Advertisement

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

08:44 PM Nov 15, 2024 | Team Udayavani |

ಶ್ರೀನಗರ: ತೆಂಗ್‌ಪೋರಾದ ಹೆದ್ದಾರಿಯಲ್ಲಿ ಗುರುವಾರ(ನ14) ಎಸ್‌ಯುವಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಇಬ್ಬರು ಹದಿಹರೆಯದ ಹುಡುಗರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಕಾಶ್ಮೀರದಲ್ಲಿ ಅಪ್ರಾಪ್ತ ವಯಸ್ಸಿನ ಚಾಲಕರ ಮೇಲೆ ಕಠಿನ ಕ್ರಮಕ್ಕೆ ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಒತ್ತಾಯ ವ್ಯಕ್ತವಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Advertisement

ಹಮಾದ್ ಮತ್ತು ಆಸೀಫ್ ಸೂಫಿ ಎನ್ನುವ ಇಬ್ಬರು ಮೃತಪಟ್ಟಿದ್ದು, ಹಿಂಬದಿ ಸೀಟಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ರಾಜಕಾರಣಿಗಳು, ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಅಪಘಾತವು ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದನ್ನು ತಡೆಯಲು ನಾಗರಿಕ ಸಮಾಜಕ್ಕೆ ಕರೆಯಾಗಿದೆ. ನಮ್ಮ ಕಾರುಗಳು ವೇಗವಾಗಿ ಹೋಗುತ್ತವೆ, ನಮ್ಮ ರಸ್ತೆಗಳು ಉತ್ತಮಗೊಳ್ಳುತ್ತವೆ ಆದರೆ ನಮ್ಮ ರಸ್ತೆ ಪ್ರಜ್ಞೆಯು ಸುಧಾರಿಸುವ ಲಕ್ಷಣವನ್ನು ತೋರಿಸುತ್ತಿಲ್ಲ’ ಎಂದು X ನಲ್ಲಿ ಸಂತಾಪ ಸೂಚಿಸಿದ್ದಾರೆ.

“ಹೃದಯವಿದ್ರಾವಕ ದೃಶ್ಯಗಳು. ಈ ಅಪಘಾತವು ಅಮೂಲ್ಯವಾದ ಯುವ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅವರ ಕುಟುಂಬಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಈ ಭೀಕರ ಅಪಘಾತದಲ್ಲಿ ಮೃತಪಟ್ಟ ಹುಡುಗರ ಕುಟುಂಬಗಳೊಂದಿಗೆ ನನ್ನ ಹೃದಯವಿದೆ. ಅಲ್ಲಾಹು ಅವರಿಗೆ ಜನ್ನತ್‌ನಲ್ಲಿ ಸ್ಥಾನವನ್ನು ನೀಡಲಿ, ”ಎಂದು ಬರೆದಿದ್ದಾರೆ.

Advertisement

ಶ್ರೀನಗರ ದ ಹಿರಿಯ ಪೊಲೀಸ್ ಅಧೀಕ್ಷಕ (ಸಂಚಾರ) ಮುಜಾಫರ್ ಶಾ, ಪ್ರತಿಕ್ರಿಯಿಸಿ ಅಪ್ರಾಪ್ತ ವಯಸ್ಕರಿಗೆ ಎರಡು ಅಥವಾ ನಾಲ್ಕು ಚಕ್ರದ ವಾಹನಗಳಿಗೆ ಪ್ರವೇಶವನ್ನು ಅನುಮತಿಸಬೇಡಿ ಎಂದು ಪೋಷಕರಿಗೆ ಮನವಿ ಮಾಡಿದ್ದು, ಪೋಷಕರು ಅವಕಾಶ ನೀಡದಿದ್ದರೆ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಲು ಅವಕಾಶ ನೀಡಬಾರದು ಎನ್ನುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next