Advertisement

ಎಐಸಿಸಿ ಗದ್ದುಗೆ ಏರುವವರು ಯಾರು? ಮಲ್ಲಿಕಾರ್ಜುನ ಖರ್ಗೆ-ಶಶಿ ತರೂರ್‌ ನಡುವೆ ನೇರ ಹಣಾಹಣಿ

12:14 AM Oct 09, 2022 | Team Udayavani |

ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ. 17ರಂದು ಚುನಾವಣೆ ಖಚಿತವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ನಡುವೆ ನೇರ ಹಣಾಹಣಿ ನಡೆಯಲಿದೆ.

Advertisement

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಫೇವರಿಟ್‌ ಆಗಿದ್ದಾರೆ. ಈ ಮಧ್ಯೆ, ಈ ಇಬ್ಬರು ನಾಯಕರಲ್ಲಿ ಯಾರು ಆಯ್ಕೆ ಯಾದರೂ ಅವರ ಮೇಲೆ ಯಾರದೂ ನಿಯಂತ್ರಣ ಇರುವುದಿಲ್ಲ. ಅವರು ಸ್ವತಂತ್ರವಾಗಿ ಕೆಲಸ ಮಾಡಲಿದ್ದಾರೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಶನಿವಾರ ಕೊನೆಯ ದಿನವಾಗಿತ್ತು. ಇಬ್ಬರೂ ನಾಯಕರು ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಖಚಿತವಾಗಿದೆ. ಕಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಇದು ಪಕ್ಷದೊಳಗಿನ ಫ್ರೆಂಡ್ಲಿà ಫೈಟ್‌ ಎಂದು ಶಶಿ ತರೂರ್‌ ಪ್ರತಿಪಾದಿಸಿದ್ದಾರೆ. 2000ರ ಅನಂತರ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬೇತರರು ಪಕ್ಷದ ಅತ್ಯುನ್ನತ ಸ್ಥಾನಕ್ಕೆ ಏರಲಿದ್ದಾರೆ.

ಅ. 19ರಂದು ಫ‌ಲಿತಾಂಶ
ಅ. 17ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಮತದಾನ ನಡೆಯ ಲಿದೆ. ಬ್ಯಾಲೆಟ್‌ ಪೇಪರ್‌ ಬಳಸಿ ಚುನಾವಣೆ ನಡೆಸಲಾಗುತ್ತದೆ. ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿ ಯಾಗಿರುವ ಮುಖಂಡರಿಗೆ ಕರ್ನಾಟಕದಲ್ಲೇ ಮತ ದಾನದ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಬ್ಯಾಲೆಟ್‌ ಬಾಕ್ಸ್‌ಗಳನ್ನು ಹೊಸದಿಲ್ಲಿಗೆ ತರಲಾಗುತ್ತದೆ. ಅ. 19ರಂದು ಮತ ಎಣಿಕೆ ನಡೆದು ಅಂದೇ ಫ‌ಲಿತಾಂಶ ಪ್ರಕಟವಾಗಲಿದೆ ಎಂದು ಕಾಂಗ್ರೆಸ್‌ ಚುನಾವಣ ಮುಖ್ಯಸ್ಥ ಮಧುಸೂದನ ಮಿಸಿŒ ತಿಳಿಸಿದ್ದಾರೆ.

ಉದಯಪುರ ನಿರ್ಣಯ ಜಾರಿ
ಒಂದು ವೇಳೆ ಕಾಂಗ್ರೆಸ್‌ ಅಧ್ಯಕ್ಷನಾದರೆ ಉದಯಪುರ ನಿರ್ಣಯ ಜಾರಿಗೊಳಿಸ ಲಾಗು ವುದು. ಈ ಪ್ರಕಾರ ಪಕ್ಷದ ಹುದ್ದೆಗಳ ಪೈಕಿ ಶೇ. 50ರಷ್ಟನ್ನು 50 ವರ್ಷದೊಳಗಿನ ವ್ಯಕ್ತಿಗಳಿಗೆ ಮೀಸಲಿಡಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷೀಯ ಅಭ್ಯರ್ಥಿ ಖರ್ಗೆ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next