Advertisement
ಎಂತಹ ಸಂಪನ್ಮೂಲಕ್ಕೆ ಎಂತಹ ದುರವಸ್ಥೆ! ಹೀಗೆ ಹಲಸು ಹಾಳಾಗಲು ನಮ್ಮ ಅಲಕ್ಷ್ಯವೇ ಕಾರಣವಲ್ಲವೇ?ಈ ಹಿನ್ನೆಲೆಯಲ್ಲಿ, ಹಲಸಿನ ಬಗೆಬಗೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಸಂಘಟಿಸಲಾಗುತ್ತಿರುವ ಹಲಸು ಹಬ್ಬಗಳು ಮುಖ್ಯವಾಗುತ್ತವೆ. ಇತ್ತೀಚೆಗಿನ ಹಲಸು ಹಬ್ಬ ಆಯೋಜಿಸಿದ್ದು ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ.
Related Articles
Advertisement
ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲಿಕ್ಕಾಗಿ ಶ್ರೀಪಡ್ರೆಯವರು ಸೂಚಿಸಿದ್ದು ಎರಡು ದಾರಿಗಳನ್ನು: ಮೊದಲನೆಯದು, ಉತ್ತರ ಭಾರತದಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಮೂಡಿಸುವುದು. ಈಗ ಅಲ್ಲಿ ತರಕಾರಿಯಾಗಿ ಹಲಸಿನ ಕಾಯಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಹಲಸಿನ ಹಣ್ಣಿನ ಬಳಕೆ ಅಲ್ಲಿ ಬಹಳ ಕಡಿಮೆ. ಎರಡನೆಯದಾಗಿ, ಹಲಸಿನ ಕಾಯಿಯ ಸೊಳೆಯ ಗ್ಲೆ„ಸೆಮಿಕ್ಸ್ ಇಂಡೆಕ್ಸ್ ಕಡಿಮೆ ಇರುವ ಕಾರಣ ಅದು ಸಕ್ಕರೆ ಕಾಯಿಲೆಯವರಿಗೆ ಸೂಕ್ತ ಆಹಾರ ಎಂಬುದಕ್ಕೆ (ಇದು ಅಧ್ಯಯನಗಳಿಂದ ದೃಢಪಟ್ಟಿರುವ ವಿಷಯ) ವ್ಯಾಪಕ ಪ್ರಚಾರ ನೀಡುವುದು. ಹೆಚ್ಚೆಚ್ಚು ಮಧುಮೇಹಿಗಳು ತರಕಾರಿಯಾಗಿ ಹಸಿಹಲಸು ತಿನ್ನತೊಡಗಿದರೆ, ಅದಕ್ಕೆ ಬೇಡಿಕೆ ಖಂಡಿತ ಹೆಚ್ಚಲಿದೆ.
ಈಗ ದಕ್ಷಿಣ ಭಾರತದಲ್ಲಿ ಹಬ್ಬುತ್ತಿರುವ ಹಲಸು ಜಾಗೃತಿ ಆಂದೋಲನವು ಸ್ಥಳೀಯ ಉತ್ತಮ ತಳಿಗಳ ಆಯ್ಕೆ ಹಾಗೂ ಕೃಷಿಯಿಂದ ಶುರು ಮಾಡಿ, ಮುನ್ನಡೆದರೆ ಭಾರತ ಹಲಸಿನ ಕೃಷಿ ಮತ್ತು ಉದ್ದಿಮೆ ಎರಡರಲ್ಲೂ ಮುಂಚೂಣಿಗೆ ಬರಲು ಸಾಧ್ಯವಿದೆ. ವಿಯೆಟ್ನಾಮಿನ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಕೇವಲ ಒಂದೂವರೆ ದಶಕದಲ್ಲಿ ಅಲ್ಲಿ ಹಲಸು ಪ್ಲಾಂಟೇಷನ್ 50,000 ಹೆಕ್ಟೇರಿಗೆ ವ್ಯಾಪಿಸಿದೆ. ಅಲ್ಲಿ ಬೆಳೆಯುವ ಹಲಸಿನ ಶೇಕಡಾ 60ರಷ್ಟು ಉದ್ದಿಮೆಗೆ ಬಳಕೆ ಆಗುತ್ತದೆ. ವಿಯೆಟ್ನಾಮಿನ ಮುಖ್ಯ ಹಲಸಿನ ಉತ್ಪನ್ನ ಬಕ್ಕೆ ಹಣ್ಣಿನ ವ್ಯಾಕ್ಯೂಮ… ಫ್ರೈ ಚಿಪ್ಸ್. ಇದರ ಉತ್ಪಾದನೆಗೆ ಸ್ವಯಂಚಾಲಿತ ಯಂತ್ರಗಳು ಹಾಗೂ ತೀರಾ ಕಡಿಮೆ ಎಣ್ಣೆಯ ಬಳಕೆ. ಈಗ ಇದರ ಉತ್ಪಾದನೆಯಲ್ಲಿ ಜಗತ್ತಿನÇÉೇ ಮೊದಲ ಸ್ಥಾನದಲ್ಲಿದೆ ಅಲ್ಲಿನ ವಿನಾಮಿಟ್ ಕಂಪೆನಿ. ಹಲವು ದೇಶಗಳಿಗೆ ಇದನ್ನು ರಫ್ತು ಮಾಡುತ್ತಿರುವ ಈ ದೈತ್ಯ ಕಂಪೆನಿಯ ಹಲಸಿನ ತೋಟದ ವಿಸ್ತೀರ್ಣ 10,000 ಹೆಕ್ಟೇರ್. ವಿಯೆಟ್ನಾಮಿನಲ್ಲಿ ಹಲಸು ಉದ್ದಿಮೆ ಬೃಹತ್ತಾಗಿ ಬೆಳೆಯಲು ಪ್ರಧಾನ ಕಾರಣಗಳು: ಏಕಬೆಳೆಯಾಗಿ ವಿಸ್ತಾರ ತೋಟಗಳಲ್ಲಿ ಹಲಸಿನ ಕೃಷಿ ಹಾಗೂ ಪೂರ್ವಸಂಸ್ಕರಣಾ ಕೇಂದ್ರಗಳು (ಪ್ರಿ-ಪೊ›ಸೆಸಿಂಗ್ ಸೆಂಟರ್ಸ್). ಈಗ ಕೇರಳದಲ್ಲಿ ಎರಡು ಹಲಸು ಉದ್ಯಮ ಘಟಕಗಳು ಇಂತಹ ಕೇಂದ್ರಗಳನ್ನು ತೆರೆದಿರುವುದು ಆಶಾದಾಯಕ ಬೆಳವಣಿಗೆ.
ಹಲಸು ಭವಿಷ್ಯದ ಬೆಳೆ ಆಗಬೇಕಾದರೆ, ಹಲಸಿನ ಕೃಷಿ ಬಗ್ಗೆ ಕೃಷಿಕರು ತಮ್ಮ ಧೋರಣೆಯನ್ನೇ ಬದಲಾಯಿಸ ಬೇಕಾಗಿದೆ. ಹಲಸಿನ ಗಿಡ ನೆಟ್ಟರಾಯಿತು, ಅದರ ಪಾಡಿಗೆ ಅದು ಬೆಳೆಯುತ್ತದೆ ಎಂಬ ಧೋರಣೆ ಸಲ್ಲದು. ಅದನ್ನು ಕಾಫಿ ಪ್ಲಾಂಟೇಷನುಗಳಂತೆ ವೈಜ್ಞಾನಿಕವಾಗಿ ಬೆಳೆಸಬೇಕಾಗಿದೆ. ಹಲಸಿನ ಮರಗಳು 15 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡಲೇ ಬಾರದು. ಹಲಸಿನ ಗಿಡಗಳ ಪೂ›ನಿಂಗ್ (ವರ್ಷಕ್ಕೆ ಎರಡು ಸಲ) ಕಡ್ಡಾಯ. ಹಲಸಿನ ಕಾಯಿಗಳ ಥಿನ್ನಿಂಗ್ ಕೂಡ ಅತ್ಯಗತ್ಯ.
ಹಲಸಿನ ಉತ್ಪನ್ನಗಳ ಉತ್ಪಾದಕರೂ ತಮ್ಮ ಧೋರಣೆ ಬದಲಾಯಿಸಬೇಕಾಗಿದೆ. ಉತ್ಪನ್ನ ಹೇಗಿದ್ದರೂ ಮಾರಾಟವಾಗುತ್ತದೆ ಎಂಬ ಧೋರಣೆ ಸಲ್ಲದು. ಗುಣಮಟ್ಟ ಸುಧಾರಣೆ ಮತ್ತು ಆಕರ್ಷಕ ಪ್ಯಾಕೇಜಿಂಗ್ ಇಂದಿನ ತುರ್ತು. ಚುಟುಕಾಗಿ ಹೇಳಬೇಕೆಂದರೆ, ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಇತರ ಅತ್ಯುತ್ತಮ ಬ್ರಾಂಡಿನ ಆಹಾರ ಉತ್ಪನ್ನಗಳಿಗೆ ಸ್ಪರ್ಧೆ ನೀಡುವಂತಿರಬೇಕು. ಇವನ್ನೆಲ್ಲ ಸಾಧಿಸಿದರೆ, ಹಲಸಿನ ತವರೂರಾದ ಭಾರತದಲ್ಲಿ ಹಲಸು ಭವಿಷ್ಯದ ಬೆಳೆಯಾಗಲಿದೆ.
-ಅಡೂxರು ಕೃಷ್ಣ ರಾವ್