Advertisement

8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

08:14 PM Oct 22, 2021 | Team Udayavani |

ಶ್ರೀನಗರ: ಕಳೆದ ಎರಡು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ “ನಾಗರಿಕರನ್ನು ಗುರಿಯಾಗಿಸಿ ಹತ್ಯೆ’ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಣಿವೆಯ ರಸ್ತೆಗಳಲ್ಲಿ ಸೆಕ್ಯೂರಿಟಿ ಬಂಕರ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿದೆ.

Advertisement

ಈ ಮೂಲಕ, ಕೇಂದ್ರ ಸಶಸ್ತ್ರ ಅರೆಸೇನಾಪಡೆ (ಸಿಎಪಿಎಫ್) ಯೋಧರನ್ನು ಒಳಗೊಂಡ ಭದ್ರತಾ ಬಂಕರ್‌ಗಳು ಶ್ರೀನಗರದ ರಸ್ತೆಗಳಲ್ಲಿ ಸುಮಾರು 8 ವರ್ಷಗಳ ಬಳಿಕ ಮರುನಿಯೋಜನೆಗೊಂಡಂತಾಗಿದೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಗೊಂಡ ಹಿನ್ನೆಲೆಯಲ್ಲಿ 2011 ಮತ್ತು 2014ರ ಮಧ್ಯೆ ಈ ಎಲ್ಲ ಬಂಕರ್‌ಗಳನ್ನೂ ತೆರವು ಮಾಡಲಾಗಿತ್ತು. ಈಗ ಮತ್ತೆ ಸಮಸ್ಯೆ ತಲೆದೋರಿರುವ ಕಾರಣ ಇವುಗಳನ್ನು ಮರುನಿಯೋಜಿಸಲಾಗಿದೆ.

ಏಕೆ ಬೇಕು ಈ ಬಂಕರ್‌?:
ಉಗ್ರರ ಮುಕ್ತ ಸಂಚಾರಕ್ಕೆ ತಡೆಯೊಡ್ಡುವುದೇ ಇದರ ಉದ್ದೇಶ. ಉಗ್ರರು ನಾಗರಿಕರ ಮೇಲೆ ದಾಳಿ ನಡೆಸಿ ಕ್ಷಣಮಾತ್ರದಲ್ಲೇ ಆ ಸ್ಥಳದಿಂದ ಮತ್ತೂಂದೆಡೆಗೆ ತೆರಳುತ್ತಾರೆ. ಅವರು ಈ ರೀತಿ ಮುಕ್ತವಾಗಿ ಸಂಚರಿಸುವುದನ್ನು ತಡೆಯುವುದಕ್ಕಾಗಿ ಬಂಕರ್‌ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿ ಅರೆಸೇನಾ ಪಡೆಯ 50 ಕಂಪನಿಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

ನಿರ್ಗತಿಕನ ಶವ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶುಕ್ರವಾರ ಸ್ಥಳೀಯೇತರ ನಿರ್ಗತಿಕನೊಬ್ಬರ ಮೃತದೇಹ ಪತ್ತೆಯಾಗಿದೆ. ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇದು ಉಗ್ರರ ಕೃತ್ಯವೇ ಎಂಬುದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next