Advertisement

ಎಲ್ಲರೂ ಒಂದೇ ಕನಸು ಕಾಣುವುದು ನಿರರ್ಥಕ

11:41 AM Oct 09, 2017 | Team Udayavani |

ಭಾಲ್ಕಿ: ವಿದ್ಯಾರ್ಥಿಗಳೆಲ್ಲರೂ ಒಂದೇ ಕನಸು ಕಾಣುವುದು ನಿರರ್ಥಕ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌.ಸೆಲ್ವಮಣಿ ಹೇಳಿದರು. ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ಜರುಗಿದ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಇಂದಿನ ವಿದ್ಯಾರ್ಥಿಗಳು ಕೇವಲ ಡಾಕ್ಟರ್‌, ಇಂಜಿನಿಯರ್‌ ಮಾತ್ರ ಆಗಬೇಕೆಂದು ಕನಸು ಕಾಣುತ್ತಾರೆ. ಯಾರೊಬ್ಬರು ಶ್ರೇಷ್ಠ ವಿದ್ವಾಂಸ, ಸಾಹಿತಿ, ಆರ್ಥಿಕ ತಜ್ಞ, ರಾಷ್ಟ್ರಪತಿ, ಪ್ರಧಾನಮಂತ್ರಿ ಆಗಬೇಕು ಎಂದು ಮಹೋನ್ನತ ಮಹತ್ವಕಾಂಕ್ಷೆ ಹೊಂದುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೀವನದಲ್ಲಿ ಉತ್ತಮ ಗುರಿ ಇರಬೇಕು, ಗುರಿಗೆ ತಕ್ಕಂತೆ ಗುರುಗಳ ಮಾರ್ಗದರ್ಶನ ಬೇಕು. ಅಂದಾಗ ಮಾತ್ರ ಉತ್ತಮ ಬದುಕು ಕಂಡು ಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಅಂತಃ ಶಕ್ತಿಯನ್ನು ಅರಿತಲ್ಲಿ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಆಗಲು ಅಗತ್ಯವಾಗಿರುವ ಯುಪಿಎಸ್‌ಸಿ ಪರೀಕ್ಷೆಯನ್ನು ಸುಲಭವಾಗಿ ಪಾಸ್‌ ಮಾಡಬಹುದು. ಪ್ರತಿವರ್ಷ ನಡೆಯುವ ಯುಪಿಎಸ್‌ಸಿ ಪರೀಕ್ಷೆಗೆ 10 ಲಕ್ಷ ಜನರು ಹಾಜರಾಗುತ್ತಾರೆ.

ಆದರೆ, ಕೊನೆಯ ಹಂತದ ಸಂದರ್ಶನಕ್ಕೆ ಕೇವಲ 1000 ವಿದ್ಯಾರ್ಥಿಗಳು ಅರ್ಹತೆ ಪಡೆಯುತ್ತಾರೆ. ಅದರಲ್ಲಿ 100 ಜನರಿಗೆ ಮಾತ್ರ ಐಎಎಸ್‌ ಹುದ್ದೆ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಐಎಎಸ್‌ ಅಧಿಕಾರಿಯಾಗುವ ಕನಸು ಬಿತ್ತಿದರು.

ಡಾ| ಅಬ್ದುಲ್‌ ಕಲಾಂ ಅವರು ಹೇಳಿದಂತೆ ಜೀವನದ ಬಗ್ಗೆ ಪ್ರತಿಯೊಬ್ಬರು ಉನ್ನತ ಕನಸುಗಳನ್ನು ಕಾಣಬೇಕು. ಅವುಗಳನ್ನು ಸಾಕಾರಗೊಳಿಸಲು ನಿತ್ಯ ಅವಿರತ ಶ್ರಮ ವಹಿಸಬೇಕು. ಭಗವದ್ಗೀತೆಯಲ್ಲಿ ತಿಳಿಸಿರುವಂತೆ ನಮ್ಮ ಆಲೋಚನೆ, ಯೋಚನೆಗಳಿಗೆ ತಕ್ಕಂತೆ ವ್ಯಕ್ತಿತ್ವ ರೂಪುಗೊಳುತ್ತದೆ. ಹಾಗಾಗಿ ಎಲ್ಲರೂ ಉತ್ತಮ, ಧನಾತ್ಮಕ ವಿಚಾರಗಳನ್ನು ಹೊಂದಬೇಕು ಎಂದು ಹೇಳಿದರು.

ಸ್ವತ್ಛ ಭಾರತ ಅಭಿಯಾನದ ನೋಡಲ್‌ ಅಧಿಕಾರಿ ಗೌತಮ ಅರಳಿ ಮಾತನಾಡಿ, ಸ್ವಾಮಿ ವಿವೇಕಾನಂದರು ನಿನ್ನ ಭವಿಷ್ಯದ ನಿರ್ಮಾತೃ ನೀನೇ ಎಂದು ತಿಳಿಸಿದ್ದಾರೆ. ಎಲ್ಲರೂ
ಇದನ್ನರಿತು ಗುರಿ ಈಡೇರುವವರೆಗೆ ವಿರಮಿಸಬಾರದು. ನಾವು ಇತರರಂತಾಗಲೂ ಪ್ರಯತ್ನಿಸದೇ, ನಮ್ಮಂತೆ ಇತರರು ಆಗಬೇಕು ಎಂದು ಹಂಬಲ ವ್ಯಕ್ತಪಡಿಸುವಂತೆ ಮಹತ್‌ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಇದೇ ವೇಲೆ ಜಿಪಂ ಸಿಇಒ ಡಾ| ಆರ್‌.ಸೆಲ್ವಮಣಿ ಮತ್ತು ಗಣ್ಯರು ಗುರುಕುಲದಲ್ಲಿರುವ ಎಸ್‌ಟಿಪಿ, ಸ್ವದೇಶಿ ದತ್ತು ಕೇಂದ್ರ, ತುರುಗಾಹಿ ರಾಮಣ್ಣ ಗೋಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು. ಆಡಳಿತಾಧಿ ಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಹಣಮಂತ ಜ್ಯಾಂತಿಕರ್‌, ರವಿ
ಬಿರಾದರ, ಲಕ್ಷ್ಮೀಕಾಂತ ನಾಟೇಕರ್‌, ದಿನೇಶ, ಮುಖ್ಯಗುರು ಬಸವರಾಜ ಪ್ರಭಾ, ದತ್ತಾತ್ರಿ ಗುಮ್ತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next