Advertisement
ಚಿನ್ನಾಭರಣ ಮತ್ತು ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಖಮರುದ್ದೀನ್ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿವೆ ಎಂದು ಎಎಸ್‌ಪಿ ವಿವೇಕ್ ಕುಮಾರ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರದಲ್ಲಿ ಖಮರುದ್ದೀನ್ ಅವರನ್ನು ಬಂಧಿಸಲಾಗಿದೆ.
15 ಕೋಟಿ ರೂ. ಗಳಷ್ಟು ವಂಚನೆ ನಡೆಸಿದ ಬಗ್ಗೆ ಮಾಹಿತಿ ಲಭಿಸಿದೆ ಎಂದು ತನಿಖಾ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ತನಿಖಾ ತಂಡವು ಶನಿವಾರ ಬೆಳಗ್ಗೆ ಎಂ.ಸಿ.ಖಮರುದ್ದೀನ್ ಅವರನ್ನು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆಸಿ ಅಲ್ಲಿ 5 ಗಂಟೆಗಳ ಕಾಲ ಪ್ರತ್ಯೇಕ ವಿಚಾರಣೆ ನಡೆಸಿತು. ಈ ಸಂದರ್ಭ ಸಮಗ್ರ ಮಾಹಿತಿ ಸಂಗ್ರಹಿಸಿದ ಅನಂತರ ಸಂಜೆ 4 ಗಂಟೆಯ ವೇಳೆಗೆ ಶಾಸಕರನ್ನು ಬಂಧಿಸಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು, ಚಂದೇರ, ಪಯ್ಯನ್ನೂರು ಮುಂತಾದ ಪೊಲೀಸ್ ಠಾಣೆಗಳಲ್ಲಿ ಶಾಸಕರ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿವೆ. ಚಂದೇರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ನಾಲ್ಕು ಕೇಸುಗಳಲ್ಲಿ ಬಂಧಿಸಲಾಗಿದೆ. 15 ಕೋಟಿ ರೂ. ಠೇವಣಿ ಸಂಗ್ರಹ ವಂಚನೆ ನಡೆದಿದೆ ಎಂದು ಕಂಡುಕೊಳ್ಳಳಾಗಿದೆ.
Related Articles
Advertisement
ಶಾಸಕ ಖಮರುದ್ದೀನ್‌ರ ಬಂಧನದಿಂದ ಮುಸ್ಲಿಂ ಲೀಗ್‌ಗೆ ತೀವ್ರ ಮುಖಭಂಗವಾಗಿದೆ. ಮಾತ್ರವಲ್ಲದೆ ಐಕ್ಯರಂಗದ ಘಟಕ ಪಕ್ಷವಾದ ಕಾಂಗ್ರೆಸ್‌ನ್ನು ಪೇಚಿಗೆ ಸಿಲುಕಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾ ವಣೆಯು ಸಮೀಪಿಸುತ್ತಿದ್ದಂತೆ ಇದು ಐಕ್ಯರಂಗವನ್ನು ತೀವ್ರ ಸಂದಿಗ್ಧ ಸ್ಥಿತಿಗೆ ಸಿಲುಕಿಸಿದೆ.
ಬಿಜೆಪಿ ಹೋರಾಟದಿಂದ ಬಂಧನ: ಬಿಜೆಪಿ ನಡೆಸಿದ ಹೋರಾಟ ದಿಂದ ಖಮರುದ್ದೀನ್ ಬಂಧನ ವಾಗಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದ್ದಾರೆ.