Advertisement

ತಂಬಾಕು-ಪಾನ್‌ಮಸಾಲಾ ಸೇವನೆ ಬೇಡ

04:13 PM Apr 19, 2020 | Naveen |

ಜಗಳೂರು: ಕೋವಿಡ್ ವೈರಸ್‌ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಜರ್ದಾ, ಖೈನಿ, ಪಾನ್‌ ಮಸಾಲ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾರ್ವಜನಿಕರು ಬಳಕೆ ಮಾಡುವುದನ್ನು ನಿಷೇಧಿಸಿದೆ ಎಂದು ಪಟ್ಟಣ ಪಂಚಾಯತ್‌ ಆರೋಗ್ಯ ನಿರೀಕ್ಷಕ ಕೀಫಾಯಾತ್‌ ಅಹಮ್ಮದ್‌ ಹೇಳಿದರು.

Advertisement

ಶನಿವಾರ ಪಟ್ಟಣದ ಗೋಸಾಯಿ ಕಾಲೋನಿಯಲ್ಲಿ ಪಟ್ಟಣ ಪಂಚಾಯತ್‌ ವತಿಯಿಂದ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜರ್ದಾ, ಖೈನಿ, ಪಾನ್‌ ಮಸಾಲ ಹಾಗೂ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕರ ಸೇವನೆ ಮಾಡಿ ಅಥವಾ ಜಗಿದು ಉಗಿಯುವುದರಿಂದ ಸೋಂಕು ಹರಡುವ ಸಂಭವವಿದೆ. ಯಾರು ಕೂಡ ಇದನ್ನು ಬಳಕೆ ಮಾಡಬಾರದು ಮತ್ತು ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಪ್ರತಿ ನಿತ್ಯ ಹಾಲು ವಿತರಣೆ ಮಾಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. ಗೋಸಾಯಿ ಸಮುದಾಯದ ತಾನಾಜಿ, ಪಪನ ಮೊಯಿದ್ದೀನ್‌, ಚಂದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next