ಮೊಹಾಲಿ: ಬ್ಯಾಟಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದ ರವೀಂದ್ರ ಜಡೇಜಾ ಇದೀಗ ಬೌಲಿಂಗ್ ನಲ್ಲೂ ಅದ್ಭುತ ಕೈಚಳಕ ತೋರಿದ್ದಾರೆ. ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಲಂಕಾ ಕೇವಲ 174 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಈ ಮೂಲಕ ಭಾರತ ತಂಡ 400 ರನ್ ಗಳ ಬೃಹತ್ ಮೊದಲ ಇನ್ನಿಂಗ್ಸ್ ಲೀಡ್ ಪಡೆದಿದೆ. ಲಂಕಾಗೆ ಫಾಲೋ ಆನ್ ಹೇರಿದ್ದು, ಭೋಜನ ವಿರಾಮದ ವೇಳೆ ಲಂಕಾ 10 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 574 ರನ್ ಗಳಿಸಿದ್ದ ವೇಳೆ ಡಿಕ್ಲೇರ್ ಮಾಡಿಕೊಂಡಿತ್ತು.
ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಗೆ 108 ರನ್ ಗಳಿಸಿದ್ದ ಲಂಕಾ ಇಂದು ಸತತ ವಿಕೆಟ್ ಕಳೆದುಕೊಂಡಿತು. ಪತ್ತುನ್ ನಿಸಾಂಕ ಅವರು ಅರ್ಧಶತಕವೊಂದೇ ಲಂಕಾ ಇನ್ನಿಂಗ್ಸ್ ನ ಹೈಲೈಟ್ಸ್. ಅವರು ಅಜೇಯ 61 ರನ್ ಗಳಿಸಿದರು. ಕೊನೆಯ ನಾಲ್ಕು ಬ್ಯಾಟರ್ ಗಳು ಶೂನ್ಯಕ್ಕೆ ಔಟಾದರು.
ಇದನ್ನೂ ಓದಿ:ವನಿತಾ ವಿಶ್ವಕಪ್ ಕ್ರಿಕೆಟ್ : ಬಿಗ್ ಮ್ಯಾಚ್ ಗೆದ್ದ ಆಸ್ಟ್ರೇಲಿಯ
ರವೀಂದ್ರ ಜಡೇಜಾ ಐದು ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶಮಿ ಪಾಲಾಯಿತು.