ಬೆಂಗಳೂರು: ಸಂತಾನ ಹೀನತೆ ಸಮಸ್ಯೆಗಳ ಪ್ರಮುಖ ಚಿಕಿತ್ಸಾ ಕೇಂದ್ರಗಳಲ್ಲೊಂದಾದ “ಐವಿಎಫ್ ಸೆಂಟರ್’ನ 8ನೇ ಕೇಂದ್ರವು ನಗರದ ಸಕ್ರ ವರ್ಲ್ಡ್ ಹಾಸ್ಪಿಟಲ್‌ನಲ್ಲಿ ಪ್ರಾರಂಭಿಸಿದೆ. ಐವಿಎಸ್‌ನ 8ನೇ ಕೇಂದ್ರವನ್ನು ಖ್ಯಾತ ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಶುಕ್ರವಾರ ನಗರದಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಐವಿಎಫ್ ತಂತ್ರಜ್ಞಾನದಿಂದ ಸಂತಾನ ಹೀನತೆ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಬಹಳ ಅನುಕೂಲವಾಗಲಿದೆ. ಹಾಗಾಗಿ ಐವಿಎಫ್ ಸೆಂಟರ್ ವಿಶ್ವಾಸತೆ ದೇಶಾದ್ಯಂತ ಹೆಚ್ಚುತ್ತಿದೆ ಎಂದರು.
ಐವಿಎಫ್ ಸ್ಪೆಷಲಿಸ್ಟ್ ಡಾ.ಹೃಷಿಕೇಶ್ ಪೈ ಮಾತನಾಡಿ, ಶೇ.15-20ರಷ್ಟು ವಿವಾಹಿತ ಜನರು ಸಂತಾನ ಹೀನತೆ ಸಮಸ್ಯೆಯಿಂದ ಬಳಲುತ್ತಿವೆ. ಐವಿಎಸ್ ಸೆಂಟರ್ ಸುಧಾರಿತ ಐವಿಎಫ್ ತಂತ್ರಜ್ಞಾನಗಳಿಂದ ದೇಶಾದ್ಯಂತ ದಂಪತಿಗಳಿಗೆ ತಂದೆ ತಾಯಿಯರಾಗುವ ಸಂತೋಷ ಮತ್ತು ಆನಂದ ಪಡೆಯಲು ನೆರವಾಗುತ್ತಿದೆ ಎಂದರು.
ಐವಿಎಫ್ನ ಮತ್ತೂಬ್ಬ ಸ್ಪೆಷಲಿಸ್ಟ್ ಡಾ.ನಂದಿತಾ ಪಲ್‌ಶೆಟ್ಕರ್, ಬೆಂಗಳೂರಿನ ನಿವಾಸಿಗಳ ಅನುಕೂಲಕ್ಕಾಗಿ ಸಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ಐವಿಎಸ್ 8ನೇ ಕೇಂದ್ರ ಸ್ಥಾಪಿಸಲು ಕೈ ಜೋಡಿಸಿರುವುದು ಸಂತೋಷವಾಗಿದೆ. ಭಾರತದ ಆಧುನಿಕ ಸುಶಿಕ್ಷಿತ, ಸ್ವತಂತ್ರ ಮಹಿಳೆಯರು ತಡವಾಗಿ ವಿವಾಹವಾಗುತ್ತಿದ್ದಾರೆ ಮತ್ತು ವಿವಾಹವಾದರೂ ಅವರ ವೃತ್ತಿಗೆ ಗಮನ ನೀಡಿ ಗುರಿ ಸಾಧನೆಯಾಗುವವರೆಗೂ ತಾಯಿಯಾಗುವುದನ್ನು ಮುಂದೂಡುತ್ತಿದ್ದಾರೆ.
ಗೂಗಲ್, ಫೇಸ್‌ಬುಕ್‌ನಂತಹ ಬೃಹತ್ ಎಂಎನ್‌ಸಿ ಕಂಪನಿಗಳು ಯುವ ವೃತ್ತಿಪರರಿಗೆ ಅಂಡಾಣು ಘನೀಕರಣ ಸೌಲಭ್ಯವನ್ನು ನೀಡುತ್ತಿವೆ. ಅಲ್ಲದೆ 30-40ರ ವಯಸ್ಸಿನಲ್ಲಿ ಗರ್ಭಧಾರಣೆ ಮಾಡಲು ಅವರ ವೆಚ್ಚವನ್ನು ಭರಿಸುತ್ತಿವೆ. ಅದು ಸುರಕ್ಷಿತ ಚಿಕಿತ್ಸೆಯಾಗಿದೆ ಎಂದು ಹೇಳಿದರು.