ರಧಾನಿಯವರಿಗೆ ಅಭಿನಂದನ ಪತ್ರ ಬರೆಸುವುದು, ಮಿಸ್‌ ಕಾಲ್‌ ಕೊಡಿಸುವುದು , ಬೈಕ್‌ ರ್ಯಾಲಿ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಮೊದಲು ನೀವು ಈ ಕಾಯ್ದೆಯ ಬಗ್ಗೆ ಸಂಪೂರ್ಣವಾಗಿ ಅರಿವನ್ನು ಹೊಂದಿ ಜಾಗೃತಿ ಮೂಡಿಸುವ ಕೆಲಸಕ್ಕೆ ಒತ್ತು ನೀಡಿ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್‌ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕದ್ದುಮುಚ್ಚಿ ಮಾಡಿದ್ದಲ್ಲ. ಒಂದು ವೇಳೆ ಈ ಕಾಯ್ದೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನಿಸಿದರೆ ಸುಪ್ರೀಂ ಕೊರ್ಟ್ನಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರು.

ಮಾಜಿ ಅಧ್ಯಕ್ಷ ಡಿ.ವಿ.ನಾಗಪ್ಪ ಮಾತನಾಡಿ, ಪಾಕ್‌, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್‌ದಲ್ಲಿನ ಹಿಂದು, ಸಿಖ್‌, ಕ್ರೈಸ್ತ, ಜೈನ್‌, ಪಾರ್ಸಿ ನಿರಾಶ್ರಿತರಿಗೆ ಈ ಕಾಯ್ದೆ ಪೌರತ್ವ ನೀಡುತ್ತದೆ ಎಂದು ಹೇಳಿದರು.

Advertisement

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ, ಡಿಸಿಸಿ ಬ್ಯಾಂಕ್‌ ನಾಮ ನಿರ್ದೇಶಿತ ಸದಸ್ಯ ಶರಣಪ್ಪ, ತಾ.ಪಂ ಮಾಜಿ ಅಧ್ಯಕ್ಷ ಆಂಜೀನಪ್ಪ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next