Advertisement
“ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಸಹಿತ ಮುಖ್ಯಮಂತ್ರಿ ಕುಟುಂಬದ ಯಾರೂ ಕೂಡ ಸರಕಾರ ಅಥವಾ ಇಲಾಖೆಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಬಗ್ಗೆ ಆರೋಪ ಮಾಡುವವರು ಪತ್ರ ಬರೆಯುವ ಬದಲು, ಧೈರ್ಯದಿಂದ ಬಹಿರಂಗವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.
ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ನಾಯಕರಿದ್ದಾಗ ಪರ್ಯಾಯದ ವಿಚಾರವೇ ಆಗತ್ಯವಿಲ್ಲ. ನರೇಂದ್ರ ಮೋದಿ ಅವರು ಮಾಸ್ ನಾಯಕರಿದ್ದಾರೆ. ಅವರ ಅನಂತರ ಯಾರು ಎಂಬುದನ್ನು ಈಗ ವಿಚಾರ ಮಾಡಲು ಸಾಧ್ಯವಿಲ್ಲ. ವಾಜಪೇಯಿ ಅವರು ಇದ್ದಾಗ ಮುಂದೆ ಯಾರು ಎಂಬುದು ಚರ್ಚೆಯಾಗಿಲ್ಲ. ಅನಂತರ ಮೋದಿ ಅವರು ವಿಶ್ವನಾಯಕರಾಗಿ ಬೆಳೆದರು. ಈಗ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಇದ್ದಾರೆ. ಮುಂದಿನ ಮೂರೂವರೆ ವರ್ಷಗಳ ಕಾಲ ನಮ್ಮ ಸರಕಾರ ಇರಲಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ವೈಯಕ್ತಿಕವಾಗಿ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುವುದು ಸರಿಯಲ್ಲ. ಯಡಿಯೂರಪ್ಪ ಬಿಟ್ಟು ಬೇರೆ ಯಾರು ಎಂಬುದರ ಕಲ್ಪನೆಯೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement
ಕಾಂಗ್ರೆಸ್ ಅಸಮರ್ಥವಾಗಿದೆ ಕಾಂಗ್ರೆಸ್‌ನವರೇ ರಾಜೀನಾಮೆ ಕೊಟ್ಟು ಬಂದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ. ಅದು ಕಾಂಗ್ರೆಸ್‌ನ ದೌರ್ಬಲ್ಯ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದೇ ಇರುವುದು ಕಾಂಗ್ರೆಸ್‌ನ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಸಚಿವ, ಅನಂತರ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ಸಚಿವನಾಗಿದ್ದರೂ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ಹೇಗೆ ಇದ್ದೇನೋ ಹಾಗೆಯೇ ಸೌಮ್ಯ ಮತ್ತು ಸರಳವಾಗಿಯೇ ಇದ್ದೇನೆ.
– ಜಗದೀಶ್ ಶೆಟ್ಟರ್,
ಕೈಗಾರಿಕೆ ಸಚಿವ