Advertisement

ಮಣಿರತ್ನಂ‌ ಪ್ಯಾನ್‌ ಇಂಡಿಯಾ ಸಿನಿಮಾ ʼಪೊನ್ನಿಯನ್ ಸೆಲ್ವನ್-2ʼ ಬಿಡುಗಡೆಗೆ ದಿನಾಂಕ ಫಿಕ್ಸ್

04:52 PM Dec 28, 2022 | Team Udayavani |

ಮುಂಬಯಿ: 2022 ರಲ್ಲಿ ದೊಡ್ಡ ಹಿಟ್‌ ಆದ ದಕ್ಷಿಣ ಭಾರತದ ಸಿನಿಮಾದಲ್ಲಿ ಮಣಿರತ್ನಂ ಅವರ ʼ ಪೊನ್ನಿಯಿನ್ ಸೆಲ್ವನ್ʼ ಕೂಡ ಒಂದು. ಈ ಸಿನಿಮಾದ ಮುಂದುವರೆದ ಭಾಗದ ರಿಲೀಸ್‌ ಡೇಟ್‌ ಬುಧವಾರ ( ಡಿ.28 ರಂದು) ಹೊರ ಬಿದ್ದಿದೆ.

Advertisement

ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಪೊನ್ನಿಯನ್ ಸೆಲ್ವನ್ ಸಿನಿಮಾ ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸೆ. 30 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಹು ನಿರೀಕ್ಷಿತ ಎರಡನೇ ಭಾಗದ ರಿಲೀಸ್‌ ಡೇಟನ್ನು ಚಿತ್ರ ತಂಡ ಬುಧವಾರ ಅನೌನ್ಸ್‌ ಮಾಡಿದೆ.

ವಿಶ್ವದಾದ್ಯಂತ 496 ಕೋಟಿ ಕಲೆಕ್ಷನ್‌ ಮಾಡಿದ ಚಿತ್ರ, 2022 ರಲ್ಲಿ ಟಾಪ್‌ ಹಿಟ್‌ ಸಾಲಿನಲ್ಲಿ ಸೇರಿದ ಈ ಸಿನಿಮಾಗಳಲ್ಲೊಂದು, ʼ ಪೊನ್ನಿಯನ್ ಸೆಲ್ವನ್-2ʼ 2023ರ ಏಪ್ರಿಲ್‌ 28 ರಂದು ರಿಲೀಸ್‌ ಆಗಲಿದೆ ಎಂದು ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಟ್ವೀಟ್‌ ಮಾಡಿ ಹೇಳಿದೆ.

ಈ ಟ್ವೀಟ್‌ ನಲ್ಲಿ ಚಿತ್ರದ ಪ್ರಧಾನ ಪಾತ್ರದ ಝಲಕನ್ನು ತೋರಿಸಲಾಗಿದೆ.  , ʼ ಪೊನ್ನಿಯನ್ ಸೆಲ್ವನ್ʼ ಮೊದಲ ಭಾಗದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ, ಕಾರ್ತಿ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪ್ರಕಾಶ್ ರಾಜ್, ಜಯರಾಮ್, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ, ಪ್ರಭು, ಲಾಲ್ ಮತ್ತು ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next