ಹುಬ್ಬಳ್ಳಿ: ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಹೂಡಿಕೆ ಆಕರ್ಷಣೆ ನಿಟ್ಟಿನಲ್ಲಿ ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಡಿಸೆಂಬರ್ 23 ರಂದು ಮುಂಬೈನಲ್ಲಿ ರೋಡ್ ಶೋ ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ ಯಲ್ಲಿ ಹೂಡಿಕೆದಾರರ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬೈ ನಲ್ಲಿ ನಾವು ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಿ ಚರ್ಚಿಸುತ್ತೆವೆ.
ಬೆಂಗಳೂರು ಕೇಂದಿತ ಕೈಗಾರಿಕಾ ಸ್ಥಿತಿ ಬದಲು ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕದ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಆರಂಭಿಸುವ ಬಗ್ಗೆ ನೂತನ ಕೈಗಾರಿಕಾ ನೀತಿ ಯಲ್ಲಿ ಒತ್ತು ನೀಡಲಾಗುವುದು ಎಂದರು.
ಹುಬ್ಬಳ್ಳಿ, ಕಲಬುರಗಿಯಲ್ಲಿ ವಿಮಾನ ಸೌಲಭ್ಯ ಇದ್ದು, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದ ಕೇಂದ್ರ ಸರಕಾರ ಉದ್ಯಮ ಸ್ನೇಹಿಯಾಗಿದೆ. ಮುಂಬೈ -ಬೆಂಗಳೂರು ಕಾರಿಡಾರ್ ಅಡಿಯಲ್ಲಿ ಧಾರವಾಡ ವೂ ಅಭಿವೃದ್ಧಿಯಾಗಲಿದೆ ಎಂದರು.