Advertisement

ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಉಗ್ರ, ಕಮಾಂಡರ್ ಎನ್ ಕೌಂಟರ್ ಗೆ ಬಲಿ

09:10 AM Apr 09, 2020 | Nagendra Trasi |

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಕಮಾಂಡರ್ ಸಾವನ್ನಪ್ಪಿರುವ ಘಟನೆ ಉತ್ತರ ಕಾಶ್ಮೀರದ ಸೋಪೋರಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಡರಾತ್ರಿ ಸೋಪೋರಾದ ಅರಾಂಪೋರಾ ಪ್ರದೇಶದಲ್ಲಿ ಜಂಟಿ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಬಳಿಕ ನಾಲ್ವರು ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತಿರುವುದಾಗಿ ಮಾಹಿತಿ ಲಭಿಸಿತ್ತು ಎಂದು ವರದಿ ತಿಳಿಸಿದೆ.

ಗುಂಡಿನ ದಾಳಿಯಲ್ಲಿ ಉಗ್ರ ಸಾವನ್ನಪ್ಪಿರುವುದು ನಂತರ ಖಚಿತವಾಗಿತ್ತು. ಬುಧವಾರ ಸಂಜೆ ಒಬ್ಬ ಉಗ್ರನ ಶವ ಪತ್ತೆಯಾಗಿತ್ತು. ಜೈಶ್ ಎ ಮೊಹಮ್ಮದ್ ಸಂಘಟನೆಯ ಸಾಜಾದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಅಡಗಿ ಕುಳಿತಿರುವ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next