Advertisement

ಇದು ಕಾಮಿಡಿ-ಥ್ರಿಲ್ಲರ್‌ ಜಿಲೇಬಿ ಕಥೆ ಇಲ್ಲ; ಘಟನೆಗಳೇ ಎಲ್ಲ

01:47 PM Sep 16, 2017 | |

ನಿರ್ದೇಶಕ ಲಕ್ಕಿಶಂಕರ್‌ ಈಗ ಎಲ್ಲರಿಗೂ “ಜಿಲೇಬಿ’ ತಿನ್ನಿಸೋಕೆ ರೆಡಿಯಾಗಿದ್ದಾರೆ. ಅಂದರೆ, ಅವರ ನಿರ್ದೇಶನದ ಹೊಸ ಸಿನಿಮಾ “ಜಿಲೇಬಿ’ ಚಿತ್ರವನ್ನು ತೋರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದರೆ, ಇದೊಂದು ಪಕ್ಕಾ ಪಡ್ಡೆ ಹುಡುಗರ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಹಾಗಿದ್ದರೂ, ಲಕ್ಕಿಶಂಕರ್‌ ಈ ಚಿತ್ರದ ಮೂಲಕ ಒಂದಷ್ಟು ಹೊಸ ವಿಷಯಗಳನ್ನು ಹೇಳುವ ಮೂಲಕ ಸಣ್ಣದ್ದೊಂದು ಸಂದೇಶ ಕೊಡಲು ಹೊರಟಿದ್ದಾರೆ. ಈ ಚಿತ್ರದ ಹೈಲೆಟ್‌ ಪೂಜಾಗಾಂಧಿ. ಅವರಿಲ್ಲಿ ಕಾಲ್‌ಗ‌ರ್ಲ್ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಇದು ಮೂವರು ಬ್ಯಾಚ್ಯುಲರ್ ಹುಡುಗರ ನಡುವಿನ ಕಥೆ ಮತ್ತು ವ್ಯಥೆಯ ಚಿತ್ರಣ. “ಜಿಲೇಬಿ’ ಲಕ್ಕಿ ಶಂಕರ್‌ ಅವರ 6 ನೇ ಸಿನಿಮಾ. ಆ ನಿರ್ದೇಶಕ ಕಮ್‌ ನಿರ್ಮಾಪಕ ಲಕ್ಕಿ ಹೇಳ್ಳೋದೇನು ಗೊತ್ತಾ?

Advertisement

ಕಾಲ್‌ಗ‌ರ್ಲ್ ಮತ್ತು ಆ ಮೂವರು ಹುಡುಗರು!
“ಇದು ಮೂವರು ಹುಡುಗರ ಕಥೆ. ಚಿತ್ರದಲ್ಲಿ ಯಶಸ್‌ ಸೂರ್ಯ, ನಾಗೇಂದ್ರ ಮತ್ತು ವಿಜಯ್‌ ಚೆಂಡೂರ್‌ ಬ್ಯಾಚ್ಯುಲರ್‌ ಹುಡುಗರ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಹಿರಿಯ ಕಲಾವಿದರಾದ ದತ್ತಣ್ಣ, ತಬಲ ನಾಣಿ, ಶೋಭರಾಜ್‌, ಬಿರಾದಾರ್‌ ಇತರರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಒಂದು ಕಥೆ ಅನ್ನೋದೇನು ಇಲ್ಲ. ಕೆಲ ಘಟನೆಗಳನ್ನಿಟ್ಟುಕೊಂಡು, ಆ ಘಟನೆಗಳ ಮೂಲಕವೇ ಸಿನಿಮಾ ತೋರಿಸಲಾಗುತ್ತಿದೆ. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗ, ಕಥೆಯ ಲೈನ್‌ ಅರ್ಥವಾಗುತ್ತೆ. ಕ್ಲೈಮ್ಯಾಕ್ಸ್‌ಗೆ ಬಂದಾಗಲೇ ಕಥೆ ಶುರುವಾಗುತ್ತೆ! ಹಾಗಾಗಿ ನನ್ನ ಮಟ್ಟಿಗೆ ಇದು ನನ್ನ ಮೊದಲ ಪ್ರಯೋಗಾತ್ಮಕ ಸಿನಿಮಾ. ಇನ್ನು, ಚಿತ್ರದಲ್ಲಿ ಕಾಮಿಡಿ ಮತ್ತು ಥ್ರಿಲ್ಲರ್‌ ಮಿಕ್ಸ್‌ ಮಾಡಿದರೆ ಜೀರ್ಣವಾಗುವುದು ಕಷ್ಟ. ಇಲ್ಲಿ ತಮಾಷೆಗಳು ಹೋಗ್ತಾ ಹೋಗ್ತಾ ಥ್ರಿಲ್‌ ಜಾಸ್ತಿಯಾಗುತ್ತಾ ಹೋಗುತ್ತವೆ. ಇಡೀ ಸಿನಿಮಾ ಜರ್ನಿ ನಡೆಯುತ್ತಲೇ ಬೇರೆ ರೀತಿಯ ಕನ್ವರ್ಟ್‌ ಆಗುತ್ತಾ ಹೋಗುತ್ತದೆ. ಸಿನಿಮಾ ನೋಡಿ ಹೊರ ಬರುವಾಗ, ಈ ಚಿತ್ರ ಎಲ್ಲರ ಮನಸ್ಸಲ್ಲೂ ಬೇರೆ ರೀತಿಯಲ್ಲಿ ಉಳಿದುಕೊಳ್ಳುತ್ತದೆ’ ಎನ್ನುತ್ತಾರೆ ಲಕ್ಕಿ.

“ಜಿಲೇಬಿ’ ಚಿತ್ರ ನೋಡುವವರಿಗೆ ನ್ಯಾಚುರಲ್‌ ಫೀಲ್‌ ಬರುತ್ತದೆ. ಆ ಮಟ್ಟಿಗೆ ಚಿತ್ರವನ್ನು ಕಟ್ಟಿಕೊಡಲಾಗಿದೆ. ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾವನ್ನು  ಪಡ್ಡೆ ಹುಡುಗರು ಮತ್ತು ಕಾಲ್‌ಗ‌ರ್ಲ್ ಮೇಲೆ ಮಾಡುವುದು ಚಾಲೆಂಜಿಂಗ್‌ ಜಾಬ್‌. ಅದರಲ್ಲೂ ಒಂದು ಮನೇಲಿ 24 ಗಂಟೆಗಳ ಕಾಲ ಬ್ಯಾಚುಲರ್ ರೂಮ್‌ನಲ್ಲೇ ನಡೆಯೋ ಕಥೆ ಇದಾಗಿರುವುದರಿಂದ ಎಲ್ಲವೂ ಸೂಕ್ಷ್ಮವಾಗಿ ತೆರೆಯ ಮೇಲೆ ಮೂಡಿಬಂದಿವೆ. ಉಳಿದಂತೆ ಚಿತ್ರದ ದ್ವಿತಿಯಾರ್ಧ ಎರಡು ರೂಮ್‌ ಒಂದು ಹಾಲ್‌ನಲ್ಲಿ ಕಥೆ ಸಾಗುತ್ತದೆ. ಇದು ಹಾರರ್‌, ಸಸ್ಪೆನ್ಸ್‌ ಹೊಂದಿರುವ ಕಥೆ. ಅದರ ನಡುವೆಯೂ ಪಕ್ಕಾ ಯೂತ್ಸ್ಗೆಂದೇ ಮಾಡಿದಂತಹ ಚಿತ್ರವಿದು. ಈಗಿನ ಕಾಲದ ಪಡ್ಡೆ ಹುಡುಗರು ಮೆಜೆಸ್ಟಿಕ್‌, ಮಾರ್ಕೆಟ್‌ಗಳಲ್ಲಿ ಅಲೆದಾಡಿ ಅಲ್ಲಿ ಅನುಭವಿಸುವ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇಲ್ಲಿ ಸಾಕಷ್ಟು ವಿಭಿನ್ನ ಘಟನಾವಳಿಗಳನ್ನು ಕಾಣಬಹುದು. ಒಟ್ಟಾರೆ ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು.

ಒಂದೇ ಮನೆ ನಾಲ್ಕು ಪಾತ್ರ!
ಇದು ಟೆಕ್ನಿಕಲಿ ತುಂಬಾ ಚೆನ್ನಾಗಿ ಮೂಡಿಬಂದಿರುವ ಸಿನಿಮಾ. ಯಾಕೆಂದರೆ, ನಾಲ್ಕು ಪಾತ್ರಗಳನ್ನು ಒಂದೇ ಲೊಕೇಷನ್‌ನಲ್ಲಿ ಇಟ್ಟುಕೊಂಡು ಇಡೀ ಸಿನಿಮಾ ಮಾಡುವುದು ಚಾಲೆಂಜಿಂಗ್‌ ಜಾಬ್‌. ಇಲ್ಲಿ ಎಲ್ಲಾ ರೀತಿಯ ಅಂಶಗಳೂ ಒಳಗೊಂಡಿವೆ. ಸಸ್ಪೆನ್ಸ್‌ ಮತ್ತು ಥ್ರಿಲ್‌ ನಡುವೆ ಒಂದೊಳ್ಳೆಯ ಮನರಂಜನೆಸಿನಿಮಾ ಇದಾಗಲಿದ್ದು, ಇಲ್ಲಿ ಕ್ಯಾಮೆರಾವೇ ಹೈಲೆಟ್‌. ಎಲ್ಲಾ ಸಿನಿಮಾಗಳಂತೆ ಸುಮ್ಮನೆ ಟೆಕ್ನೀಕಲಿ ಕ್ಯಾಮೆರಾ ಹಿಡಿದು ಬ್ಯೂಟಿಗಾಗಿ ಸಿನಿಮಾ ಮಾಡಿಲ್ಲ. ಏನೇನು ರಿಯಲ್‌ ಫೀಲ್‌ ಆಗುತ್ತೋ, ಅದನ್ನೇ ಪ್ಲೇ ಮಾಡಿಕೊಂಡು ಹೋಗಿದ್ದೇವೆ.  ತುಂಬಾ ರಿಯಾಲಿಸ್ಟಿಕ್‌ ಆಗಿ ಮಾಡಿದರೆ ಅದು ಕಲಾತ್ಮಕ ಸಿನಿಮಾ ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ಕ್ಯಾಮೆರಾ ಇರಬಹುದು, ಎಡಿಟಿಂಗ್‌ ಕೆಲಸವಾಗಬಹುದು. ಅತೀ ಮುಖ್ಯವಾಗಿ ಸಿನಿಮಾದ ಚಿತ್ರಕಥೆ ಆಗಿರುಬಹುದು ಎಲ್ಲವೂ ವಿಭಿನ್ನವಾಗಿದೆ. ಇಡೀ ಸಿನಿಮಾ ಎರಡು ಗಂಟೆ ಅವಧಿಯೊಳಗೆ ಮುಗಿಯುತ್ತದೆ. ಆ ಅವಧಿಯ ನಡುವೆ ಎಲ್ಲೂ ಬೋರ್‌ ಎನಿಸುವುದಿಲ್ಲ. ಇನ್ನು, ಚಿತ್ರದಲ್ಲಿ ಯಶಸ್‌ ಅವರದು ಬಿಲ್ಡಪ್‌ ಹೀರೋನ ಪಾತ್ರ ನಿರ್ವಹಿಸಿದ್ದಾರೆ. ವಿಜಯ್‌ ಚೆಂಡೂರ್‌ ಎಂದಿನಂತೆ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮತ್ತೂಬ್ಬ ಹೀರೋ ನಾಗೇಂದ್ರ ಅವರು ಇಲ್ಲಿ ದೈವ ಭಕ್ತನ ಪಾತ್ರ ನಿರ್ವಹಿಸಿದ್ದರೂ, ಅವರು ಕೆಟ್ಟ ಸಮಾಚಾರವೆ°à ಹೆಚ್ಚಾಗಿ ಯೋಚನೆ ಮಾಡಿಕೊಂಡಿರುವಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ ಅವರಿಲ್ಲಿ ತುಂಬಾ ಸ್ಟ್ರಿಕ್ಟ್ ಆಗಿರುವಂತಹ ಮನೆಯ ಮಾಲೀಕನ ಪಾತ್ರ ನಿರ್ವಹಿಸಿದ್ದಾರೆ. 

ಇಡೀ ಸಿನಿಮಾದ ಒನ್‌ಲೈನ್‌ ಸ್ಟೋರಿ ಹೇಳುವುದಾದರೆ, ಮೂವರು ಬ್ಯಾಚ್ಯುಲರ್ ಹುಡುಗರು ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಒಂದೇ ರೂಮ್‌ನಲ್ಲಿ ವಾಸವಿರುತ್ತಾರೆ. ಒಂದು ಸನ್ನಿವೇಶದಲ್ಲಿ ಅವರಿಗೆ ದುಬೈಗೆ ಹೋಗುವ ಅವಕಾಶ ಒದಗಿ ಬರುತ್ತದೆ. ಅವರು ಹೋಗುತ್ತಾರೋ, ಇಲ್ಲವೋ ಎಂಬುದೇ ಸಿನಿಮಾದ ಸಸ್ಪೆನ್ಸ್‌. ಈ ಚಿತ್ರದ ಬಳಿಕ ಇನ್ನೊಂದು ಪಾರ್ಟ್‌ 2 ಕೂಡ ರೆಡಿಯಾಗಿದೆ. ಆ ಚಿತ್ರದಲ್ಲಿ ಅವರು ದುಬೈಗೆ ಹೋಗಿ ಏನೆಲ್ಲಾ ಮಾಡುತ್ತಾರೆ ಅನ್ನೋದು ಆ ಚಿತ್ರದ ಕಥೆ ಅನ್ನುತ್ತಾರೆ ಲಕ್ಕಿ ಶಂಕರ್‌.

Advertisement

ಜಿಲೇಬಿ ಹಿಂದೆ ಸ್ಟ್ರಾಂಗ್‌ ಟೆಕ್ನೀಷಿಯನ್ಸ್‌
ಚಿತ್ರಕ್ಕೆ ಜೆ.ಎಂ. ಆಕಿಟೆಕ್ಟ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಗೇಂದ್ರಪ್ರಸಾದ್‌, ತಿಪ್ಪೇಸ್ವಾಮಿ ಮತ್ತು ಲಕ್ಕಿಶಂಕರ್‌ ಕೂಡ ಗೀತೆ ರಚಿಸಿದ್ದಾರೆ. ಎಲ್ಲಾ ಹಾಡುಗಳು ಕೂಡ ಕಥೆಗೆ ಪೂರಕವಾಗಿಯೇ ಇವೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಶಿವಶಂಕರ್‌ ಫಿಲ್ಮ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಲಕ್ಕಶಂಕರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಿವುಕಬ್ಬಿಣ ಅವರ ಸಾಥ್‌ ಕೂಡ ಚಿತ್ರ ನಿರ್ಮಾಣಕ್ಕಿದೆ. ಎಂ.ಆರ್‌.ಸೀನು ಕ್ಯಾಮೆರಾ ಹಿಡಿದಿದ್ದಾರೆ. ಅವರು ಇಲ್ಲಿ ವಿಶೇಷ ಕ್ಯಾಮೆರಾ ಕೈಚಳಕ ಮಾಡಿರುವುದು ಇನ್ನೊಂದು ವಿಶೇಷವಂತೆ. ಜಿಮ್ಮಿ ಬಳಸದೆ, ಹೆಚ್ಚು ಸ್ಟಡಿ ಕ್ಯಾಮ್‌ ಇಲ್ಲದೆ ಶೂಟಿಂಗ್‌ ಮಾಡಲಾಗಿದೆ. ಚಿತ್ರಕ್ಕೆ ರವಿ ಕತ್ತರಿ ಹಿಡಿದಿದ್ದಾರೆ. ಈ ಸಿನಿಮಾದಲ್ಲಿ ಪೂಜಾಗಾಂಧಿ ಸಖತ್‌ ಆಗಿ ನಟಿಸಿದ್ದು, ಪಕ್ಕಾ ಗ್ಲಾಮರ್‌ ನಟಿ ಎನಿಸಿಕೊಂಡಿದ್ದಾರೆ. ಹೆಚ್ಚು ಆಡಂಬರ ಇಲ್ಲದ, ನ್ಯಾಚ್ಯುರಲ್‌ ಪಾತ್ರದು. ಪಾತ್ರಕ್ಕೆ  ಏನು ಬೇಕೋ ಅದನ್ನಷ್ಟೇ ಮಾಡಿದ್ದಾರೆ ಎಂಬುದು ನಿರ್ದೇಶಕರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next