Advertisement

ಅಲಿಬಾಬಾದಿಂದ ಜಾಕ್ ಮಾ ನಿವೃತ್ತಿ; ಸಾಮಾನ್ಯ ಶಿಕ್ಷಕ ಈಗ ಯಶಸ್ವಿ ಉದ್ಯಮಿ

09:40 AM Sep 11, 2019 | Nagendra Trasi |

ಬೀಜಿಂಗ್:ಚೀನಾ ಮೂಲದ ಅತೀ ದೊಡ್ಡ ಕಂಪನಿಯಾದ ಅಲಿಬಾಬಾ ಗ್ರೂಪ್ ಲಿಮಿಟೆಡ್ ಸ್ಥಾಪಕ, ಮಾಜಿ ಶಿಕ್ಷಕ ಜಾಕ್ ಮಾ ತನ್ನ 55ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

Advertisement

ವಿಶ್ವದ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮುವ ಮುನ್ನ ಜಾಕ್ ಮಾ ಶಿಕ್ಷಕ ವೃತ್ತಿಯಲ್ಲಿದ್ದರು. 1988ರಲ್ಲಿ ಬಿಎ ಇಂಗ್ಲಿಷ್ ಪದವಿ ಪಡೆದ ಬಳಿಕ ಜಾಕ್ ಹಾಂಗ್ ಹೋ ಯೂನಿರ್ವಸಿಟಿಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು.

ತದನಂತರ ಸುಮಾರು 30 ವಿವಿಧ ಕೆಲಸಗಳಿಗೆ ಅರ್ಜಿ ಹಾಕಿದ್ದರು. ಆದರೆ ಒಂದೂ ಕೆಲಸವೂ ಸಿಕ್ಕಿರಲಿಲ್ಲವಾಗಿತ್ತು. 1994ರಲ್ಲಿ ಇಂಟರ್ನೆಟ್ ಕುರಿತು ತಿಳಿದುಕೊಂಡ ಜಾಕ್ ಮೊದಲ ಕಂಪನಿಯನ್ನು ಆರಂಭಿಸಿದ್ದರು. ಅದೊಂದು ಟ್ರಾನ್ಸ್ ಲೇಶನ್(ತರ್ಜುಮೆ) ಕಂಪನಿಯಾಗಿತ್ತು. 1995ರಲ್ಲಿ ತನ್ನ ಗೆಳೆಯರೊಡನೆ ಜಾಕ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಚೀನಾಕ್ಕೆ ಸಂಬಂಧಿಸಿದ ಮಾಹಿತಿ ಹಲವು ದೇಶಗಳಿಗೆ ಲಭ್ಯವಾಗುತ್ತಿಲ್ಲ ಎಂಬುದು ಜಾಕ್ ಗಮನಕ್ಕೆ ಬಂದಿತ್ತು.

ಹೀಗೆ ಚೀನಾಕ್ಕೆ ಸಂಬಂಧಿಸಿದ ವೆಬ್ ಸೈಟ್ ಅನ್ನು ಜಾಕ್ ಆರಂಭಿಸಿದ್ದರು. ಹೀಗೆ 1995ರ ಏಪ್ರಿಲ್ ನಲ್ಲಿ ಜಾಕ್ ಮಾ ಹಾಗೂ ಕಂಪ್ಯೂಟರ್ ಶಿಕ್ಷಕ ಯಿಬಿಂಗ್ ಜತೆಗೂಡಿ ಚೈನಾ ಪೇಜಸ್ ಎಂಬ ಹೊಸ ಮೊದಲ ಕಚೇರಿ ಆರಂಭಿಸಿದ್ದರು. ಮೇ 10ರಲ್ಲಿ ಜಾಕ್ ಮಾ ಎರಡನೇ ಕಂಪನಿ ಶುರು ಮಾಡಿದ್ದರು. ಅಮೆರಿಕದಲ್ಲಿ ಚೈನಾಪೇಜಸ್ ಡಾಟ್ ಕಾಮ್ ಹೆಸರಿನಲ್ಲಿ ಡೊಮೈನ್ ರಿಜಿಸ್ಟ್ರರ್ಡ್ ಮಾಡಿಸಿದ್ದರು. ಈ ಕಂಪನಿ ಮೂರು ವರ್ಷಗಳಲ್ಲಿ 8,000,000 ಅಮೆರಿಕನ್ ಡಾಲರ್ ಆದಾಯ ಗಳಿಸಿತ್ತು.

1999ರಲ್ಲಿ ಜಾಕ್ ಮಾ ಮಾಹಿತಿ ತಂತ್ರಜ್ಞಾನ ಕಂಪನಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಹೀಗೆ ಅಲಿಬಾಬಾ ಕಂಪನಿಯ ಸ್ಥಾಪಕರಾಗಿ ಬೆಳೆದ ಜಾಕ್ ಮಾ ಎರಡು ದಶಕಗಳಲ್ಲಿಯೇ 3ಲಕ್ಷ ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಈ ಮೊದಲೇ ಘೋಷಿಸಿದಂತೆ ಜಾಕ್ ಮಾ ಅಲಿಬಾಬಾ ಗ್ರೂಪ್ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಇಂದು ಕೆಳಗಿಳಿದಿದ್ದಾರೆ. ತನ್ನನ್ನು ಚೀನಾ ಸರಕಾರ ಬಲವಂತದಿಂದ ಅಧ್ಯಕ್ಷಗಾದಿಯಿಂದ ಕೆಳಗಿಳಿಸಿದೆ ಎಂಬ ವರದಿಯನ್ನು ಜಾಕ್ ಮಾ ತಳ್ಳಿಹಾಕಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಪೌಂಡೇಶನ್ ಮೂಲಕ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಣಿಗೆ ನೀಡುವ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next