Advertisement

ಎರಡು ಸಾವಿರ ಬೆಡ್‌ ವ್ಯವಸ್ಥೆಗೆ ಕಿಮ್ಸ್‌ಗೆ ಜಗದೀಶ ಶೆಟ್ಟರ ಸೂಚನೆ

05:30 PM Apr 24, 2021 | Team Udayavani |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಎದುರಿಸಲು ಕಳೆದ ಬಾರಿಗಿಂತ ದುಪ್ಪಟ್ಟು ಸಿದ್ಧತೆ ಮಾಡಿಕೊಳ್ಳಲು ಹಾಗೂ ಸುರಕ್ಷತೆ ದೃಷ್ಟಿಯಿಂದ 2000 ಬೆಡ್‌ ಸಿದ್ಧವಿರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಕೋವಿಡ್‌ ಸಿದ್ಧತೆಗಳ ಕುರಿತಾಗಿ ಕಿಮ್ಸ್‌ನ ಆಡಳಿತ ಭವನದಲ್ಲಿ ಶುಕ್ರವಾರ ಕಿಮ್ಸ್‌ನ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್‌ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇನ್ನು 5-6 ದಿನಗಳಲ್ಲಿ ಕಿಮ್ಸ್ ನಲ್ಲಿ 500ರಿಂದ 1,000 ಹಾಗೂ ಎಸ್‌ಡಿಎಂನಲ್ಲಿ 500 ಬೆಡ್‌ ಸೇರಿದಂತೆ ಸಿವಿಲ್‌, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2,000 ಬೆಡ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು 634 ಕೋವಿಡ್‌ ರೋಗಿಗಳು ದಾಖಲಾಗಿದ್ದಾರೆ.

ಪ್ರತಿದಿನ ಇಲ್ಲವೆ ದಿನಬಿಟ್ಟು ದಿನ ಸೊಂಕಿತರ ಸಂಖ್ಯೆ ಹೆಚ್ಚಳದ ಲೆಕ್ಕಾಚಾರ ಮೇಲೆ ಹಾಗೂ ಮುಂಬರುವ ದಿನಗಳಲ್ಲಿ ಆಕ್ಸಿಜನ್‌ ಸೌಲಭ್ಯವುಳ್ಳ ಬೆಡ್‌ಗಳ ಕೊರತೆಯಾಗಬಾರದೆಂದು ಕಿಮ್ಸ್‌ ನಲ್ಲಿ ಬೆಡ್‌ಗಳ ಸಂಖ್ಯೆಯನ್ನು ತಕ್ಷಣವೇ 1 ಸಾವಿರಕ್ಕೆ ವೃದ್ಧಿಸಲು ಹಾಗೂ ಖಾಸಗಿ ಆಸ್ಪತ್ರೆಯವರಿಗೂ ಶೇ. 50 ಬೆಡ್‌ಗಳನ್ನು ಕಾಯ್ದಿರಿಸಲು ಸೂಚಿಸಿದ್ದೇನೆ ಎಂದರು.

ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಿಮ್ಸ್‌ನ ಮೆಡಿಸಿನ್‌, ಅನಸ್ತೇಶಿಯಾ ಮಾತ್ರವಲ್ಲ ಎಲ್ಲ ವಿಭಾಗಗಳ ವೈದ್ಯರು, ಸಿಬ್ಬಂದಿ ಪಾಲ್ಗೊಂಡು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆಯ ದರಪಟ್ಟಿ ಪ್ರದರ್ಶಿಸುವಂತೆ ಹಾಗೂ ಅಲ್ಲಿನ ಸೌಲಭ್ಯ ಪರಿಶೀಲಿಸಲು ನೋಡಲ್‌ ಅಧಿ ಕಾರಿಗಳನ್ನು ನೇಮಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹು-ಧಾ ಪೊಲೀಸ್‌ ಆಯುಕ್ತ ಲಾಭೂ ರಾಮ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಈಶ್ವರ ಹೊಸಮನಿ, ಆಡಳಿತಾಧಿ ಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧಿಧೀಕ್ಷಕ ಡಾ| ಅರುಣಕುಮಾರ ಸಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಯಶವಂತ ಮದೀನಕರ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಸೇರಿದಂತೆ ಇತರೆ ವೈದ್ಯಾ ಧಿಕಾರಿಗಳು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next