ಲಕ್ಷ್ಮಣ ಜೋಡುಕರೆ ಕಂಬಳ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಜ. 13ರಂದು ಬೆಳಗ್ಗೆ 9.30ರಿಂದ ನಡೆಯಲಿದೆ ಎಂದು ಕಂಬಳ ಸಂಘಟಕ ತಲಪಾಡಿ ದೊಡ್ಡಮನೆ ಕ್ಯಾ| ಬೃಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Advertisement
ಕಂಕನಾಡಿ ಗರೋಡಿ ಅಧ್ಯಕ್ಷ ಕೆ. ಚಿತ್ತರಂಜನ್ ಉದ್ಘಾಟಿಸಲಿದ್ದು, ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಚಿವರಾದ ಡಿ.ವಿ. ಸದಾನಂದ ಗೌಡ, ಯು.ಟಿ. ಖಾದರ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ , ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಜ. 14ರಂದು ಬೆಳಗ್ಗೆ 8ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಂಬಳದಲ್ಲಿ ಸುಮಾರು 100 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕನೆ ಹಲಗೆ ವಿಭಾಗದಲ್ಲಿ ಪ್ರಥಮ 2 ಪವನು, ದ್ವಿತೀಯ 1 ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ 2 ಪವನು,
ದ್ವಿತೀಯ 1ಪವನು, ಅಡ್ಡಹಲಗೆ, ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ 1ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಗುತ್ತದೆ. ನಿಖರ ಫಲಿತಾಂಶಕ್ಕಾಗಿ ಲೇಸರ್ ಬೀಂ ನೆಟ್‌ವರ್ಕ್ ಸಿಸ್ಟಂ, ವೀಡಿಯೋ ದಾಖಲೀಕಣ, ನಡೆಯಲಿದೆ ಎಂದು ಬೃಜೇಶ್ ಚೌಟ ಹೇಳಿದರು.