Advertisement

ನಾಯಕತ್ವ ಬದಲಾವಣೆ ವಿಚಾರ ಸತ್ಯಕ್ಕೆ ದೂರ ; ಆ ಬಗ್ಗೆ ಚರ್ಚೆಯೇ ನಡೆದಿಲ್ಲ; ಜಗದೀಶ್ ಶೆಟ್ಟರ್

12:21 PM Jun 07, 2021 | Team Udayavani |

ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೇ ಯಾಕೆ ಚರ್ಚೆ ಆಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಇದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದ್ದು, ಇದರಿಂದ  ನಮಗೂ ಕೆಲಸ ಮಾಡಲು ಆಗುತ್ತಲ್ಲ ಎಂದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇಂತಹ ಸ್ಥಿತಿಯಿಂದ ಸರಕಾರದ ಆಡಳಿತಕ್ಕೆ ಹೊಡೆತ ಬೀಳುತ್ತದೆ ಎಂದು ನುಡಿದರು.

ಯಡಿಯೂರಪ್ಪ ಅವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅದಕ್ಕಾಗಿ ಅವರು ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ. ಮಾಧ್ಯಮಗಳಲ್ಲಿ ಬರುವ ಕೆಲ ವಿಷಯಗಳನ್ನು ಕಂಡು, ಬೇಸರದಿಂದ ಹೈಕಮಾಂಡ್ ಸೂಚಿದರೆ ರಾಜೀನಾಮೆ ನೀಡುವೆ ಎಂದು ಹೇಳಿರಬೇಕು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು‌.

ಇದನ್ನೂ ಓದಿ: ಶೀಘ್ರದಲ್ಲೇ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ವಿಶ್ವಾಸವಿದೆ: ಕೇಂದ್ರ ಸರ್ಕಾರ

ಕಳೆದ 5-6 ತಿಂಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ‌. ಎಲ್ಲಿ ಈ ಚರ್ಚೆ ಹುಟ್ಟಿತು, ಏನು ಅಂತ ಗೊತ್ತಾಗುತ್ತಿಲ್ಲ. ಈಗ ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ. ವರಿಷ್ಠರು ಮತ್ತು ನಮ್ಮ ಹಂತದಲ್ಲೂ ಸಹ ಬದಲಾವಣೆ ಚರ್ಚೆ ನಡೆದಿಲ್ಲ.ಯಾವುದೇ  ವ್ಯವಸ್ಥೆಯಲ್ಲಿ ಪರ್ಯಾಯ ನಾಯಕರು ಇರುತ್ತಾರೆ. ಅದನ್ನೇ ಸಿಎಂ ಹೇಳಿರುವಂತಹದ್ದು, ವಯಸ್ಸು ಅವರ ಕೆಲಸಕ್ಕೆ ಏನೂ ಅಡ್ಡಿ ಬಂದಿಲ್ಲ.  ಶಾಸರ ಸಹಿ ಸಂಗ್ರಹ ವಿಚಾರ ಕೂಡ ನನ್ನ ಗಮನಕ್ಕೆ ಬಂದಿಲ್ಲ ಎಂದರು.

Advertisement

ರಾಜ್ಯದಲ್ಲಿ ಕೋವಿಡ್   ಪಾಸಿಟಿವಿಟಿ ರೇಟ್ ಪ್ರತಿಶತ 5 ಕ್ಕಿಂತ ಕಡಿಮೆ ಬರುವವರೆಗೂ ಅನ್ ಲಾಕ್ ಇಲ್ಲ. ಜೂನ್ 14 ನಂತರ ಎಲ್ಲವೂ ದಿಢೀರ್ ಅಂತ ಅನ್ ಲಾಕ್ ಮಾಡಲ್ಲ. ಹಂತ ಹಂತವಾಗಿ  ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next