Advertisement
( ದ್ರುತ ಸಂಕೀರ್ಣ ಲಘು),ಖಂಡ ತ್ರಿಪುಟ ( ಖಂಡ ಲಘು ದ್ರುತ ದ್ರುತ ),ಅಲ್ಲದೇ ನವೀನ ಛಂದೋವೈವಿದ್ಯಗಳಾದ ಕಲ್ಯಾಣಿ ಸಂಕೀರ್ಣರೂಪಕತಾಳ,ತೋಡಿ ಖಂಡ ತ್ರಿಪುಟತಾಳ,ನೀಲಾಂಬರಿ ತಿಶ್ರ ತ್ರಿಪುಟತಾಳ, ಪೂರ್ವಿಕಲ್ಯಾಣಿ ಚತುರಶ್ರ ಮಠ್ಯತಾಳ, ಕೇದಾರಗೌಳ ತ್ರಿವುಡೆ, ಹಂಸಧ್ವನಿ ತ್ರಿವುಡೆ ಮತ್ತು,ಶುದ್ದಸಾವೇರಿ ಚೌ ತಾಳವನ್ನು ಕಾಣಬಹುದು. ಹೊಸ ತಾಳ ಬಂಧಗಳಿಗೆ ಮದ್ದಳೆಯ ತತ್ಕಾರ ಇಲ್ಲದಿರುವ ಕಾರಣ ಅವರೇ ಮದ್ದಳೆಯ ತತ್ಕಾರವನ್ನು , ಬಿಡಿತ ಮತ್ತು ಮುಕ್ತಾಯಗಳ ಸೊಲ್ಕಟ್ಟುಗಳನ್ನು ಯಕ್ಷಗಾನೀಯವಾಗಿ ರೂಪಿಸಿದ್ದಾರೆ. ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ, ಕುಂಜಿರಾಯ ಮಹಾತ್ಮೆ, ಪುನರೂರು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಬನಶಂಕರಿ ಮಹಾತ್ಮೆ, ಸಮರ ಸೌಗಂಧಿಕೆ, ಶಿವಭಕ್ತ ಪುರುಷಾಮೃಗ, ಮೈಥಿಲಿ ವಿಜಯ ,ಮಲೆತ ಮಾಣಿಕ ಸೇರಿ 34 ತುಳು ಮತ್ತು ಕನ್ನಡ ಪ್ರಸಂಗಗಳು, ಭಕ್ತ ಸಿರಿಯಾಳ, ಹುಚ್ಚ, ಪ್ರತಿಹತ, ಭಾಷೆದ ಫಲ, ಮಸಣದ ಮಲ್ಲಿಗೆ ಸೇರಿ ಆರು ತುಳು ಮತ್ತು ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ಕಲಾಮಾತೆಗೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿ, ಬಿರುದು ಮತ್ತು ಸಮ್ಮಾನಗಳು ಸಂದಿವೆ. ತಂದೆ ಕೃಷ್ಣಪ್ಪ ಹಾಗು ತಾಯಿ ಪದ್ಮಾವತಿಯವರಿಗೆ ಯಕ್ಷಗಾನದ ಹಿನ್ನೆಲೆಯಿಲ್ಲದಿದ್ದರೂ ಕೊಲೆಕಾಡಿ ಬೆಳೆದ ಪರಿಸರ ಮಾತ್ರ ಸಮೃದ್ದವಾಗಿ ಯಕ್ಷಗಾನದ ಗಂಧವನ್ನು ಧರಿಸಿತ್ತು. ಈ ಗಂಧವೇ ಅವರಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿತು.