Advertisement

ಉದ್ಧವ್ ಠಾಕ್ರೆ ಮೊದಲು ಕೋವಿಡ್ ನಿಯಂತ್ರಿಸುವ ಕೆಲಸ ಮಾಡಲಿ: ಜಗದೀಶ್ ಶೆಟ್ಟರ್

03:34 PM Jan 31, 2021 | Team Udayavani |

ಹುಬ್ಬಳ್ಳಿ: ಉದ್ಧವ್ ಠಾಕ್ರೆ ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈರತ್ವ ಬೆಳೆಸುವುದನ್ನು ಬಿಟ್ಟು ಮಹಾರಾಷ್ಟ್ರದಲ್ಲಿ ಕೋವಿಡ್-19 ನಿಯಂತ್ರಿಸುವ ಕೆಲಸ ಮಾಡಲಿ. ಇಂತಹ ಹೇಳಿಕೆಗಳು ಮೂರ್ಖತನದ ಪರಮಾವಧಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಸ್ಥಿರತೆ ಮತ್ತು ರಾಜಕೀಯ ಹಿನ್ನಡೆಯಾದಾಗ ಬೆಳಗಾವಿ ಗಡಿ ವಿಚಾರದ ಹೇಳಿಕೆಗಳು ಹೊರ ಬೀಳುತ್ತವೆ. ಗಡಿ ವಿಚಾರ ಇದು ಮುಗಿದು ಹೋದ ಅಧ್ಯಾಯ. ಅಲ್ಲಿನ ಸರಕಾರ ಜನಪ್ರಿಯತೆ ಕಳೆದುಕೊಂಡಿದೆ. ಸರ್ಕಾರದ ಬಗ್ಗೆ ಜನರ ಆಕ್ರೋಶವಿರುವ ಕಾರಣ ಇಂತಹ ಹೇಳಿಕೆ ನೀಡಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ‌ ಎಂದು ಠಾಕ್ರೆ ವಿರುದ್ಧ ಕಿಡಿ ಕಾರಿದರು.

ಕೇಂದ್ರ ಸರಕಾರ ಮಂಡಿಸುವ ಬಜೆಟ್ ವೇಳೆ ರಾಜ್ಯಕ್ಕೆ ಏಮ್ಸ್ ಬರುವ ನಿರೀಕ್ಷೆ ಇದೆ. ಜೊತೆಗೆ ಫಾರ್ಮೋ ಪಾರ್ಕ್ ದಂತಹ ಇನ್ನಿತರ ದೊಡ್ಡ ಮಟ್ಟದ ಪ್ರಾಜೆಕ್ಟ್ ನೀಡಿದರೆ, ಕೈಗಾರಿಕೆ ಕ್ಷೇತ್ರಕ್ಕೆ ಅನುಕೂಲ ಆಗಲಿದೆ. ಇದರ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಹ ಸಲ್ಲಿಸಲಾಗಿದೆ ಎಂದರು.

ಭಾರತ ಪಲ್ಸ್ ಪೋಲಿಯೋದಿಂದ ಮುಕ್ತವಾಗಿದೆ. ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಪೋಲಿಯೋ ಸಮಸ್ಯೆ ಇನ್ನು ಕಾಣಿಸಿಕೊಂಡಿದ್ದರಿಂದ ಭಾರತದಲ್ಲಿ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೋ ಅಭಿಯಾನ ಮುಂದುವರೆಸಲಾಗಿದೆ. ಪ್ರತಿವರ್ಷ ಎರಡು ಬಾರಿ ಆಯೋಜಿಸಲಾಗುತ್ತಿತ್ತು. ಈ ವರ್ಷ ಜ. 31ರಂದು ಮಾತ್ರ ಹಮ್ಮಿಕೊಳ್ಳಲಾಗಿದೆ. ಆದಷ್ಟು ಬೇಗ ಭಾರತ ಪೋಲಿಯೋ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲೆಯಲ್ಲಿ ಎರಡು ಲಕ್ಷಿಕ್ಕಿಂತ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದ್ದು, ಅದಕ್ಕಾಗಿ 900 ಬೂತ್ ಗಳನ್ನು ರಚಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next