Advertisement
ಮಗನ ಸಾವಿನ ಬೆನ್ನಲ್ಲೇ: ದುರಂತವೆಂದರೆ, ಯೋಧ ಮಲಿಕ್ ಅವರ 18 ವರ್ಷದ ಪುತ್ರ 2 ದಿನಗಳ ಹಿಂದಷ್ಟೇ (ಸೆ.15) ಅಪಘಾತಕ್ಕೀಡಾಗಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ತುರ್ತು ರಜೆ ಪಡೆದು ಮಲಿಕ್ ಅವರು ಮನೆಗೆ ಬಂದಿದ್ದರು. ಅವರ ಕುಟುಂಬವು ಸೋಮವಾರ ಸಾವಿನ ಅನಂತರ 3ನೇ ದಿನದ ವಿಧಿ ವಿಧಾನಗಳನ್ನು ಪೂರೈಸುವ ಸಿದ್ಧತೆಯಲ್ಲಿ ತೊಡಗಿತ್ತು. ಅಷ್ಟರಲ್ಲಿ, ಏಕಾಏಕಿ ಉಗ್ರರು ಗುಂಪು ಮನೆಯೊಳಗೆ ನುಗ್ಗಿ, ಮಲಿಕ್‌ರನ್ನು ಹುಡುಕತೊಡಗಿತು. ಮೊದಲ ಮಹಡಿಯಲ್ಲಿ ಮಲಿಕ್ ಸಿಕ್ಕಿದೊಡನೆ, ಸೇನೆಯ ನಿಯೋಜನೆ ಕುರಿತು ಸರಣಿ ಪ್ರಶ್ನೆಗಳನ್ನು ಕೇಳತೊಡಗಿತು. ಆಗ ಯೋಧ ಮಲಿಕ್, “ಬೇಕಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ. ಆದರೆ, ಸೇನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ’ ಎಂದರು. ಕೂಡಲೇ ಉಗ್ರರು ತೀರಾ ಹತ್ತಿರದಿಂದಲೇ ಅವರ ತಲೆಗೆ ಗುಂಡಿಟ್ಟು ಹತ್ಯೆಗೈದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. Advertisement
ಯೋಧನ ಮನೆಗೆ ನುಗ್ಗಿ ಕೊಂದರು
06:59 AM Sep 18, 2018 | |
Advertisement
Udayavani is now on Telegram. Click here to join our channel and stay updated with the latest news.