Advertisement

ಬಿಜೆಪಿಗೆ ಕರೆದರೂ ಹೋಗಲ್ಲ… ಕಾಂಗ್ರೆಸ್ 15 – 20 ಎಂಪಿ ಸ್ಥಾನ ಗೆಲ್ಲುತ್ತೆ: ಶೆಟ್ಟರ್

10:54 AM Jul 26, 2023 | Team Udayavani |

ಕೊಪ್ಪಳ: ನನ್ನ ಅನುಭವದ ಪ್ರಕಾರ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 15 – 20 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಕೊಟ್ಟಿದ್ದು, ಈ ಆಧಾರದಲ್ಲಿ ನನ್ನ ರಾಜಕೀಯ ಅನುಭವದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. ಬಿಜೆಪಿಗೆ ಹೀನಾಯ ಸ್ಥಿತಿ ಎದುರಾಗಿದೆ ಎಂದರು.

ಸದ್ಯ ಲೋಕಸಭೆಗೆ ಸ್ಪರ್ಧಿಸುವ ಕುರಿತು ಚರ್ಚೆಯಾಗಿಲ್ಲ. ಕಾಂಗ್ರೆಸ್ ಪರವಾಗಿ ಅಲೆ ಇದೆ. ಮುಂದಿನ ಲೋಕಸಭಾ ಚುನಾವಣೆ 15 ರಿಂದ 20 ಸ್ಥಾನ ಗೆಲ್ಲಲಿದೆ ಎಂದರು.

ಜನಸಂಘದಲ್ಲಿ ಯಾವುದೇ ಲಿಂಗಾಯತ್ ನಾಯಕರು ಇದ್ದಿರಲಿಲ್ಲ. ಆ ಕಾಲದಲ್ಲಿ ನಾವು ಸಂಘದಲ್ಲಿ ಇದ್ದೇವು. ಅಂಥ ಪಕ್ಷದಲ್ಲಿ ನಾವು ಕೆಲಸ ಮಾಡಿದ್ದೆವು. ಆದರೆ ಅವರೇ ನಮ್ಮನ್ನ ಹೊರ ಹಾಕಿದರು. ಈಗ ಪಕ್ಷ ಸಿದ್ದಾಂತ ಯಾವುದೇ ಪಕ್ಷದಲ್ಲಿ ಉಳಿದಿಲ್ಲ ಎಂದರು. ಮತ್ತೆ ಬಿಜೆಪಿಗೆ ಕರೆದರೂ ಹೋಗುವುದಿಲ್ಲ. ಅಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈಗ ಯಾವ ಪಕ್ಷ ತತ್ವ ಸಿದ್ದಾಂತ ಉಳಿಸಿಕೊಂಡಿದೆ. ಜನಸಂಘದ ತತ್ವ ಸಿದ್ದಾಂತ ಈಗಿನ ಬಿಜೆಪಿಯಲ್ಲಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಯತ್ನ ಮಾಡುತ್ತೇನೆ. ನನನ್ನು ಬಿಜೆಪಿ ಯಾವ ರೀತಿ ನಡೆಸಿಕೊಂಡರು. ಯಾವ ರೀತಿ ಅಮಾವನಕರವಾಗಿ ನಡೆದುಕೊಂಡರು ಎನ್ನುವುದು ಗೊತ್ತಿದೆ. ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ನನ್ನನ್ನು ನಡೆಸಿಕೊಳ್ಳುತ್ತಿದೆ. ಬಿಜೆಪಿ ಹಠಕ್ಕೆ ಬಿದ್ದು ನನ್ನ ಸೋಲಿಸಲು ಹೋಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದರು.

ಸಿಎಂ ಬದಲಾವಣೆಯ ವಿಚಾರ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಇರುತ್ತಾರೆ ಎಂದರು.

Advertisement

ಬಿಜೆಪಿಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದಷ್ಟು ಶೋಚನಿಯ ಸ್ಥಿತಿಗೆ ಬಂದಿದೆ. ರಾಜ್ಯಾಧ್ಯಕ್ಷರ ಆಯ್ಕೆ ಮಾಡದಷ್ಟು ಅರಾಜಕತೆ ಉಂಟಾಗಿದೆ. ನಮ್ಮಂಥ ಹಿರಿಯರ ಹೊರಗೆ ಕಳುಹಿಸಿದ ನಂತರ ಏನಾಗಿದೆ ಎಂಬುವುದು ಗೊತ್ತಾಗುತ್ತದೆ.

ಕಾಂಗ್ರೆಸ್ ಹಿರಿಯ ಶಾಸಕರು ಸಿಎಂಗೆ ಪತ್ರ ಬರೆದ ಹಿನ್ನೆಲೆ, ಸಿಎಲ್ ಪಿ ಸಭೆಯಲ್ಲಿ ಎಲ್ಲಾ ನಿರ್ಧಾರವಾಗುತ್ತದೆ. ಅಲ್ಲಿ ಎಲ್ಲಾ ಚರ್ಚೆಯಾಗಿದೆ. ಬಿ ಆರ್ ಪಾಟೀಲ ಎನ್ನಲಾಗುವ ಪತ್ರ ಫೇಕ್ ಎಂದು ತಿಳಿಸಿದ್ದಾರೆ. ಇವೆಲ್ಲವೂ ಆಂತರಿಕವಾಗಿ ಚರ್ಚೆಯಾಗುತ್ತವೆ ಎಂದರು.

ಮಣಿಪುರ ಗಲಾಟೆ ನಿಯಂತ್ರಿಸಲು ಅಲ್ಲಿಯ ಸರಕಾರ ವಿಫಲವಾಗಿದೆ. ಬಿಜೆಪಿಯವರು ಸರಕಾರದ ಮುಖ್ಯಮಂತ್ರಿ ರಾಜಿನಾಮೆ ಪಡೆಯಬೇಕು. ಅಲ್ಲಿಯ ಸರಕಾರ ಶಾಂತಿ ಕಾಪಾಡಲು ವಿಫಲವಾಗಿದೆ ಎಂದರು. ಈ ವೇಳೆ ಮುಖಂಡರಾದ ರಾಜಶೇಖರ ಹಿಟ್ನಾಳ, ಅಂದಪ್ಪ ಜವಳಿ, ಶಿವಕುಮಾರ, ಗುರುರಾಜ ಹಲಗೇರಿ ಇದ್ದರು.

ಇದನ್ನೂ ಓದಿ: ‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಬಿಡೆವು; ಕುಯಿಲಾಡಿ

Advertisement

Udayavani is now on Telegram. Click here to join our channel and stay updated with the latest news.

Next