Advertisement
ಎರಡನೇ ವಿಶ್ವ ಮಹಾಯುದ್ಧದ ವೇಳೆ ಪುರುಷರೆಲ್ಲರೂ ಯುದ್ಧಕ್ಕೆ ಹೋದಾಗ ಪಟ್ಟಣಗಳಲ್ಲಿ ಪುರುಷರು ನಿರ್ವಹಿಸುತ್ತಿದ್ದ ಕೆಲಸಗಳನ್ನು ಮಾಡುವವರೇ ಇಲ್ಲವಾದರು. ಆ ಸಮಯದಲ್ಲಿ ಮಹಿಳೆಯರು ಪುರುಷರ ಕೆಲಸ ಮಾಡಲು ಆರಂಭಿಸಿದರು. ಶಿಪ್ ಯಾರ್ಡ್ (ನೌಕಾಂಗಣ) ಮತ್ತು ಕಾರ್ಖಾನೆಗಳಲ್ಲಿ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ಮತ್ತು ಸರಬರಾಜು ಮಾಡುವುದು ಮುಂತಾದ ಕೆಲಸಗಳಲ್ಲಿ ಮಹಿಳೆಯರೇ ತೊಡಗಿಕೊಂಡರು.
ಅಮೆರಿಕನ್ ಸ್ತ್ರೀವಾದ, ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಆರ್ಥಿಕ ಶಕ್ತಿಯನ್ನು ಬಿಂಬಿಸುವ ಈ ಮಹಿಳೆಯೇ ರೋಸಿ. ರೋಸಿಯಿಂದ ಪ್ರೇರಣೆ ಪಡೆದ ಇನ್ನಷ್ಟು ದೇಶಗಳು ತಮ್ಮದೇ ಆದ ಮಹಿಳಾ ಯುದ್ಧ ಕರ್ಮಚಾರಿಯ ಚಿತ್ರವನ್ನು ಬಿಡುಗಡೆ ಮಾಡಿದವು. ಅಮೆರಿಕನ್ ಮಹಿಳೆ ಬದಲಿಗೆ ಆಯಾ ದೇಶದ ಮಹಿಳೆಯರು ತಲೆಗೊಂದು ಸ್ಕಾಫ್ì ಕಟ್ಟಿಕೊಂಡು, ಮಡಚಿದ ತೋಳಿನ ಜೀನ್ಸ್ ಜಂಪ್ ಸೂಟ್ ತೊಟ್ಟು, ರಟ್ಟೆಯನ್ನು ತಟ್ಟುತ್ತಿರುವ ಚಿತ್ರ ವಿಶ್ವದೆಲ್ಲೆಡೆ ಕಾಣಿಸಿಕೊಳ್ಳತೊಡಗಿತು. ಅದೇ ರೋಸಿಯಿಂದ ಪ್ರೇರಣೆ ಪಡೆದ ವಸ್ತ್ರ ವಿನ್ಯಾಸಕರು ಇದೀಗ ಡೆನಿಮ್ ಜಂಪ್‌ಸೂಟ್‌ಗಳನ್ನು ಫ್ಯಾಷನ್‌ಲೋಕಕ್ಕೆ ಮತ್ತೆ ಪರಿಚಯಿಸಿದ್ದಾರೆ. ಇದನ್ನು ಇಷ್ಟಪಟ್ಟ ಹಾಲಿವುಡ್ ನಟಿಯರು, ರೂಪದರ್ಶಿಗಳು, ಗಾಯಕಿಯರು ಮತ್ತಿತರ ಪ್ರಸಿದ್ಧ ಮಹಿಳೆಯರು ಡೆನಿಮ್ ಜಂಪ್ ಸೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು, ಈ ಶೈಲಿ ಟ್ರೆಂಡ್ ಆಗಲು ಕಾರಣವಾಗಿದೆ.
Related Articles
ಜಂಪ್‌ಸೂಟ್‌ಗಳು ನೀಲಿ ಬಣ್ಣದ ಜೀನ್ಸ್ ಬಟ್ಟೆಗೆ ಸೀಮಿತವಾಗದೆ ಹಸಿರು, ಗುಲಾಬಿ, ಬಿಳಿ ಹಾಗು ಇನ್ನಿತರ ಬಣ್ಣದ ಡೆನಿಮ್ ಬಟ್ಟೆಯಿಂದಲೂ ಈ ತರಹದ ಜಂಪ್ ಸೂಟ್‌ಗಳನ್ನು ತಯಾರಿಸಲಾಗುತ್ತಿದೆ. ಇವುಗಳಿಗೆ ಬೇಡಿಕೆಯೂ ಹೆಚ್ಚು! ಅದರಲ್ಲೂ ಇಡೀ ತೋಳು, ಗಿಡ್ಡ ತೋಳು, ಸ್ಲಿàವ್‌ಲೆಸ್ (ತೋಳುಗಳೇ ಇಲ್ಲದ), ಕಾಲರ್ ಇರುವ ಮತ್ತು ಕಾಲರ್ ಇಲ್ಲದಿರುವ, ಬಿಗಿಯಾದ ಅಥವಾ ಸಡಿಲವಾದ ಡೆನಿಮ್ ಜಂಪ್ ಸೂಟ್ ಆಯ್ಕೆಗಳಿವೆ. ಇವುಗಳ ಜೊತೆ ಸೊಂಟಕ್ಕೆ ಡೆನಿಮ್ ಬಟ್ಟೆಯ ಅಥವಾ ಪ್ಲಾಸ್ಟಿಕ್, ಚರ್ಮ ಹಾಗೂ ಇನ್ನಿತರ ಬಟ್ಟೆಯಿಂದ ತಯಾರಿಸಿದ ಬೆಲ್ಟ… (ಸೊಂಟ ಪಟ್ಟಿ) ಕೂಡ ತೊಡಬಹುದು. ಬಿಗಿಯಾದ ಡೆನಿಮ್ ಜಂಪ್‌ಸೂಟ್ ಜೊತೆ ಬೂಟ್ ಗಳನ್ನು ಮತ್ತು ಸಡಿಲವಾದ ಡೆನಿಮ್ ಜಂಪ್‌ಸೂಟ್ ಜೊತೆ ಬಿಳಿ ಬಣ್ಣದ ಸ್ನೀಕರ್ (ಶೂ) ತೊಟ್ಟರೆ ಚೆನ್ನ. ಸಡಿಲವಾದ ಜಂಪ್ ಸೂಟ್ ಒಳಗೆ ಬಿಳಿ ಅಥವಾ ಕಪ್ಪು ಬಣ್ಣದ ಟೀ ಶರ್ಟ್ ತೊಡಬಹುದು. ಬಿಗಿಯಾದ ಜಂಪ್ ಸೂಟ್ ಮೇಲೆ ಲೆದರ್ ಜಾಕೆಟ್ ತೊಡಬಹುದು. ಇವುಗಳಲ್ಲಿ ಜಿಪ್, ಬಟನ್ (ಗುಂಡಿ), ಲೇಸ್ ಮತ್ತು ಹುಕ್ ಆಯ್ಕೆಗಳೂ ಇವೆ.
Advertisement
ಆಕಾಶದಿಂದ ಕಪಾಟಿಗೆ…ಈ ಜಂಪ್ ಸೂಟ್ ಯಾಕೆ ತಯಾರಿಯ ಹಿಂದೆ ಒಂದು ಇತಿಹಾಸವಿದೆ. ಆಕಾಶದಿಂದ ಭೂಮಿಯತ್ತ ಧುಮುಕುವ ಸ್ಕೈ ಡೈವರ್‌ಗಳು ಮತ್ತು ಪ್ಯಾರಾಶೂಟರ್‌ಗಳಿಗಾಗಿ ಈ ಒನ್- ಪೀಸ್ ಜಂಪ್‌ಸೂಟ್ ಉಡುಗೆಯನ್ನು ತಯಾರಿಸಲಾಗಿತ್ತು! ಮುಂದೆ ಇದೇ ದಿರಿಸು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮವಸ್ತ್ರವಾಯಿತು. ಈ ಒನ್ ಪೀಸ್ ಡೆನಿಮ್ ಜಂಪ್ ಸೂಟ್ ರಫ್ ಬಳಕೆಗೆ ಹೆಚ್ಚು ಸೂಕ್ತವಾಗಿದ್ದರಿಂದ, ಹೆಚ್ಚು ಬಾಳಿಕೆಯೂ ಬರುತ್ತಿದ್ದುದರಿಂದ ಕಾರ್ಖಾನೆ ಕಾರ್ಮಿಕರು ಬಳಸಲು ಶುರು ಮಾಡಿದ್ದರು. ಹಾಗಾಗಿ 20ನೇ ಶತಮಾನದಲ್ಲಿ ಡೆನಿಮ್ ಜಂಪ್ ಸೂಟ್ ಜನಪ್ರಿಯತೆ ಪಡೆಯಿತು. ಅದಿತಿಮಾನಸ ಟಿ. ಎಸ್.