ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರಿಗೆ ದೊಡ್ಡವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ರೂಢಿಯಾಗಿದೆ. ಹಾಗೆ ಮಾತನಾಡಿದರೆ ದೊಡ್ಡ ನಾಯಕನಾಗುತ್ತೇನೆ, ಪ್ರಸಿದ್ಧಿಗೆ ಬರುತ್ತೇನೆಂದು ಸಿದ್ದರಾಮಯ್ಯ ಭಾವಿಸಿದಂತಿದೆ. ಮುಂದೊಂದು ದಿನ ಅವರು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ವೀರ ಸಾವರ್ಕರ್ ಹಾಗೂ ಸ್ವಾತಂತ್ರ ಹೋರಾಟಗಾರರು, ಸೇನಾನಿಗಳ ಬಗ್ಗೆ ಕೀಳು ಅಭಿರುಚಿಯಲ್ಲಿ ಮಾತನಾಡುವುದು ಸರಿಯಲ್ಲ. ಅದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅವರ ಈ ನಾಟಕ ಬಹಳ ದಿನ ನಡೆಯುವುದಿಲ್ಲ. ಕಾಂಗ್ರೆಸ್ ನಾಯಕರೇ ಅವರ ವಿರುದ್ಧ ಮಾತ ನಾಡುತ್ತಿದ್ದಾರೆ. ಅದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು.
ಅವರ ನಾಯ ಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಅಸಮಾ ಧಾನವಿದೆ. ಅದನ್ನು ಸರಿಪಡಿಸಿ ಕೊಳ್ಳಲಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಬಗ್ಗೆಯೂ ಏಕವಚನ ದಲ್ಲಿಯೇ ಸಿದ್ದರಾಮಯ್ಯ ಮಾತನಾಡಿ ದ್ದಾರೆ. ನಾನು ಸಿದ್ದರಾಮಯ್ಯ ಅವರಂತೆ ಮಾತನಾಡಿದರೆ ಅದು ನನ್ನ ಸಣ್ಣತನವನ್ನು ತೋರಿಸುತ್ತದೆ. ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯನವರ ಮನೆ ಮೇಲೆ ಐಟಿ ದಾಳಿ ನಡೆಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ದಿನೇಶ ಗುಂಡೂರಾವ್ ಹೇಳುತ್ತಿ ದ್ದಾರೆ ಎಂದರೆ ಅವರಿಗೆ ಐಟಿಯವರು ಮಾಹಿತಿ ಕೊಟ್ಟಿರುವ ಸಾಧ್ಯತೆಯಿದೆ. ಐಟಿ, ಇ.ಡಿ ತಮ್ಮದೆಯಾದ ಮಾಹಿತಿ ಆಧರಿಸಿ ದಾಳಿ ಮಾಡುತ್ತವೆ. ಆದರೆ, ಸಿದ್ದರಾಮಯ್ಯ ವಿರುದ್ಧ ದಿನೇಶ್ ಕುತಂತ್ರ ನಡೆಸಿದ್ದಾರೆ. ಅವರೇ ಐಟಿಗೆ ದೂರು ಕೊಟ್ಟು, ಮಾಹಿತಿ ನೀಡಿ ದಾಳಿ ಮಾಡಿಸಬಹುದು ಎಂದರು.
ಮಹದಾಯಿ ಇತ್ಯರ್ಥಕ್ಕೆ ಗೋವಾ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಗೋವಾದ ಬಿಜೆಪಿ ಮುಖ್ಯಮಂತ್ರಿ ಮಾತುಕತೆಗೆ ಒಪ್ಪಿದರೆ, ಕಾಂಗ್ರೆಸ್ ಧರಣಿ ಮಾಡುತ್ತಿದ್ದು, ಇದು ನಿಲ್ಲಬೇಕಿದೆ.
-ಜಗದೀಶ ಶೆಟ್ಟರ್, ಸಚಿವ