Advertisement
ಹಲಸಿನ ಕಾಯಿಯ ಮಂಚೂರಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ. ಹಾಗಾದ್ರೆ ಇನ್ನೇಕೆ ತಡ, ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಹಲಸಿನ ಕಾಯಿಯ ಮಂಚೂರಿ ಮಾಡುವ ಬನ್ನಿ.
ಎಳೆಯ ಹಲಸಿನ ಕಾಯಿ 2 ಕಪ್, ಮೈದಾ 1/2 ಕಪ್, ಕಾನ್ ಫ್ಲೋರ್ 1/4 ಕಪ್, ಮೆಣಸಿನ ಪುಡಿ 4ಚಮಚ, ಅರಶಿನ ಪುಡಿ -2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಈರುಳ್ಳಿ 2, ದೊಣ್ಣೆ ಮೆಣಸು(ಕ್ಯಾಪ್ಸಿಕಂ)ಸಣ್ಣದು 1, ಸೋಯಾ ಸಾಸ್ 2ಚಮಚ, ಟೊಮೆಟೋ ಸಾಸ್ 3 ಚಮಚ, ರೆಡ್ ಚಿಲ್ಲಿ ಸಾಸ್ 2 ಚಮಚ, ವಿನೆಗರ್ ಸ್ವಲ್ಪ, ಎಣ್ಣೆ, ಕೊತ್ತಂಬರಿ ಸೊಪ್ಪು(ಅಲಂಕಾರಕ್ಕೆ), ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಮೊದಲಿಗೆ, ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಹದ ಗಾತ್ರದ ಹೋಳುಗಳಾಗಿ ಮಾಡಿಟ್ಟ ಎಳೆಯ ಹಲಸಿನ ಕಾಯಿ ,ಮೆಣಸಿನ ಪುಡಿ, ಅರ್ಧ ಟೀಸ್ಪೂನ್ ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸುಮಾರು 5ನಿಮಿಷಗಳ ಕಾಲ ಬೇಯಿಸಿ ಇಟ್ಟುಕೊಳ್ಳಿ . ತದನಂತರ ಇನ್ನೊಂದು ಪಾತ್ರೆಯಲ್ಲಿ ಮೈದಾ, ಕಾನ್ ಫ್ಲೋರ್, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿಟ್ಟ ಹಲಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ .ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದನಂತರ ಮಾಡಿಟ್ಟ ಹಲಸಿನ ಕಾಯಿ ಮಿಶ್ರಣವನ್ನು ಹಾಕಿ ಸರಿಯಾಗಿ ಫ್ರೈ ಮಾಡಿ. ಆಮೇಲೆ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿಯಿರಿ. ತದನಂತರ ಟೊಮೆಟೋ ಸಾಸ್, ರೆಡ್ ಚಿಲ್ಲಿ ಸಾಸ್ ಮತ್ತು ವಿನೆಗರ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಕಾಯಿಸಿಟ್ಟಿದ್ದ ಹಲಸಿನ ಕಾಯಿಯನ್ನುಹಾಕಿ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿರಿ. ಅಂತಿಮವಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿರಿ.
Related Articles
Advertisement
-ಶ್ರೀರಾಮ್ ಜಿ.ನಾಯಕ್