Advertisement

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

03:24 PM May 26, 2024 | Team Udayavani |

ದೇವನಹಳ್ಳಿ: ಬಯಲು ಸೀಮೆಯ ರೈತರು ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಹಾಗೂ ಇರುವ ಭೂಮಿ ಯಲ್ಲಿಯೇ ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾದರಿಯ ಜೀವನ ನಡೆಸುತ್ತಿದ್ದಾರೆ. ಹಲಸಿನ ಹಣ್ಣಿಗೆ ಈ ಬಾರಿ ಉತ್ತಮ ಬೆಲೆ ಸಿಕ್ಕಿದ್ದು, ಬೆಳೆಗಾರರು ಲಾಭದ ಸಿಹಿ ಹೊಂದಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಫ‌ಲವತ್ತಾದ ಭೂಮಿಗಳನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಭೂಸ್ವಾಧೀನ, ನಂತರ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿಯಿಂದ 1777 ಎಕರೆ ಭೂಸ್ವಾಧೀನ. ಹೀಗೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ರೈತರು ಫ‌ಲವತ್ತಾದ ಭೂಮಿಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಆದರೂ ಸಹ ರೈತರು ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ.

ಹವಾಮಾನ ವೈಫ‌ಲ್ಯಗಳಿಂದ ಫ‌ಸಲು ಕುಸಿತ : ಹವಾಮಾನ ವೈಫ‌ಲ್ಯಗಳಿಂದ ಫ‌ಸಲು ಕುಸಿತ ಪರಿಣಾಮ ಹಣ್ಣುಗಳ ದರದ ಮೇಲೆ ಪರಿಣಾಮ ಬೀರಿದೆ. ಆದರೂ ಹಲಸಿಗೆ ಉತ್ತಮ ಬೆಲೆ ಸಿಕ್ಕಿದೆ. ಹಲಸಿಗೆ 2021ರಲ್ಲಿ ಪ್ರತಿ ಕೆ.ಜಿಗೆ 6 ರಿಂದ 10ರೂ ಸಿಗುತ್ತಿತ್ತು. 2022 ರಲ್ಲಿ 12 ರಿಂದ 15ರೂ.ಗೆ ಏರಿಕೆ ಕಂಡಿತ್ತು. ಈ ಬಾರಿ 20ರೂ. ಗಡಿ ದಾಟಿದೆ. ಪ್ರತಿ ಕಾಯಿಯ ಮೇಲೆ 100 ರಿಂದ 500ರೂ.ವರೆಗೂ ಏರಿಕೆ ಕಂಡಿದೆ. ರೋಗನಿರೋಧಕ ಗುಣಗಳನ್ನು ಹೊಂದಿರುವ ಹಲಸಿನ ಹಣ್ಣು ರುಚಿಗೆ ಮಾರು ಹೋಗದವರಿಲ್ಲ. ಘಮಘಮಿಸುವ ವಾಸನೆಯಿಂದಲೇ ತನ್ನತ್ತ ಸೆಳೆಯುವ ಹಲಸಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾರುಕಟ್ಟೆ, ಪ್ರಮುಖ ಜನನಿಬಿಡ ಪ್ರದೇಶ, ರಸ್ತೆಬದಿಗಳಲ್ಲಿ ಮಾರಾಟ ಜೋರಾಗಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ರಸ್ತೆಗಳ ರಾಹೆ-7 ಮತ್ತು 207ರ ಉದ್ದಕ್ಕೂ ಎರಡೂ ಬದಿ ಹಲಸಿನ ಹಣ್ಣುಗಳ ರಾಶಿ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಣ್ಣಿನ ಮಾರಾಟ ಜೋರಾಗಿದೆ.

ಚಂದ್ರಹಲಸು, ಬಿಳಿಹಲಸು, ನೀರುತೊಳೆ, ಬಿಳಿ, ಹಳದಿ ತೊಳೆಹಣ್ಣು ಹೀಗೆ ಪ್ರದೇಶವಾರು ವಿವಿಧ ಹೆಸರುಗಳ ಹಣ್ಣುಗಳು ಕಂಡು ಬರುತ್ತಿವೆ. ವಾರಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.

Advertisement

ಸುಮಾರು 100 ರಿಂದ 150 ಹಲಸಿನಹಣ್ಣು ಮಾರಾಟ ವಾಗುತ್ತದೆ. ಮೇ, ಜೂನ್‌, ಜುಲೈ ತಿಂಗಳಲ್ಲಿ ಉತ್ತಮ ಸ್ಪಂದನೆಯಿದ್ದು, ಹಲಸಿನ ಹಣ್ಣಿನ ಗಾತ್ರದ ಮೇಲೆ 500 ರೂ.ವರೆಗೆ ಮಾರಾಟವಾಗುತ್ತದೆ. ಸ್ಥಳೀಯವಾಗಿ ಹಾಗೂ ಕೆಲವೊಮ್ಮೆ ತಮಿಳುನಾಡಿನಿಂದ ಹಲಸಿನ ಹಣ್ಣು ತರುತ್ತೇವೆ ಎಂದು ಮಾರಾಟಗಾರರು ತಿಳಿಸುತ್ತಾರೆ.

ಹಲಸಿನ ಹಣ್ಣಿನಲ್ಲಿ ಔಷಧೀಯ ಅಂಶಗಳನ್ನು ಒಳ ಗೊಂಡಿದೆ. ಅಧಿಕ ಪ್ರಮಾಣದಲ್ಲಿ ವಿಟಮಿನ್‌ ಗಳು, ಸೆರೊಟಿನಿನ್‌, ಬೀಟಾ ಕ್ಯಾರೋಟಿನ್‌, ಸೋಡಿಯಮ್‌, ಕ್ಯಾಲ್ಸಿಯಮ್‌, ಪೊಟಾಶಿಯಮ್‌ ಅಂಶಗಳು ಹಣ್ಣಿನಲ್ಲಿ ಅಡಕವಾಗಿ ರುತ್ತದೆ. ಕಳೆದ ಎರಡು ವರ್ಷದಿಂದ ಉತ್ತಮ ವಹಿವಾಟು ನಡೆಯುತ್ತಿದೆ. ಕೋವಿಡ್‌ ನಿಂದಾಗಿ ಎರಡು ವರ್ಷ ಸಂಪೂರ್ಣ ವ್ಯಾಪಾರ ನೆಲಕಚ್ಚಿತ್ತು. ಇದೀಗ ಸುಧಾರಿಸಿದೆ ಎಂದು ವ್ಯಾಪಾರ ಸ್ಥರು ಹರ್ಷ ಪಡುತ್ತಾರೆ. ತೂಬಗೆರೆ, ಬೆಂಗಳೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಇತರೆ ಕಡೆಗಳಿಂದ ಹಣ್ಣನ್ನು ತರಲಾಗುತ್ತದೆ.

ಹಲಸಿನ ಹಣ್ಣಿಗೆ ಸ್ಥಳೀಯವಾಗಿ ಬೇಡಿಕೆಯಿದ್ದರೂ ದರ ಏರಿಕೆಯಾಗಿದೆ. ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಹಲಸಿನ ಹಣ್ಣು ಮತ್ತು ಇತರೆ ತೋಟಗಾರಿಕೆ ಬೆಳೆಗಳನ್ನುಬೆಳೆಯಲಾಗುತ್ತಿದೆ. ಹಲಸು, ಮಾವಿನಹಣ್ಣು, ದ್ರಾಕ್ಷಿ, ಇತರೆ ಹಣ್ಣುಗಳಿಗೆ ಜಿಲ್ಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. -ಹರೀಶ್‌, ಹಲಸು ಬೆಳೆಗಾರ

ಹಲಸಿನ ಹಣ್ಣನ್ನು ವಿವಿಧ ಕಡೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಪ್ರತಿ ಗ್ರಾಹಕರಿಗೂ ಗುಣಮಟ್ಟದ ಹಲಸಿನ ಹಣ್ಣನ್ನು ನೀಡಲಾಗುತ್ತಿದೆ. 100 ರೂ.ನಿಂದ 500ರೂ.ವರೆಗೆ ಮಾರಾಟ ವಾಗುತ್ತದೆ. ಬೆಲೆ ಏರಿಕೆ ಹೆಚ್ಚಾಗಿರು ವುದರಿಂದ ಸಾಗಾಣಿಕಾ ವೆಚ್ಚವೂ ದುಬಾರಿ ಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಲಸಿನ ಹಣ್ಣಿನ ವ್ಯಾಪಾರವನ್ನು ಮಾಡಲಾಗುತ್ತಿದೆ.-ಪ್ರವೀಣ್‌ , ವ್ಯಾಪಾರಸ್ಥ

 

Advertisement

Udayavani is now on Telegram. Click here to join our channel and stay updated with the latest news.

Next