Advertisement
ಶ್ರೀಕೃಷ್ಣ ‘ಬಾಲಾಲಯ’ದಲ್ಲಿ ಬೆಳಗಿನ ನಿತ್ಯಪೂಜೆಯ ಅನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಬ್ರಹ್ಮಶ್ರೀ ಕೇಶವ ಶರ್ಮ ಅವರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಪುಣ್ಯಾಹವಾಚನ, ಪಂಚಗವ್ಯ, ಗಣಹೋಮ, ನವಗ್ರಹ ಹೋಮ, ಶಿವ ಪಂಚಾಕ್ಷರಿ ಹೋಮ, ರುದ್ರಾಭಿಷೇಕ, ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು, ಪುರೋಹಿತರಾದ ಜಯಪ್ರಕಾಶ್ ಹಾಗೂ ಅಶ್ವಥ್ ಅವರ ಸಹಯೋಗದಿಂದ ಸಾಂಗವಾಗಿ ನೆರವೇರಿದವು. ಧಾರ್ಮಿಕ ವಿಧಿಗಳ ಕತೃìಗಳಾಗಿ ಶಶಿಧರ್ ರಾವ್, ವಿಜಯಲಕ್ಷ್ಮೀ ರಾವ್ ದಂಪತಿ, ಸುರೇಶ್ ಭಾಗವತ್, ವೃಂದಾ ಭಾಗವತ್ ದಂಪತಿ, ರಾಮಚಂದ್ರ ರಾವ್, ಅನುರಾಧಾ ರಾವ್ ದಂಪತಿ, ಸುಧೀರ್ ಹೆಬ್ಟಾರ್, ಸಂಗೀತಾ ಹೆಬ್ಟಾರ್ ದಂಪತಿ ಮತ್ತು ಸುಬ್ರಹ್ಮಣ್ಯ ರಾವ್ ಉದಯಕುಮಾರಿ ದಂಪತಿ ಪಾಲ್ಗೊಂಡಿದ್ದರು. ಗೋಕುಲ ಭಜನಾ ಮಂಡಳಿ ಹಾಗೂ ವಲಯದ ಮಂಡಳಿಗಳಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರ ಗಳ ಪಠನೆ ನೆರವೇರಿತು. ಹವನದ ಪೂರ್ಣಾಹುತಿಯಾದ ಅನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ವೇದ ಘೋಷ, ಸಂಗೀತ, ನೃತ್ಯ, ಸರ್ವ ವಾದ್ಯ ಸೇವೆ ಜರಗಿತು. ಪ್ರಿಯಾಂಜಲಿ ರಾವ್ ನೃತ್ಯ ಸೇವೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕೇಶವ ಶರ್ಮ ಅವರು ತಮ್ಮ ಉಪನ್ಯಾಸದಲ್ಲಿ “ದೈವಾಂಶ ಸಂಭೂತರಾದ ಶ್ರೀ ಶಂಕರ ಭಗವತ್ಪಾದರು ಕೇವಲ 32 ವರ್ಷಗಳ ತನ್ನ ಜೀವಿತಾವಧಿಯಲ್ಲಿ ಷಣ್ಮತ ಸ್ಥಾಪನಾಚಾರ್ಯ ಎನಿಸಿದ ವರು. ಹಿಂದೂ ಧರ್ಮದ ಪುನರು ತ್ಥಾನ ಮಾಡಿ ನಮಗೆಲ್ಲ ಪೂಜ
ನೀಯ ಗುರುಗಳಾಗಿ¨ªಾರೆ. ಶ್ರೀ ಗುರುಗಳ ಅನುಗ್ರಹ ಸದಾ ನಮಗಿರಲಿ’ ಎಂದು ಹಾರೈಸಿದರು.
ಪಬ್ಲಿಕ್ ಟ್ರಸ್ಟ್, ಬಿಎಸ್‌ಕೆಬಿ ಅಸೋಸಿ
ಯೇಶನ್ ಹಾಗೂ ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.