Advertisement

ಜಾಧವ್‌ ನನ್ನ ವಿರುದ್ಧ ಸ್ಪರ್ಧೆ ಮಾಡಲಿ: ಖರ್ಗೆ

01:41 AM Feb 10, 2019 | Team Udayavani |

ಕಲಬುರಗಿ: ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ| ಉಮೇಶ ಜಾಧವ್‌ ಅವರನ್ನು ಬಿಜೆಪಿಗೆ ಕರೆ ತಂದು ನನ್ನ ವಿರುದ್ಧ ಸ್ಪರ್ಧಿಸಲು ಪ್ರಧಾನಿ ಮೋದಿ, ಅಮಿತ್‌ ಶಾ ತಂತ್ರ ರೂಪಿಸಿದ್ದಾರೆ. ಇದನ್ನು ನೋಡಿದರೆ ಮೋದಿ ಗಮನಕ್ಕೆ ನಾನು ಬಂದಿದ್ದೇನೆ ಎನ್ನುವುದು ಅರ್ಥವಾಗುತ್ತದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜನರು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಶಾಸಕ ಡಾ| ಉಮೇಶ ಜಾಧವ್‌ ಅತೃಪ್ತಿ ಬಗ್ಗೆ ನಾನು ಮಾತನಾಡಲ್ಲ. ರಾಜ್ಯಪಾಲರ ವಂದನಾ ನಿರ್ಣಯ ವೇಳೆ ಎಷ್ಟು ಶಾಸಕರು ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಬಹಿರಂಗವಾಗಿ ಹೋದವರು ಶಾಶ್ವತವಾಗಿ ಹೋದ ಹಾಗೆ. ಲೋಕಸಭೆ ಚುನಾವಣೆಯಲ್ಲಿ ಜಾಧವ್‌ ಸ್ಪರ್ಧೆ ಮಾಡು ವುದಾದರೆ ಮಾಡಲಿ. ಈ ಮೂಲಕವಾದರೂ ಕಲಬುರಗಿ ಜನರತ್ತ ಎಲ್ಲರೂ ನೋಡುವಂತಾಗಲಿ ಎಂದು ಹೇಳಿದರು.

Advertisement

ಏಕವಚನದಲ್ಲಿ ವಾಗ್ಧಾಳಿ: ಕಾಂಗ್ರೆಸ್‌ 70 ವರ್ಷಗಳಿಂದ ಏನು ಮಾಡಿದೆ ಎಂದು ಪ್ರತಿ ಬಾರಿ ಪ್ರಧಾನಿ ಮೋದಿ ಪ್ರಶ್ನಿಸುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಜನರು, ಯುವಕರ ದಿಕ್ಕು ತಪ್ಪಿಸಲು ಮೋದಿ ಪ್ರತಿ ಬಾರಿ ‘ಸತ್ತರ್‌ ಸಾಲ್‌ ಕ್ಯಾ ಕಿಯಾ’ ಎಂದು ಬೈತಾನೆ. ನಮಗೆ ಬೈಯ್ಯುವ ಭರಾಟೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡ, ಅಟಲ್‌ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರನ್ನು ಬೈತಾನೆ. ನಾನೊಬ್ಬನೆ ಅನ್ನೋ ಅಹಂ ಮೋದಿಗೆ ಇದೆ ಎಂದು ಮೋದಿ ವಿರುದ್ಧ ಏಕವಚನದÇ್ಲೇ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next