ಕೆಂಭಾವಿ: ಪ್ರತಿಯೊಬ್ಬರೂ ದ್ವೇಷ, ಅಸೂಯೆ ಬಿಟ್ಟು ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸುವ ಜತೆಗೆ ಮಠಗಳಿಗೆ ತನು-ಮನದಿಂದ ಸೇವೆ ಸಲ್ಲಿಸಬೇಕು ಎಂದು ಯಂಕಂಚಿ ಹಿರೇಮಠದ ಅಭಿನವ ಶ್ರೀ ರುದ್ರಮುನಿ ಶಿವಾಚಾರ್ಯರು ಹೇಳಿದರು.
ನಗನೂರ ಗ್ರಾಮದಲ್ಲಿ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಮಹಾ ಪುರಾಣ, ಧರ್ಮಸಭೆ, ಶ್ರೀಗಳಿಗೆ ತುಲಭಾರ, ಮಹಿಳೆಯರಿಗೆ ಉಡಿ ತುಂಬುವ, ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಸಂಸ್ಕೃತಿಯಲ್ಲಿ ತನ್ನದೇಯಾದ ಇತಿಹಾಸ ಹೊಂದಿರುವ ಮಠ ಸೂಗೂರೇಶ್ವರ ಮಠವಾಗಿದೆ. ನಗನೂರಿನ ಸೂಗೂರೇಶ್ವರ ಸಂಸ್ಥಾನ ಮಠ ಹಾಗೂ ಶರಣಬಸವೇಶ್ವರ ದಾಸೋಹ ಮಠ ಗ್ರಾಮಕ್ಕೆ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೂ ನೋವಾಗಂತೆ ಭಕ್ತರು ನೋಡಿಕೊಳ್ಳಬೇಕು ಎಂದರು.
ಪೀಠಾಧಿ ಪತಿ ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಠದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಈ ವೇಳೆ ಶರಣ ಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರು, ಕೆಂಭಾವಿ ಹಿರೇಮಠದ ಶ್ರೀ ಚೆನ್ನಬಸವ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಪ್ರವಚನಕಾರ ಮಂಜುನಾಥ ಶಾಸ್ತ್ರಿಗಳು, ವೀರಣ್ಣ ಶಾಸ್ತ್ರಿಗಳು, ಶಾಂತರಡ್ಡಿ ಹೊನಕೇರಿ, ಶ್ರೀಶೈಲ ತಮದೊಡ್ಡಿ, ಬಸಣ್ಣ ಸಾಹು ಬೂದೂರ, ಸಿದ್ರಾಮರೆಡ್ಡಿ ಗೂಗಲ್, ಶರಣಗೌಡ ದೇಸಾಯಿ, ಗುರಪ್ಪಗೌಡ ಪೊಲೀಸ್‌ಪಾಟೀಲ, ಸದಾನಂದ ದೇಸಾಯಿ, ಬೋಜಪ್ಪಗೌಡ ಪೊಲೀಸ್ ಪಾಟೀಲ, ಅಮೀನರಡ್ಡಿಗೌಡ ಕಿರದಳ್ಳಿ, ಖಂಡಯ್ಯ ಹಿರೇಮಠ, ಚನ್ನಬಸವಕುಮಾರ ನರಸಲಗಿ ಇತರರಿದ್ದರು. ನಾಗಭೂಷಣ ಪತ್ತಾರ ಸ್ವಾಗತಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರು. ಅಮರೇಶ ಕುಂಬಾರ ವಂದಿಸಿದರು.