Advertisement
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಉಮೇಶ್ ಜಾಧವ್ ಅವರನ್ನು ಪ್ರಧಾನಿಸಮ್ಮುಖದಲ್ಲೇ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ರಾಜ್ಯ ನಾಯಕರು ಚಿಂತಿಸಿದ್ದಾರೆ. ಆದರೆ ಉಮೇಶ್ ಜಾಧವ್ ಅವರು ಸಲ್ಲಿಸಿರುವ ರಾಜೀನಾಮೆ ಅಂಗೀಕಾರ ವಿಳಂಬವಾದರೆ ಇಲ್ಲವೇ ಇತರೆ ಸ್ವರೂಪ ಪಡೆದುಕೊಳ್ಳುವ ಆತಂಕವೂ ಕೆಲ ನಾಯಕರಿಗಿದೆ. ಹಾಗಾಗಿ ಪ್ರಧಾನಿಯವರು ಪಾಲ್ಗೊಳ್ಳುವ ಚುನಾವಣಾ ರ್ಯಾಲಿ ಸಂದರ್ಭದಲ್ಲೇ ಪಕ್ಷ ಸೇರ್ಪಡೆಯಾಗುವ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಮಂಗಳವಾರದ ಬೆಳವಣಿಗೆಯನ್ನು ಗಮನಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.