Advertisement

ಜಡೇಜ ಹೋಟಲಲ್ಲಿ ಅಯೋಗ್ಯ ಆಹಾರ

07:45 AM Oct 09, 2017 | |

ನವದೆಹಲಿ: ಭಾರತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ “ಜಡ್ಡು ಫ‌ುಡ್‌ ಫೀಲ್ಡ್‌’ರೆಸ್ಟೋರೆಂಟ್‌ನಲ್ಲಿ ತಿನ್ನಲು ಅಯೋಗ್ಯ ಆಹಾರ ಸಿಕ್ಕಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜ್‌ ಕೋಟ್‌ ನಗರಪಾಲಿಕೆ ನಡೆಸಿದ ದಾಳಿಯಲ್ಲಿ ವಿಷಯ ಬಹಿರಂಗಗೊಂಡಿದೆ.

Advertisement

ಇದೊಂದು ಆಘಾತಕಾರಿ ಸುದ್ದಿಯಾಗಿದ್ದು ಜನರನ್ನು ತಲ್ಲಣಗೊಳಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ರಾಜ್‌ಕೋಟ್‌ನಲ್ಲಿ ಜಡೇಜ ರೆಸ್ಟೋರೆಂಟ್‌ ನಡೆಸುತ್ತಿದ್ದಾರೆ. ಇಲ್ಲಿ ಪಾಲಿಕೆ ನಡೆಸಿದ ದಾಳಿಯ ವೇಳೆ ಸಿಕ್ಕಿರುವ ಆಹಾರ ಪದಾರ್ಥಗಳಾದ ಬ್ರೆಡ್‌ನ‌ಲ್ಲಿ ಫ‌ಂಗಸ್‌ ಹಿಡಿದಿತ್ತು. ಮಾತ್ರವಲ್ಲ ಹಲವು ದಿನಗಳಿಂದ ಶೇಖರಿಸಿಟ್ಟಿದನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜತೆಗೆ ಇಲ್ಲಿ ಸಂಗ್ರಹವಾಗಿದ್ದ ಬಹುತೇಕ ಆಹಾರ ಪದಾರ್ಥದ ಪೊಟ್ಟಣಗಳಲ್ಲಿ ಎಕ್ಸ್‌ಪೈರಿ ದಿನಾಂಕವೇ ನಮೂದಾಗಿಲ್ಲ. ಜತೆಗೆ ಹಾಳಾಗಿರುವ ತರಕಾರಿಗಳನ್ನು ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ರೆಸ್ಟೋರೆಂಟನ್ನು ಜಡೇಜ ಸಹೋದರಿ ನೈನಾ ನೋಡಿಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next